Belagavi: ಕೃಷಿ ಚಟುವಟಿಕೆಗೆ ಬಳಕೆಯಾಗಬೇಕಿದ್ದ ಜಾಗದಲ್ಲಿ ಬಾರ್, ಕಂಡು ಕಾಣದಂತೆ ಕುಳಿತ ಲೋಕೋಪಯೋಗಿ ಇಲಾಖೆ

| Updated By: ವಿವೇಕ ಬಿರಾದಾರ

Updated on: Jan 13, 2023 | 12:04 PM

ಕೃಷಿ ಚಟುವಟಿಕೆ ಉದ್ದೇಶಕ್ಕೆ ಕರಾರು ಮಾಡಿಕೊಂಡು ಖಾಸಗಿ ವ್ಯಕ್ತಿಗೆ ನೀಡಿದ್ದ 34.24ಗುಂಟೆ ಜಾಗದಲ್ಲಿ ಬಾರ್, ಲಾಡ್ಜ್, ಹೋಟೆಲ್, ಹಾರ್ಡವೇರ್ ಶಾಪ್ ನಿರ್ಮಾಣವಾಗಿವೆ.

Belagavi: ಕೃಷಿ ಚಟುವಟಿಕೆಗೆ ಬಳಕೆಯಾಗಬೇಕಿದ್ದ ಜಾಗದಲ್ಲಿ ಬಾರ್, ಕಂಡು ಕಾಣದಂತೆ ಕುಳಿತ ಲೋಕೋಪಯೋಗಿ ಇಲಾಖೆ
ಬೆಳಗಾವಿ
Follow us on

ಬೆಳಗಾವಿ: ಬೆಳಗಾವಿಯ ಲೋಕೋಪಯೋಗಿ ಇಲಾಖೆ (Public works department) ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹಾನಿ‌ಯಾಗುತ್ತಿದೆ. ಸರ್ಕಾರದ ಖಜಾನೆಗೆ ಸೇರಬೇಕಿದ್ದ ಹಣ ಖಾಸಗಿ ವ್ಯಕ್ತಿ ಖಜಾನೆಗೆ ಸೇರುತ್ತಿದೆ. ನಗರದ ಹೃದಯ ಭಾಗದಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿರುವ 34.24ಗುಂಟೆ ಜಾಗವನ್ನು ಇಲಾಖೆ 1966ರಲ್ಲಿ ಕೃಷಿ ಚಟುವಟಿಕೆ ಉದ್ದೇಶಕ್ಕೆ ಕರಾರು ಮಾಡಿಕೊಂಡು ಖಾಸಗಿ ವ್ಯಕ್ತಿ ಪಿ.ಆರ್ ಹಣಮನ್ನವರ್ ಎಂಬುವವರಿಗೆ ಲೀಸ್​​ ನೀಡಿತ್ತು. ಕೃಷಿ ಭವನ, ಶಿಥಲೀಕರಣ ಘಟಕ, ಮಣ್ಣು ಪರೀಕ್ಷಣಾ ಕೇಂದ್ರ, ಬೀಜ-ಗೊಬ್ಬರ ಕೇಂದ್ರ, ರೈತ ವಿಶ್ರಾಂತಿ ಗೃಹ, ರೈತ ಸಮುದಾಯ ತರಬೇತಿ ಕೇಂದ್ರದ ಚಟುವಟಿಕೆ ಉದ್ದೇಶಕ್ಕೆ ನೀಡಲಾಗಿತ್ತು. ಆದರೆ ಹಣಮನ್ನವರ್ ಲೀಸ್ ಪಡೆದು ಕಟ್ಟಡ ಕಟ್ಟಿ ಮರೆತು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ. ರೈತರಿಗೆ ಮೀಸಲಿಟ್ಟ ಜಾಗದಲ್ಲಿ ಬಾರ್, ಲಾಡ್ಜ್, ಹೋಟೆಲ್, ಹಾರ್ಡವೇರ್ ಶಾಪ್ ಸೇರಿ ಹಲವು ಶಾಪ್‌ಗಳನ್ನು ತೆರಯಲಾಗಿದೆ.

ಇನ್ನೂ 50ಕೋಟಿ ಮೌಲ್ಯದ ಕಟ್ಟಡವನ್ನು ಕೇವಲ 42ಸಾವಿರಕ್ಕೆ ಬಾಡಿಗೆಗೆ ನೀಡಲಾಗಿದೆ. ಪಿ.ಆರ್ ಹಣಮನ್ನವರ್ 1977-87ರಲ್ಲಿ 1,050ರೂ ತಿಂಗಳ ಬಾಡಿಗೆ, 1987-92ರ ಅವಧಿಯಲ್ಲಿ 4,100 ರೂ, 1992-97ರವರೆಗೆ 8000 ರೂ, 1997ರಿಂದ 2007ರವರೆಗೆ 11000 ರೂ, 2007-2008ರವರೆಗೆ 17,815 ರೂ, 2008-09ರವರೆಗೆ 21,556ರೂ, 2010-11 ಅವಧಿಯಲ್ಲಿ 23,712ರೂ, 2011-12ರವರೆಗೆ 26,083ರೂ, 2012-13ರವರೆಗೆ 28,691ರೂ, 2013-14ರ ಅವಧಿಯಲ್ಲಿ 31,560ರೂ, 2014-15ರವರೆಗೆ 34,716ರೂ, 2015-16ರವರೆಗೆ 38,188ರೂ, 2016-17ರವರೆಗೆ 42,007 ರೂ.ಗೆ ಲೊಕೋಪಯೋಗಿ ಇಲಾಖೆಗೆ ಬಾಡಿಗೆ ನೀಡಿದ್ದರು.

ಇದನ್ನೂ ಓದಿ: ಆರ್​ಟಿಐ ಕಾರ್ಯಕರ್ತ ಹತ್ಯೆ ಪ್ರಕರಣ; ಕೋರ್ಟ್​​ಗೆ ಶರಣಾದ ಆರೋಪಿ ಪಿಡಿಒ ಎ.ಟಿ.ನಾಗರಾಜ್

ಇಷ್ಟು ಕಡಿಮೆ ಹಣಕ್ಕೆ ಬಾಡಿಗೆ ನೀಡಿರುವ ಸಂಗತಿ 2021ರಲ್ಲಿ ಬೆಳಕಿಗೆ

ಇಷ್ಟು ಕಡಿಮೆ ಹಣಕ್ಕೆ ಬಾಡಿಗೆ ನೀಡಿರುವ ಸಂಗತಿ 2021ರಲ್ಲಿ ಬೆಳಕಿಗೆ ಬಂದಿತ್ತು. ಕೋಟ್ಯಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ಹಾನಿಯಾದರೂ ಅಧಿಕಾರಿಗಳು ಗಪ್‌ಚುಪ್ ಇದ್ದರು. ಇದಕ್ಕೆ ಉತ್ತರಿಸದ ಹಿನ್ನೆಲೆ ಮತ್ತೆ 2022 ಜನವರಿಯಲ್ಲಿ ಕಟ್ಟಡ ಮಾಲಿಕನಿಗೆ ಕಟ್ಟಡ ತೆರವುಗೊಳಿಸದ ಹಿನ್ನೆಲೆ ಕೂಡಲೇ ಕಟ್ಟಡವನ್ನ ಕಾನೂನು ಬದ್ದವಾಗಿ ಲೋಕೋಪಯೋಗಿ ಇಲಾಖೆಗೆ ವಹಿಸುವಂತೆ ನೋಟೀಸ್ ನೀಡಲಾಗಿತ್ತು. ನೋಟೀಸ್ ನೀಡಿ ವರ್ಷ ಕಳೆದರೂ ಲೀಸ್‌ದಾರ ಹಣಮನ್ನವರ್ ಪ್ರತಿಕ್ರಿಯಿಸುತ್ತಿಲ್ಲ. ಕೋರ್ಟ್ ಮೂಲಕ ತಡೆಯಾಜ್ಞೆ ತಂದು ಮತ್ತೆ ತನ್ನ ವ್ಯವಹಾರ ಮುಂದುವರೆಸಿದ್ದಾನೆ. ಸದ್ಯ ರೈತರು ಅಧಿಕಾರಿಗಳು ಮತ್ತು ಹಣಮನ್ನವರ್ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದಾಖಲೆ ನೀಡಿ, ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ಯಾಂಟ್ರೋ ರವಿಗಾಗಿ 11ನೇ ದಿನವೂ ಮುಂದುವರೆದ ಶೋಧ: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಿನೂತನ ಪ್ರತಿಭಟನೆ

ಕಳೆದ ನಾಲ್ಕು ವರ್ಷದಿಂದ ಬಾಡಿಗೆ ಹಣ ಕೂಡ ಕಟ್ಟದೆ ಮೋಸ

ಪ್ರಶಾಂತ್ ಹಣಮನ್ನವರ್‌ ಕಳೆದ 4 ವರ್ಷದಿಂದ ಬಾಡಿಗೆ ಹಣ ಕೂಡ ಕಟ್ಟದೆ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾನೆ. 2017ರ ವರೆಗೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಣಮನ್ನವರ್ ಬಾಡಿಗೆ ಕಟ್ಟಿದ್ದನು. 2017ರಿಂದ ಈಚೆಗೆ ಹಣಮನ್ನವರ್ ಒಂದು ಪೈಸೆಯೂ ಬಾಡಿಗೆ ಕಟ್ಟದೇ ರಾಜಾರೋಷವಾಗಿ ಮಳಿಗೆ ನಡೆಸುತ್ತಿದ್ದಾರೆ. ಇದಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೇವಲ ನೋಟೀಸ್ ನೀಡಿ ಸುಮ್ಮನೆ ಕುಳಿತಿದ್ದಾರೆ. ಈಗ ಅಧಿಕಾರಿಗಳು ಸಹಿತ ಲೀಸ್‌ದಾರರ ಜತೆಗೆ ಕೈಜೋಡಿಸಿ ಸುಮ್ಮನಾದರಾ ಎಂಬ ಪ್ರಶ್ನೆ ಮೂಡಿದೆ. ಈ ವಿಚಾರ ಗೊತ್ತಿದ್ದರೂ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಜಾಣ ಮೌನ ವಹಿಸಿದ್ದಾರೆ. ಇನ್ನಾದರೂ ಕೂಡಲೇ ಎಚ್ಚೆತ್ತುಕೊಂಡು ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:01 pm, Fri, 13 January 23