ಕಾಗವಾಡದಲ್ಲಿ 3 ತಿಂಗಳಿಂದ ಪಂಪ್ ಸೆಟ್ ಕೇಬಲ್ ಕಳ್ಳತನ, ಇದು ಪೊಲೀಸರ ವೈಫಲ್ಯ – ಮಾಜಿ ಶಾಸಕ ರಾಜು ಕಾಗೆ ಗರಂ
ಕಾಗವಾಡ ತಾಲೂಕಿನ ಸುಮಾರು 10 ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿಂದ ಸರಣಿ ಕಳ್ಳತನ ನಡೆಯುತ್ತಿದೆಯಂತೆ. ಈ ಬಗ್ಗೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಮಾಜಿ ಶಾಸಕ ರಾಜು ಕಾಗೆ ಕೇಬಲ್ ಕಳ್ಳತನ ವಿಷಯ ಬಹಿರಂಗ ಪಡಿಸಿದ್ದಾರೆ.
ಚಿಕ್ಕೋಡಿ: ಮಾಜಿ ಶಾಸಕ ರಾಜು ಕಾಗೆ ಸೇರಿದಂತೆ 18 ಜನ ರೈತರ ಪಂಪ್ ಸೆಟ್ ಕೇಬಲ್ ಕಳ್ಳತನವಾಗಿದೆ ಎಂದು ಮಾಜಿ ಶಾಸಕ ರಾಜು ಕಾಗೆ ಆಕ್ರೋಶ ಹೊರ ಹಾಕಿದ್ದಾರೆ. ಕಾಗವಾಡ ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದ ಸುಮಾರು 10 ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆಯುತ್ತಿದೆಯಂತೆ. ಹೀಗಾಗಿ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ರಾಜು ಕಾಗೆ ಗರಂ ಆಗಿದ್ದಾರೆ.
ಕಾಗವಾಡ ತಾಲೂಕಿನ ಸುಮಾರು 10 ಗ್ರಾಮಗಳಲ್ಲಿ ಕಳೆದ ಮೂರು ತಿಂಗಳಿಂದ ಸರಣಿ ಕಳ್ಳತನ ನಡೆಯುತ್ತಿದೆಯಂತೆ. ಈ ಬಗ್ಗೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಮಾಜಿ ಶಾಸಕ ರಾಜು ಕಾಗೆ ಕೇಬಲ್ ಕಳ್ಳತನ ವಿಷಯ ಬಹಿರಂಗ ಪಡಿಸಿದ್ದಾರೆ. ಕಳೆದ ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೆ ಐನಾಪುರ, ಉಗಾರ, ಮೋಳೆ, ಮಂಗಸೂಳಿ, ಕೆಂಪವಾಡ, ಲೊಕುರ, ಕೃಷ್ಣಾ-ಕಿತ್ತೂರ, ಕಾಗವಾಡ, ಶೇಡಬಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆಯುತ್ತಿದೆ. ಲಕ್ಷಾಂತರ ರೂ ಮೌಲ್ಯದ ಬೆಳ್ಳಿ, ಬಂಗಾರ ಸೇರಿದಂತೆ ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ. ಈ ಕುರಿತು ಸಾರ್ವಜನಿಕರು ಕಾಗವಾಡ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರೂ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಉಗಾರ ಬಿಕೆ ಹಾಗೂ ಉಗಾರ ಖುರ್ದ ಗ್ರಾಮಗಳಲ್ಲಿಯ ರೈತರು ಕೃಷ್ಣಾ ನದಿಗೆ ಪಂಪ್ ಸೆಟ್ಗಳನ್ನು ಅಳವಡಿಸಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಕೇಬಲ್ ಕಳ್ಳತನವಾಗಿವೆ. ನನ್ನ ಪಂಪ್ ಸೆಟ್ ಕೇಬಲ್ ಮೂರು ಬಾರಿ ಕಳ್ಳತನವಾಗಿದೆ. ಹಲವಾರು ಬಾರಿ ಮೊಬೈಲ್ ಮೂಲಕ ಕರೆ ಮಾಡಿ ಠಾಣೆಗೆ ದೂರು ನೀಡಿದ್ರು, ಇದುವರೆಗೆ ಕಳ್ಳರನ್ನು ಬಂಧಿಸಿಲ್ಲ. ಕಾಗವಾಡ ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಬುಧವಾರ ಮಧ್ಯ ರಾತ್ರಿ ಮತ್ತೇ ಉಗಾರ ಗ್ರಾಮದಲ್ಲಿ ಮಾಜಿ ಶಾಸಕ ರಾಜು ಕಾಗೆ ಸೇರಿದಂತೆ 18 ಜನ ರೈತರು ಅಳವಡಿಸಿದ ಕೇಬಲ್ ಕಳ್ಳತನವಾಗಿವೆ ಎಂದು ರಾಜು ಕಾಗೆ ತಿಳಿಸಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ ತಂಡಗಳ ಚಿಂತೆ ಹೆಚ್ಚಿಸಿದ ಸ್ಟಾರ್ ಆಟಗಾರರ ಗಾಯದ ಸಮಸ್ಯೆ..!
Published On - 5:57 pm, Thu, 17 March 22