ಸಂತೋಷ್ ಆತ್ಮಹತ್ಯೆ ಪ್ರಕರಣ: ನಮಗೆ ಸರ್ಕಾರದ ಮೇಲೆ ಬಹಳ ನಂಬಿಕೆ ಇತ್ತು; ಮೃತ ಸಂತೋಷ ಪಾಟೀಲ್ ಸಹೋದರ ಪ್ರಶಾಂತ್ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 21, 2022 | 8:28 AM

ಈಶ್ವರಪ್ಪ ಅವರ ಮನೆಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ ಸಿಹಿನೂ ತಿನ್ನಿಸಿದ್ದಾರೆ. ನಮ್ಮದು ಸೂತಕದ ಮನೆ, ಅಲ್ಲಿ ಸಿಹಿ ತಿಂತಾರೇ ಅಂದರೆ ಹಿರಿಯ ಮನುಷ್ಯ ವಿಚಾರ ಮಾಡಬೇಕು.

ಸಂತೋಷ್ ಆತ್ಮಹತ್ಯೆ ಪ್ರಕರಣ: ನಮಗೆ ಸರ್ಕಾರದ ಮೇಲೆ ಬಹಳ ನಂಬಿಕೆ ಇತ್ತು; ಮೃತ ಸಂತೋಷ ಪಾಟೀಲ್ ಸಹೋದರ ಪ್ರಶಾಂತ್ ಹೇಳಿಕೆ
ಮೃತ ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್
Follow us on

ಬೆಳಗಾವಿ: ನಮಗೆ ಸರ್ಕಾರದ ಮೇಲೆ ಬಹಳ ನಂಬಿಕೆ ಇತ್ತು. ನಮ್ಮ ತಮ್ಮ ಮೃತಪಟ್ಟ ದಿನ ಮೂರರಿಂದ ನಾಲ್ಕು ಗಂಟೆ ಮೊಬೈಲ್ ಆನ್ ಇದೆ. ಈಗ ಫಿರ್ಯಾದಿದಾರರಿಗೆ ಗೊತ್ತಿಲ್ಲದ ಹಾಗೇ ಅವರು ಬಿ ರಿಪೋರ್ಟ್ (B Report) ಹೇಗೆ ಸಲ್ಲಿಸುತ್ತಾರೆ ಎಂದು ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಟಿವಿ9ಗೆ ಸಂತೋಷ ಪಾಟೀಲ್ ಸಹೋದರ ಪ್ರಶಾಂತ್ ಪಾಟೀಲ್ ಹೇಳಿಕೆ ನೀಡಿದರು. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಕೇಸ್ ಬಿ ರಿಪೋರ್ಟ್ ಸಲ್ಲಿಕೆ ವಿಚಾರವಾಗಿ ಅವರು ಮಾತನಾಡಿದ್ದು, ಕಾಲಾವಕಾಶ ಕೇಳಿದರೆ ನೀವು ಬಂದಿಲ್ಲ, ನಾವು ಬಿ ರಿಪೋರ್ಟ್ ಸಲ್ಲಿಸುತ್ತಿದ್ದೇವೆ ಅಂತಾ ಹೇಳಿ 159ಪಾರ್ಮ್ ನಮಗೆ ಕಳುಹಿಸಬೇಕಿತ್ತು. ತರಾತುರಿಯಲ್ಲಿ ರಿಪೋರ್ಟ್ ಸಲ್ಲಿಸಿದ್ದಾರೆ. ತನಿಖಾಧಿಕಾರಿಗಳ ಮೇಲೆ ಒತ್ತಡ ಇದೆ, ಸಾಕ್ಷಿ ನಾಶ ಮಾಡಿದ್ದಾರೆ. ಎಫ್‌ಎಸ್‌ಎಲ್ ರಿಪೋರ್ಟ್ ಕೂಡ ಬಂದಿಲ್ಲ. ಬಿಜೆಪಿ ಕಾರ್ಯಕರ್ತನಿಗೆ ಇಂತಹ ದುರ್ದೈವ ಪರಿಸ್ಥಿತಿ ಬಂದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಸಹೋದರ ಪ್ರಶಾಂತ್ ಪಾಟೀಲ್ ಪ್ರಶ್ನಿಸಿದರು.

ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್‌ ಸಾವಿನ ಕೇಸ್‌ನಲ್ಲಿ ಕೆ.ಎಸ್​. ಈಶ್ವರಪ್ಪಗೆ ಕ್ಲೀನ್‌ಚಿಟ್‌; ಟಿವಿ9 ಮುಂದೆ ಕಣ್ಣೀರು ಹಾಕಿದ ಮೃತ ಸಂತೋಷ್‌ ಪತ್ನಿ

ತನಿಖಾ ಅಧಿಕಾರಿಗಳ ಬಳಿ ನಾವು 23ರಂದು ಹೋಗುತ್ತಿದ್ದೇವೆ. ಉಡುಪಿಗೆ ಹೋದಾಗ ಸಾಕ್ಷಿಗಳನ್ನ ಕೂಡ ಒದಗಿಸುತ್ತೇವೆ. ಇದಕ್ಕೆ  ಹಿಂಡಲಗಾ ಗ್ರಾ.ಪಂ ಅಧ್ಯಕ್ಷ, ಬೈಲಹೊಂಗಲ ಸ್ವಾಮೀಜಿ ಸಾಕ್ಷಿ. ಅವರನ್ನ ಕರೆಯಿಸಿ ಇವರು ಇನ್ನೂ ವಿಚಾರಣೆ ಮಾಡಿಲ್ಲ. ನಾವು ಪೋನ್ ಮಾಡಿದರೇ ಪೊಲೀಸರು ಯಾರು ರಿಸೀವ್ ಮಾಡಿಲ್ಲ. ಈಶ್ವರಪ್ಪ ಅವರ ಮನೆಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ ಸಿಹಿನೂ ತಿನ್ನಿಸಿದ್ದಾರೆ. ನಮ್ಮದು ಸೂತಕದ ಮನೆ, ಅಲ್ಲಿ ಸಿಹಿ ತಿಂತಾರೇ ಅಂದರೆ ಹಿರಿಯ ಮನುಷ್ಯ ವಿಚಾರ ಮಾಡಬೇಕು. ಇದನ್ನ ನಾವು ಚಾಲೆಂಜ್ ಆಗಿ ತಗೊಂಡು ಮುಂದೆ ಫೈಟ್ ಮಾಡುತ್ತೇವೆ. ನಮ್ಮ ತಮ್ಮನ ಸಾವಿಗೆ ನ್ಯಾಯ ಬೇಕು. ಸಿಬಿಐ ತನಿಖೆಗೂ ಒತ್ತಾಯ ಮಾಡುತ್ತೇವೆ. ಸರ್ಕಾರಿ ನೌಕರಿ, ಕಾಮಗಾರಿ ಬಿಲ್ ಕೊಡುತ್ತೇವೆ ಅಂತಾ ಹೇಳಿದ್ದರು. ಮೂರು ತಿಂಗಳಾದರೂ ಒಬ್ಬರು ಬಂದಿಲ್ಲ, ಒಂದು ಮೆಸೇಜ್ ಕೂಡ ಇಲ್ಲ ಎಂದು ಹೇಳಿದರು.

ಈಶ್ವರಪ್ಪ ಅವರು ಹದಿನೈದು ದಿನಗಳಲ್ಲಿ ಹೊರಗೆ ಬರ್ತೇನಿ ಅಂತಾ ಹೇಳಿದ್ದರು. ಹೀಗೆ ಹೇಳಿದ ಕೂಡಲೇ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ. ಅದೇ ವಾರದಲ್ಲೇ ಮೂರು ನೋಟೀಸ್ ನನಗೆ ಬಂದಿವೆ. ಅವರು ನನ್ನ ಮನೆಗೆ ಬಂದು ನೋಟೀಸ್ ಕೊಟ್ಟಿಲ್ಲ. ಅವರು ಹೇಳಿದ ಕಡೆ ಹೋಗಿ ನೋಟೀಸ್ ತೆಗೆದುಕೊಂಡಿದ್ದೇನೆ. ತನಿಖಾ ಅಧಿಕಾರಿಗಳ ಹಾದಿ ತಪ್ಪಿಸಿದ್ದಾರೆ, ಅವರ ಮೇಲೆ ಒತ್ತಡ ಇದೆ. ರಾಜ್ಯದ ಜನರಿಗೆ ಗೊತ್ತಾಗಬೇಕು, ನಮ್ಮ ಬೆಂಬಲಕ್ಕೆ ಬರಬೇಕು ಎಂದು ಪ್ರಶಾಂತ್ ಪಾಟೀಲ್ ಹೇಳಿದರು.

Published On - 8:27 am, Thu, 21 July 22