ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ: ಕಾಂಗ್ರೆಸ್​​ನಲ್ಲಿ ಕಂಪನ ಸೃಷ್ಟಿಸಿದ ಶಾಸಕನ ಹೇಳಿಕೆ​

| Updated By: ರಮೇಶ್ ಬಿ. ಜವಳಗೇರಾ

Updated on: Nov 21, 2023 | 10:23 AM

ರಾಜ್ಯ ಕಾಂಗ್ರೆಸ್​ನಲ್ಲಿ (Karnataka Congress) ಮುಖ್ಯಮಂತ್ರಿ ಕುರ್ಚಿ ಕದನ ಇನ್ನು ತಣ್ಣಗಾಗಿಲ್ಲ. ಸಿಎಂ ಅಧಿಕಾರಿ ಹಂಚಿಕೆ ಬಗ್ಗೆ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ನಡುವೆ ಪೈಪೋಟಿ ಆರಂಭಗೊಂಡಿದೆ. ಎರಡೂ ಬಣಗಳ ಮಾತಿನ ಸಮರಕ್ಕೆ ಹೈಕಮಾಂಡ್ ಬ್ರೇಕ್​ ಹಾಕಿತ್ತು. ಇದರ ಮಧ್ಯೆ ಕಾಂಗ್ರೆಸ್ ಶಾಸಕರೊಬ್ಬರು ಸತೀಶ್ ಜಾರಿಕೊಹೊಳಿ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ: ಕಾಂಗ್ರೆಸ್​​ನಲ್ಲಿ ಕಂಪನ ಸೃಷ್ಟಿಸಿದ ಶಾಸಕನ ಹೇಳಿಕೆ​
ಸಚಿವ ಸತೀಶ್ ಜಾರಕಿಹೊಳಿ
Follow us on

ಬೆಳಗಾವಿ, (ನವೆಂಬರ್ 21): ಮುಖ್ಯಮಂತ್ರಿ ಸ್ಥಾನಕ್ಕೆ ಹಾಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ನಡುವೆ ಮುಸುಕಿನ ಗುದ್ದಾಟ ಮಧ್ಯೆ ಕಾಂಗ್ರೆಸ್(Congress) ಶಾಸಕರೊಬ್ಬರು ಸಚಿವ ಸತೀಶ್ ಜಾರಕಿಹೊಳಿ(Satish Jarkiholi)ಹೆಸರು ತೇಲಿಬಿಟ್ಟಿದ್ದಾರೆ. ಹೌದು…ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಶಾಸಕ ವಿಶ್ವಾಸ್ ವೈದ್ಯ ಹೊಸ ಬಾಂಬ್ ಸಿಡಿಸಿದ್ದು, ರಾಜ್ಯ ಕಾಂಗ್ರೆಸ್​​ನಲ್ಲಿ ಕಂಪನ ಸೃಷ್ಟಿಸಿದೆ.

ಬೆಳಗಾವಿ (Belagavi)ಜಿಲ್ಲೆ ಯರಗಟ್ಟಿಯಲ್ಲಿ ಮಾತನಾಡಿದ ವಿಶ್ವಾಸ್ ವೈದ್ಯ, ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ. ಸತೀಶ್ ಜಾರಕಿಹೊಳಿ​​ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಸತೀಶ್​ ಜಾರಕಿಹೊಳಿಯನ್ನು ಸಿಎಂ ಆಗಿ ನೋಡಬೇಕೆಂದು ಹೇಳುತ್ತಿದ್ದಾರೆ. ಮುಂದಿನ ದಿನದಲ್ಲಿ ಬೆಳಗಾವಿ ಗಡಿ ಭಾಗದಿಂದ ಒಬ್ಬ ಸಿಎಂ ಆಗುತ್ತಾರೆ. ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ ಸತೀಶ್ ಜಾರಕಿಹೊಳಿ ಅಣ್ಣ ಸಿಎಂ ಆಗುವುದು ಕೂಡ ಅಷ್ಟೇ ಸತ್ಯ ಎಂದರು.

ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿ: ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪತ್ಯೇಕ ಪಟ್ಟಿ ಸಿದ್ಧ, ಇಲ್ಲಿದೆ ಇಬ್ಬರ ಲೆಕ್ಕಾಚಾರ

ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಿಶ್ವಾಸ್ ವೈದ್ಯ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಮೊದಲೇ ಕೆಲ ಕಾರಣಾಂತರಗಳಿಂದ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದು, ತಮ್ಮ ರಾಜಕೀಯ ವರಸೆ ತೋರಿಸಲು ಮುಂದಾಗಿದ್ದರು. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿ ಅಸಮಾಧಾನವನ್ನು ಶಮನ ಮಾಡಲು ಮುಂದಾಗಿದ್ದಾರೆ.

ಆದರೂ ಸತೀಶ್ ಜಾರಕಿಹೊಳಿ ಸಮಾಧಾನಗೊಂಡವರಂತೆ ಕಂಡುಬಂದಿಲ್ಲ. ಹೀಗಾಗಿ ಮೊನ್ನೇ ಅಷ್ಟೇ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ್ ಡಿಕೆ ಸುರೇಶ್ ಪತ್ರೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ