ಹಿಂದೂಪರ ಸಂಘಟನೆಗಳು ಮಾಡುತ್ತಿರುವುದು ಸರಿ ಅನಿಸುತ್ತಿದೆ; ಬೆಳಗಾವಿಯಲ್ಲಿ ಶಶಿಕಲಾ ಜೊಲ್ಲೆ ಹೇಳಿಕೆ
ಹಲಾಲ್ ಹಾಗೂ ಜಟಕಾ ಕಟ್ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು. ತಿಳಿದುಕೊಳ್ಳದೇ ಜವಾಬ್ದಾರಿಯುತ ಸಚಿವೆಯಾಗಿ ಮಾತನಾಡಲು ಆಗುವುದಿಲ್ಲ. ತಿಳಿದುಕೊಳ್ಳದೇ ಮಾತನಾಡುವುದು ನನಗೆ ಮುಜುಗುರ ಅನ್ನಿಸುತ್ತದೆ.
ಬೆಳಗಾವಿ: ಹಿಂದೂಪರ ಸಂಘಟನೆಗಳು ಮಾಡುತ್ತಿರುವುದು ಸರಿ ಅನಿಸುತ್ತಿದೆ ಅಂತ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ (Shashikala jolle) ಹೇಳಿಕೆ ನೀಡಿದ್ದಾರೆ. ಹಲಾಲ್ ಕಟ್ (Halal Cut) ಮಾಡಿದಂತೆಯೇ ಜಟ್ಕಾ ಕಟ್ (Jatka Cut) ಮಾಡಬೇಕು. ಇದು ಆಯಾ ದೇವರಿಗೆ ಅರ್ಪಣೆಯಾಗುವ ವಿಷಯವಾಗಿದೆ. ನಾವು ಹಿಂದೂ ಪರ ಸಂಘಟನೆಗಳ ಪರವಾಗಿ ಇದ್ದೇವೆ. ಉತ್ತರ ಕರ್ನಾಟಕ ಭಾಗಕ್ಕಿಂತ ಕರಾವಳಿ ಭಾಗದಲ್ಲಿ ಈ ಹಲಾಲ ಕಟ್ ವಿಷಯ ಇದೆ. ಹಾಗಾಗಿ ಹಿಂದೂಪರ ಸಂಘಟನೆ ವಿರೋಧ ಮಾಡುವುದು ಸರಿ ಅನ್ನಿಸುತ್ತದೆ ಎಂದು ಅಭಿಪ್ರಾಪಟ್ಟರು.
ಹಲಾಲ್ ಹಾಗೂ ಜಟಕಾ ಕಟ್ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು. ತಿಳಿದುಕೊಳ್ಳದೇ ಜವಾಬ್ದಾರಿಯುತ ಸಚಿವೆಯಾಗಿ ಮಾತನಾಡಲು ಆಗುವುದಿಲ್ಲ. ತಿಳಿದುಕೊಳ್ಳದೇ ಮಾತನಾಡುವುದು ನನಗೆ ಮುಜುಗುರ ಅನ್ನಿಸುತ್ತದೆ. ತಿಳಿದುಕೊಂಡು ಮಾತನಾಡುತ್ತೇನೆ. ಈ ಬಗ್ಗೆ ಸಿಎಂ, ಹಿರಿಯ ಸಚಿವರು ನಿರ್ಧಾರ ಮಾಡುತ್ತಾರೆ. ಹಲಾಲ್ ಕಟ್ ಅವರು ಅವರದೇ ದೇವರಿಗೆ ಅರ್ಪಿಸುತ್ತಾರೆ ಎಂದರು.
ಯುಗಾದಿ ಹಬ್ಬ ಹಿಂದೂಗಳ ಹೊಸ ವರ್ಷಾಚರಣೆ ಹಿನ್ನೆಲೆ ಯುಗಾದಿ ಹಬ್ಬವನ್ನು ಧಾರ್ಮಿಕ ದಿನವಾಗಿ ಆಚರಣೆ ಮಾಡಲಾಗುತ್ತದೆ. ಜನವರಿ 1 ರಂದು ಹಿಂದೂಗಳ ಹೊಸ ವರ್ಷಾಚಾರಣೆ ಅಲ್ಲ. ಯುಗಾದಿ ಹಬ್ಬದ ದಿನವೇ ಹಿಂದೂಗಳ ಹೊಸ ವರ್ಚಾರಣೆ. ಮುಂದಿನ ಪೀಳಿಗೆಗೆ ನಮ್ಮ ಧರ್ಮ ಆಚರಣೆ ತಿಳಿಸಬೇಕಿದೆ. ಹೀಗಾಗಿ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಸಚಿವೆ ಹೇಳಿದರು.
ಹೊಸತೊಡಕು ದಿನ ಯಾವುದೇ ಅಹಿತಕರ ಘಟನೆ ನಡೀಬಾರದು- ಬೊಮ್ಮಾಯಿ: ಹಲಾಲ್ ಮಾಂಸಕ್ಕೆ ಹಿಂದೂ ಸಂಘಟನೆಗಳ ವಿರೋಧ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹೊಸತೊಡಕು ದಿನ ಯಾವುದೇ ಅಹಿತಕರ ಘಟನೆ ನಡೀಬಾರದು. ಹೀಗಾಗಿ ಎಲ್ಲ ಎಸ್ಪಿಗಳು, ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ
Shreyas Iyer: ಪಂದ್ಯ ಮುಗಿದ ಬಳಿಕ ಆಂಡ್ರೆ ರಸೆಲ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು ಗೊತ್ತೇ?
ನಾಥೂರಾಂ ಗೋಡ್ಸೆಯನ್ನು ಹೊಗಳಿ ಜೈಲು ಸೇರಿದ್ದ ಕಾಳಿಚರಣ್ ಮಹಾರಾಜ್ಗೆ ಜಾಮೀನು; 3 ತಿಂಗಳ ನಂತರ ಬಿಡುಗಡೆ ಭಾಗ್ಯ
Published On - 11:41 am, Sat, 2 April 22