ಕೊರೊನಾ ಕಾಟದಿಂದ ಎರಡು ವರ್ಷದ ಬಳಿಕ ಬೆಳಗಾವಿಯಲ್ಲಿ ಮನೆಮಾಡಿದ ಶಿವಾಜಿ ಜಯಂತಿ ಸಂಭ್ರಮ

Shivaji Jayanti in Belagavi: ಗುರುವಾರ ಬೆಳಗ್ಗೆ ಆರು ಗಂಟೆವರೆಗೂ ರೂಪಕಗಳ ಮೆರವಣಿಗೆ ಜರುಗಲಿದೆ. ಶಿವಾಜಿ ಜೀವನ ಚರಿತ್ರೆ ಸಾರುವ 75ಕ್ಕೂ ಅಧಿಕ ರೂಪಕಗಳು ಮೆರವಣಿಗೆಯಲ್ಲಿ ಸಾಗಲಿವೆ. ಮೆರವಣಿಗೆಯಲ್ಲಿ ಶಿವಾಜಿ ಬಾಲ್ಯದಿಂದ ಹಿಡಿದು ರಾಜ್ಯಭಾರದ ವರೆಗಿನ ನಾಟಕ ಪ್ರದರ್ಶನಗಳು ನಡೆಯಲಿವೆ.

ಕೊರೊನಾ ಕಾಟದಿಂದ ಎರಡು ವರ್ಷದ ಬಳಿಕ ಬೆಳಗಾವಿಯಲ್ಲಿ ಮನೆಮಾಡಿದ ಶಿವಾಜಿ ಜಯಂತಿ ಸಂಭ್ರಮ
ಕೊರೊನಾ ಕಾಟದಿಂದ ಎರಡು ವರ್ಷದ ಬಳಿಕ ಬೆಳಗಾವಿಯಲ್ಲಿ ಮನೆಮಾಡಿದ ಶಿವಾಜಿ ಜಯಂತಿ ಸಂಭ್ರಮ
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 04, 2022 | 9:22 PM

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಶಿವಾಜಿ ಜಯಂತಿ (Chhatrapati Shivaji Maharaj Jayanti celebration) ಅದ್ದೂರಿ ಮೆರವಣಿಗೆಗೆ ಜಿಲ್ಲಾಡಳಿತ ಚಾಲನೆ ನೀಡಿದೆ. ಬೆಳಗಾವಿಯ ನರಗುಂದಕರ ವೃತ್ತದಿಂದ ಮೆರವಣಿಗೆ ಚಾಲನೆ ನೀಡಲಾಗಿದೆ. ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್ ಅವರು ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶಾಸಕರಿಗೆ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಪಾಲಿಕೆ ಕಮೀಷನರ್ ರುದ್ರೆ ಘಾಳಿ ಸಾಥ್ ನೀಡಿದರು. ಕೊವಿಡ್ ಮಹಾಮಾರಿಯಿಂದಾಗಿ (coronavirus) ಎರಡು ವರ್ಷಗಳಿಂದ ಬೆಳಗಾವಿಯಲ್ಲಿ (Belagavi) ಶಿವಾಜಿ ಜಯಂತಿ ಆಚರಣೆ ಸ್ಥಗಿತಗೊಳಿಸಲಾಗಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಆಚರಣೆ ಈ ಬಾರಿ 103 ನೆಯದು. ಸ್ವಾತಂತ್ರ್ಯಕ್ಕೂ ಮುನ್ನ 1919ರಲ್ಲಿ ಶಿವಾಜಿ ಜಯಂತಿ ಇಲ್ಲಿ ಆಚರಣೆ ಆರಂಭವಾಯಿತು.

ಬೆಳಗಾವಿಯಲ್ಲಿ ಶಿವಾಜಿ ಜಯಂತಿ ಅದ್ದೂರಿ ಮೆರವಣಿಗೆಗೆ ಜಿಲ್ಲಾಡಳಿತದಿಂದ ಚಾಲನೆ ಗುರುವಾರ ಬೆಳಗ್ಗೆ ಆರು ಗಂಟೆವರೆಗೂ ರೂಪಕಗಳ ಮೆರವಣಿಗೆ ಜರುಗಲಿದೆ. ಶಿವಾಜಿ ಜೀವನ ಚರಿತ್ರೆ ಸಾರುವ 75ಕ್ಕೂ ಅಧಿಕ ರೂಪಕಗಳು ಮೆರವಣಿಗೆಯಲ್ಲಿ ಸಾಗಲಿವೆ. ಮೆರವಣಿಗೆಯಲ್ಲಿ ಶಿವಾಜಿ ಬಾಲ್ಯದಿಂದ ಹಿಡಿದು ರಾಜ್ಯಭಾರದ ವರೆಗಿನ ನಾಟಕ ಪ್ರದರ್ಶನಗಳು ನಡೆಯಲಿವೆ. ಸಾಂಪ್ರದಾಯಿಕ ಉಡುಗೆ, ಕಿರು ನಾಟಕ, ವಾರಕರೀ ಸಂಗೀತ, ಡಿಜೆ ಒಳಗೊಂಡ ರೂಪಕಗಳ ವಿಜೃಂಭಣೆ ಕಾಣಬರಲಿವೆ. ಮೆರವಣಿಗೆ ಮಾರ್ಗದೂದ್ದಕ್ಕೂ‌ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದ್ದು, ಎರಡು ಸಾವಿರಕ್ಕೂ ಅಧಿಕ ಪೊಲೀಸರು ನಿಯೋಜನೆಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪೊಲೀಸರಿಂದ ಮೆರವಣಿಗೆ ಮೇಲೆ ಡ್ರೋಣ್ ಕಣ್ಗಾವಲು ಹಾಕಲಾಗಿದೆ.

ಇದನ್ನೂ ಓದಿ: ಸಿಡಿಲಿನಿಂದ ತಾಯಿ ಮಗ ದುರ್ಮರಣ; ಬೈಕ್​​ನಲ್ಲಿ ತೆರಳ್ತಿದ್ದ ದಂಪತಿ ಜೊತೆ ಮೊಮ್ಮಗಳ ಸಾವು, ಬಸ್ ಡಿಕ್ಕಿ ಬೈಕ್​​ನಲ್ಲಿ ತೆರಳ್ತಿದ್ದ ಇಬ್ಬರ ಸಾವು ಇದನ್ನೂ ಓದಿ: Chanakya Niti: ಈ ಮೂರು ಕಾರ್ಯಗಳು ಆದ ತಕ್ಷಣ ಸ್ನಾನ ಮಾಡಲೇಬೇಕು! ಅವು ಯಾವುವು? ಏಕೆ?

Published On - 8:06 pm, Wed, 4 May 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ