Chanakya Niti: ಈ ಮೂರು ಕಾರ್ಯಗಳು ಆದ ತಕ್ಷಣ ಸ್ನಾನ ಮಾಡಲೇಬೇಕು! ಅವು ಯಾವುವು? ಏಕೆ?
Chanakya Niti: ಚಾಣಕ್ಯನ ನೀತಿ ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯನ ನೀತಿಗಳನ್ನು ಆಲಿಸಿ, ಪಾಲಿಸುವುದರಿಂದ ಯಾರೇ ಆಗಲಿ ಜೀವನದಲ್ಲಿ ಏಳಿಗೆ ಕಾಣಬಹುದು.
ಚಾಣಕ್ಯನ ನೀತಿ (Acharya Chanakya) ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯನ ನೀತಿ ಪ್ರಕಾರ ಯಾರೇ ಆಗಲಿ ಈ ಮೂರು ಕೆಲಸಗಳನ್ನು ಮಾಡಿದ ಬಳಿಕ ಸ್ನಾನ ಮಾಡಲೆಬೇಕು. ಇದು ದೈನಂದಿನ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ್ದು. ಅದರಲ್ಲೂ ಸ್ನಾನದ ಬಗ್ಗೆ ಅನೇಕ ಉಪದೇಶಗಳನ್ನು ಕೇಳಿ ಬಲ್ಲೆವು. ಆದರೆ ಆಚಾರ್ಯ ಚಾಣಕ್ಯ ವಿಶೇಷವಾಗಿ ಉಲ್ಲೇಖಿಸಿರುವ ಸ್ನಾನದ ಕುರಿತಾದ ಈ ಮಾತುಗಳು ಮಹತ್ವಪೂರ್ಣವಾಗಿವೆ (Bath).
ದಹನ ಸಂಸ್ಕಾರದ ಬಳಿಕ… ಶವಯಾತ್ರೆ ಮುಗಿಸಿ ಮನೆಗೆ ಮರಳುತ್ತಿದ್ದಂತೆ ಸ್ನಾನ ಮಾಡಲೇಬೇಕು. ಸ್ನಾನ ಮಾಡದೆಯೇ ಮನೆಯೊಳಕ್ಕೆ ಪ್ರವೇಶ ಮಾಡಬಾರದು. ಆಚಾರ್ಯ ಚಾಣಕ್ಯ ಹೇಳುವಂತೆ ಸ್ಮಶಾನದಲ್ಲಿ ಅನೇಕ ರೀತಿಯ ಕೀಟಾಣುಗಳು ಇರುತ್ತವೆ. ಇವು ಮನುಷ್ಯನ ದೇಹಕ್ಕೆ ತಾಕಿದರೆ ದೇಹಕ್ಕೆ ಬಾಧೆ ತರುತ್ತವೆ. ಹಾಗಾಗಿ ದಹನ ಸಂಸ್ಕಾರದ ಬಳಿಕ ಸ್ನಾನ ಮಾಡುವುದು ಜರೂರಾಗಿದೆ.
ಮೈಗೆ ಎಣ್ಣೆ ತೀಡಿಕೊಂಡ ಬಳಿಕ… ಮೈಗೆ ಎಣ್ಣೆ ತೀಡಿಕೊಂಡು, ಮಸಾಜ್ ಮಾಡಿಕೊಂಡರೆ ದೇಹಕ್ಕೆ ಅದರಿಂದ ತುಂಬಾ ಪ್ರಯೋಜನವಾದೀತು. ಇದರಿಂದ ಮಾಂಸಖಂಡಗಳು ಮಜಬೂತಾಗುತ್ತವೆ. ಆದರೆ ಮೈಗೆ ಎಣ್ಣೆ ಹಚ್ಚಿಕೊಂಡು, ತೀಡಿಕೊಂಡ ಬಳಿಕ ತಕ್ಷಣವೇ ಸ್ನಾನ ಮಾಡಬೇಕು. ಇದರಿಂದ ದೇಹದ ಮಲಿನ ಮಲಿನವೆಲ್ಲವೂ ದೂರವಾಗಿ, ನವೋತ್ಸಾಹ ತುಂಬುತ್ತದೆ. ಇದರಿಂದ ದೇಹಾರೋಗ್ಯ ಚೆನ್ನಾಗಿರುತ್ತದೆ.
ಕೂದಲು ಕತ್ತರಿಸಿಕೊಂಡ ಬಳಿಕ… ತಲೆಗೂದಲು ಕತ್ತರಿಸಿಕೊಂಡು, ಮನೆಗೆ ವಾಪಸಾದ ತಕ್ಷಣ ಸ್ನಾನ ಮಾಡಿಬಿಡಬೇಕು. ಹೆರ್ ಕಟ್ ಮಾಡುವಾಗ ಸಣ್ಣ ಪುಟ್ಟ ರೋಮಗಳು ಮೈಮೇಲೆ ಉಳಿದುಬಿಟ್ಟಿರುತ್ತದೆ. ಹಾಗಾಗಿ ಕ್ಷೌರ ಮಾಡಿಸಿಕೊಂಡು ವಾಪಸಾಗುತ್ತಿದ್ದಂತೆ ಆ ಕೂದಲುಗಳು ಮೈಮೇಲೆ ಇರದಂತೆ ಅವಶ್ಯಕವಾಗಿ ಸ್ನಾನ ಮಾಡಬೇಕು.
ಆರೋಗ್ಯದ ಕುರಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Also Read: ಪ್ರಧಾನಿ ಮೋದಿಯವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಒಡಿಶಾದ ಪಟ್ಟಚಿತ್ರ ತೋರಿಸಿದ ಡೆನ್ಮಾರ್ಕ್ ಪ್ರಧಾನಿ