ನಿಮ್ಮನ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಎಂದು ದೆಹಲಿಯಿಂದ ಬಂದ ಕೆಲವರು ಕೇಳಿದ್ದರು -ಬಸನಗೌಡ ಪಾಟೀಲ್ ಯತ್ನಾಳ್

ದೆಹಲಿಯಿಂದ ಬಂದ ಕೆಲವರು ಎರಡೂವರೆ ಸಾವಿರ ಕೋಟಿ ನೀಡಿ ಸಿಎಂ ಮಾಡ್ತೀವಿ ಅಂದಿದ್ರು. ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ, ದೆಹಲಿ ಕರೆದುಕೊಂಡು ಹೋಗ್ತೀವಿ. ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ, ಜೆ‌.ಪಿ.ನಡ್ಡಾರನ್ನ ಭೇಟಿ ಮಾಡಿಸ್ತೀವಿ ಅಂತಾರೆ.

ನಿಮ್ಮನ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಎಂದು ದೆಹಲಿಯಿಂದ ಬಂದ ಕೆಲವರು ಕೇಳಿದ್ದರು -ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: May 06, 2022 | 9:48 AM

ಬೆಳಗಾವಿ: ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದು ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಎಲ್ಲಾ ಆರಂಭವಾಗುತ್ತದೆ. ಇನ್ನು ಒಂದು ವರ್ಷ ಆದ್ರೆ ಸಾಮೂಹಿಕ ವಿವಾಹ, 151 ಜೋಡಿ ವಿವಾಹ ಮಾಡ್ತೀವಿ ಅಂತಾ ಬರ್ತಾರೆ. ಅವರು ನಿಮ್ಮ ತಾಳಿ ಕಟ್ಟಿ ಉದ್ಧಾರ ಮಾಡೋಕ್ಕೆ ಬಂದಾರೇನು? ಅಲ್ಲಾ ಮುಂದೆ ಎಂಎಲ್‌ಎ ಎಲೆಕ್ಷನ್ ನಿಲ್ಲಾಕ್ ಬರ್ತಾರೆ. ನೋಟ್ ಬುಕ್ ವಿತರಣೆ, ತಾಳಿ ಭಾಗ್ಯ ಅಂತಾ ಮತ್ತೇನೇನೋ ಮಾಡ್ತಾರೆ. ನಾಟಕ ಈಗ ಶುರುವಾಗುತ್ತೆ. ಇನ್ನು ಒಂದು ವರ್ಷ ನಡೆಯುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾರು ಏನೇನೋ ಭಾಗ್ಯ ಕೊಡ್ತಾರೆ ತಗೋಳಿ. ವೋಟ್ ಮಾತ್ರ ಚಲೋ ಭಾಗ್ಯ ಇರೋರಿಗೆ ಕೊಡ್ರಿ. ದಿಢೀರ್ ಸಾಮಾಜಿಕ ಕಾರ್ಯಕರ್ತರು ಹುಟ್ಟಿಕೊಳ್ತಾರೆ. ಬೆಂಗಳೂರದವರು ಬರ್ತಾರೆ ನೋಟ್ ಬುಕ್ ವಿತರಣೆ, ಲಗ್ನ ಮಾಡಾಕ ಶುರು ಮಾಡ್ತಾರೆ. ನಾಟಕ ಮಾಡ್ತೀವಿ ಅಂದ್ರೆ ಹದಿನೈದು ಇಪ್ಪತ್ತು ಸಾವಿರ ಕೊಡ್ತಾರೆ. ನಾನು ರೊಕ್ಕ ಬಿಚ್ಚುದಿಲ್ಲ ಆದರೂ ಮಂದಿ ವೋಟ್ ಹಾಕ್ತಾರ. ನಾನು ಯಾರಿಗೂ ಕಿರಿಕಿರಿ ಮಾಡಲ್ಲ. ನಾನು ವಿಜಯಪುರದಲ್ಲಿ ಎಂತಲ್ಲಿ ಆರಿಸಿ ಬಂದೀನಿ. ಹೆಚ್ಚು ಕಡಿಮೆ ಪಾಕಿಸ್ತಾನ ಇದ್ದಂಗಂಗೆ ಇದೆ ಅಲ್ಲಿಂದ ಆರಿಸಿ ಬಂದೇನಿ. ಏಕೆಂದರೆ ಅವರದ್ದು ಒಂದು ಲಕ್ಷ ವೋಟ್ ಇದ್ರೆ ನಮ್ದು ಒಂದೂವರೆ ಲಕ್ಷ ವೋಟ್ ಇದಾವೆ. ನಮ್ಮ ಮಂದಿ ಹೊರಗೆ ಬರ್ತಿರಲಿಲ್ಲ, ಈ ಸಲ ಹೇಳಿದೆ. ಹೊರಗೆ ಬರದಿದ್ರೆ ಪಾಕಿಸ್ತಾನ ಆಗ್ತೇತಿ ನೋಡಿ ಎಂದೆ ಆಗ ವೋಟ್ ಹಾಕಿದ್ರು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ನಿರಾಣಿಗೆ ಪರೋಕ್ಷವಾಗಿ ಕ್ಯಾಶ್ ಕ್ಯಾಂಡಿಡೇಟ್ ಎಂದ ಯತ್ನಾಳ್ ನಮ್ಮ ಹೋರಾಟದಿಂದ 3ಜನ ಪಂಚಮಸಾಲಿ ಸಚಿವರಾಗಿದ್ದಾರೆ. ಮೊದಲು ಬಿಎಸ್‌ವೈ ಒಬ್ಬರನ್ನ ಮಂತ್ರಿ ಮಾಡಲು ಒದ್ದಾಡುತ್ತಿದ್ದರು. ಬಸನಗೌಡನ ಮಾಡಬಾರದು ಅಂತಾ ಸಿ.ಸಿ.ಪಾಟೀಲ್‌ನ ಮಂತ್ರಿ ಮಾಡಿದ್ರು. ಒಂದ್ ಕ್ಯಾಶ್ ಕ್ಯಾಂಡಿಡೇಟ್ ಐತಿ ಅದನ್ನ ಮಾಡಲೇಬೇಕಾಗಿತ್ತು ಎಂದು ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ಕ್ಯಾಶ್ ಕ್ಯಾಂಡಿಡೇಟ್ ಎಂದು ಯತ್ನಾಳ್ ಭಾಷಣದ ವೇಳೆ ಹೇಳಿದ್ದಾರೆ. ಇನ್ನೊಬ್ಬ ಶಂಕರ ಪಾಟೀಲ್ ಮುನೇನಕೊಪ್ಪನ ಮಾಡಿದ್ರು. ಅರವಿಂದ ಬೆಲ್ಲದ್ ನ ಮಂತ್ರಿ ಮಾಡಬಾರದು ಅಂತಾ ಜಗದೀಶ್ ಶೆಟ್ಟರ್ ಮುನೇನಕೊಪ್ಪನ ಮಾಡಿದ್ರು. ಸಿ.ಸಿ.ಪಾಟೀಲ್ ಪಾಪ ಬೊಮ್ಮಾಯಿ ದೋಸ್ತಿ ಅದಕ್ಕೆ ಆಯ್ತು. ಕ್ಯಾಶ್ ಕ್ಯಾಂಡಿಡೇಟ್‌ದ ಆಯ್ತು, ನಾ ರೊಕ್ಕಾ ಕೊಡವನಲ್ಲ ಕಿಸಿಯವನಲ್ಲ. 50 ಕೋಟಿ ನೂರು ಕೋಟಿ ಕೊಡ್ತಾನೆ, ಅವು ಬಾಯಿ ತಕ್ಕೊಂಡು ಕೂತಿರ್ತಾವ. ಹಣ ತಗೊಂಡು ಮಂತ್ರಿ ಮಾಡ್ತಾರೆ. ನಾನು ಎಂಬುವನು ಕರ್ನಾಟಕ ಲೂಟಿ ಮಾಡೋಕೆ ಭಗವಂತನ ಸಾಕ್ಷಿಯಾಗಿ ಅಂತಾರೆ. ರಗಡ್ ಜಿಗದಾಡ್ತಾರೆ ನಂದೇನರ ತಗದು ಮಾಡಬೇಕು ಅಂತೇಳಿ. ಮೊನ್ನೆ ಕೆಪಿಎಸ್‌ಸಿ, ಪಿಎಸ್ಐ ಹಗರಣ ಮೊದಲಿಂದ ನಡಿದಿದೆ ಅಂದಿದ್ದೆ. ಆಗ ಕಾಂಗ್ರೆಸ್ ನವರು ಎಸಿಬಿಗೆ ದೂರು ಕೊಟ್ಟರು. ಯತ್ನಾಳ್ ಗೆ ಎಲ್ಲ ಗೊತ್ತು ಮಾಹಿತಿ ಪಡೆಯಬೇಕು ಅಂತಾ ದೂರು ಕೊಟ್ಟರು. ಸಂಜೆ ಅವರ ಅಧ್ಯಕ್ಷನದ್ದೇ ಊಣ ಹೊರಗೆ ಬಂತು. ಎಲ್ಲೋ ಹೋಗಿ ಸಿಗಸಬೇಕು ಅಂತಾರೆ ಅವರೇ ಕಡೇಕ್ ಆಗ್ತಾರೆ ಎಂದ ಯತ್ನಾಳ್.

ಬೆಳಗಾವಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮನ್ನ ಸಿಎಂ ಮಾಡ್ತೀವಿ 2500 ಕೋಟಿ ಕೊಡಿ ಎಂದು ಕೇಳಿದ್ರು ದೆಹಲಿಯಿಂದ ಬಂದ ಕೆಲವರು ಎರಡೂವರೆ ಸಾವಿರ ಕೋಟಿ ನೀಡಿ ಸಿಎಂ ಮಾಡ್ತೀವಿ ಅಂದಿದ್ರು. ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ, ದೆಹಲಿ ಕರೆದುಕೊಂಡು ಹೋಗ್ತೀವಿ. ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ, ಜೆ‌.ಪಿ.ನಡ್ಡಾರನ್ನ ಭೇಟಿ ಮಾಡಿಸ್ತೀವಿ ಅಂತಾರೆ. ದೆಹಲಿಯಿಂದ ಒಂದಿಷ್ಟು ಜನ ನನ್ನ ಬಳಿಯೂ ಬಂದಿದ್ದರು. ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ಸಜ್ಜ ಮಾಡಿ ಇಡ್ರಿ ಅಂದ್ರು. ನಾ ಅಂದೆ ಮಕ್ಕಳಾ, 2500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ ಅಂದೆ. ಆ ಎರಡೂವರೆ ಸಾವಿರ ಕೋಟಿ ಹೆಂಗ್ ಇಡೋದು. ಏನು ಕೋಣೆಯಲ್ಲಿ ಇಡೋದೋ? ಗೋದಾಮಿನಲ್ಲಿ ಇಡೋದೋ? ಹಂಗ ಟಿಕೆಟ್ ಕೊಡ್ತೀನಿ ಅಂತಾ ರಾಜಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡ್ತಾರೆ. ನಾನು ವಾಜಪೇಯಿಯವರ ಕೈಯಲ್ಲಿ ಕೆಲಸ ಮಾಡಿದವನು. ಅಡ್ವಾಣಿ, ರಾಜನಾಥಸಿಂಗ್‌, ಅರುಣ್ ಜೇಟ್ಲಿ ನನ್ನ ಬಸನಗೌಡ ಅಂತಾ ಹೆಸರು ಹೇಳಿ ಕರಿತಿದ್ರು. ಅಂತಾ ವ್ಯಕ್ತಿಗೆ ಹೇಳ್ತಾರೆ ಎರಡೂಸಾವಿರ ಕೋಟಿ ಸಜ್ಜ ಮಾಡಿ ಸಿಎಂ ಮಾಡ್ತೀವಿ ಅಂತಾರೆ. ನಡ್ಡಾರ ಮನೆಗೆ ಕರೆದುಕೊಂಡು ಹೋಗ್ತೀವಿ, ಅಮಿತ್ ಶಾ ಮನೆಗೆ ಕರೆದುಕೊಂಡು ಹೋಗ್ತೀವಿ ಅಂತಾ ಹಿಂಗಿಲ್ಲಾ ನಡಿತದೆ ಎಂದು ಬಸನಗೌಡ ಪಾಟೀಲ್ ಮತ್ತೊಂದು ಬಾಂಬ್ ಹಾಕಿದ್ದಾರೆ.

ಯಡಿಯೂರಪ್ಪ ವಿರುದ್ಧ ಯತ್ನಾಳ್ ಏಕವಚನದಲ್ಲೇ ವಾಗ್ದಾಳಿ ಯಡಿಯೂರಪ್ಪ ಸಿಎಂ ಆಗಿರೋವರೆಗೂ ನಿಮ್ಮ ಛೇಂಬರ್‌ಗೆ ಬರಲ್ಲ ಎಂದಿದ್ದೆ. ಲಿಂಗಾಯತರಲ್ಲಿ 72 ಪರ್ಸೆಂಟ್ ಪಂಚಮಸಾಲಿ ಸಮಾಜದವರಿದ್ದಾರೆ. ಇಲ್ಲಿಯವರೆಗೂ ರಾಜ್ಯದ ಸಿಎಂ ಆದವರು ಎರಡು ಪರ್ಸೆಂಟ್‌. ಸುಳ್ಳು ಹೇಳೋದು ಮೋಸ ಮಾಡೋದು ರಾಜಕಾರಣ ಆಗಿದೆ. ನಾ ನಾಟಕ ಮಾಡಿದ್ರೆ ಈಗಲ್ಲ,ಈ ಹಿಂದೆಯೇ ಸಿಎಂ ಆಗಿರ್ತಿದಿದ್ದೆ. ಪಾಪ ಯಡಿಯೂರಪ್ಪರಿಗೂ ಇತ್ತೀಚೆಗೆ ಪುತ್ರ ವ್ಯಾಮೋಹ ಬಂದುಬಿಟ್ಟಿತು. ಯತ್ನಾಳ್ ಮಂತ್ರಿ ಮಾಡಿದ್ರೆ ನನ್ನ ಧೀಮಂತ ಮಗ ವಿಜಯೇಂದ್ರ ಗತಿ ಏನು? ಅದಕ್ಕೆ ಮಂತ್ರಿ ಮಾಡದೇ ತುಳಿಯೋದು, ನಾನೇ ಲೆಟರ್ ಕೊಟ್ಟರೂ ಸೈಡ್ ಇಡ್ತಿದ್ರು. ಆಗ ನಾನು ನೀ ಸಿಎಂ ಆಗಿರೋವರೆಗೂ ನಿಮ್ಮ ಛೇಂಬರ್‌ಗೆ ಬರಲ್ಲ ಎಂದು ಬಿಎಸ್‌ವೈಗೆ ಹೇಳಿದ್ದೆ. ಕಾವೇರಿಗೂ ಬರಲ್ಲ, ಕೃಷ್ಣಾಗೂ ಬರಲ್ಲ ಎಂದಿದ್ದೆ. ನಿನ್ನ ಸಿಎಂ ಸ್ಥಾನದಿಂದ ಇಳಿಸಿಯೇ ಈ ಛೇಂಬರ್‌ಗೆ ಬರ್ತೀನಿ ಎಂದಿದ್ದೆ. ಮುಂದೆ ಬೊಮ್ಮಾಯಿ ಫೋನ್ ಮಾಡಿ ಕರೆಸಿದಾಗ ಹೋಗಿದ್ದೆ. ನಿಮ್ಮಿಂದ ನಾನು ಇವತ್ತು ಸಿಎಂ ಆದೆ ಅಂತಾ ಬೊಮ್ಮಾಯಿ ಹೇಳಿದ್ರು. ಸಿಎಂ, ಮಂತ್ರಿ ಆಸೆ ಇಲ್ಲ, ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಕೊಡಿ ಎಂದೆ. ನಿಮ್ಮನ್ನು ಮಂತ್ರಿ ಮಾಡ್ತೀನಿ ಅಂತಾ ಬೊಮ್ಮಾಯಿ ಹೇಳಿದ್ರು, ಆ ಲಾಲಿಪಾಪ್ ಆಸೆ ಹಚ್ಚಬೇಡಿ ಎಂದೆ. ಹಿಂದಿನವರೂ ಮಾಡಿದ ಹಾಗೇ ನಾಟಕ ಮಾಡೋ ಮಗನಲ್ಲ ಅಂದೆ. ಪಂಚಮಸಾಲಿ ಮೀಸಲಾತಿ ಕೊಡಿ ನಿಮ್ಮ ಮಂತ್ರಿ ಅಲ್ಲೇ ಇಟ್ಟುಕೊಳ್ಳಿ ಅಂದೆ ಎಂದು ಯತ್ನಾಳ್ ಹೇಳಿದ್ರು.

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ