AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿವೇಶನ ಹೊತ್ತಲ್ಲೇ ಬೆಳಗಾವಿ ಸುವರ್ಣಸೌಧಕ್ಕೆ ಕರೆಂಟ್ ಶಾಕ್: 3 ತಿಂಗಳ 11ಲಕ್ಷ ಬಿಲ್ ಬಾಕಿ; ಹೆಸ್ಕಾಂನಿಂದ ವಿದ್ಯುತ್ ಕಡಿತದ ಎಚ್ಚರಿಕೆ

ಬೆಳಗಾವಿಯ ಸುವರ್ಣಸೌಧಕ್ಕೆ ₹11 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ಕರೆಂಟ್ ಕಟ್ ಭೀತಿ ಎದುರಾಗಿದೆ. ಚಳಿಗಾಲದ ಅಧಿವೇಶನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವಿದ್ಯುತ್ ಕಡಿತದ ಎಚ್ಚರಿಕೆ ನೀಡಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಆದರೆ ಸಚಿವ ಸತೀಶ್​​ ಜಾರಕಿಹೊಳಿ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಅಧಿವೇಶನ ಹೊತ್ತಲ್ಲೇ ಬೆಳಗಾವಿ ಸುವರ್ಣಸೌಧಕ್ಕೆ ಕರೆಂಟ್ ಶಾಕ್: 3 ತಿಂಗಳ 11ಲಕ್ಷ ಬಿಲ್ ಬಾಕಿ; ಹೆಸ್ಕಾಂನಿಂದ ವಿದ್ಯುತ್ ಕಡಿತದ ಎಚ್ಚರಿಕೆ
ಬೆಳಗಾವಿ ಸುವರ್ಣಸೌಧ
ಪ್ರಸನ್ನ ಹೆಗಡೆ
|

Updated on:Nov 15, 2026 | 8:10 AM

Share

ಬೆಳಗಾವಿ, ನವೆಂಬರ್​​ 15: ಡಿಸೆಂಬರ್ 2ರಿಂದ 11ರ ವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಕರ್ನಾಟಕ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇದೇ ಹೊತ್ತಲ್ಲಿ ಹೆಸ್ಕಾಂ ಶಾಕ್​ ಕೊಟ್ಟಿದ್ದು, ಕರೆಂಟ್ ಕಟ್ ಮಾಡುವುದಾಗಿ ಎಚ್ಚರಿಸಿದೆ. ಕಳೆದ 3 ತಿಂಗಳಿಂದ ₹11 ಲಕ್ಷ ರೂಪಾಯಿಗಳಷ್ಟು ವಿದ್ಯುತ್ ಬಿಲ್ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ-ಹೆಸ್ಕಾಂಗೆ ಪಾವತಿಯಾಗಿಲ್ಲ. ಕರೆಂಟ್ ಬಿಲ್ ಪಾವತಿಸುವಂತೆ ಹೆಸ್ಕಾಂ ಈಗಾಗಲೇ ಮೌಖಿಕ ಸೂಚನೆ ನೀಡಿದ್ದು, ಬಿಲ್ ಪಾವತಿಸದಿದ್ರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಿದ್ಯುತ್​​ ಬಿಲ್​​ ಬಾಕಿಯಾಗಿದ್ದು ಯಾಕೆ?

ಲೋಕೋಪಯೋಗಿ ಇಲಾಖೆಯು ಸುವರ್ಣಸೌಧ ನಿರ್ವಹಣೆಯ ಹೊಣೆ ಹೊತ್ತಿದ್ದು, ಇದರ ನಿರ್ವಹಣೆಗೆ ಪ್ರತಿವರ್ಷ 2.20 ಕೋಟಿ ಅನುದಾನ ಬೇಕಿದೆದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಆರ್ಥಿಕ ಇಲಾಖೆ ಅನುಮೋದನೆ ನೀಡಿಲ್ಲ. ಹೀಗಾಗಿ ಅನುದಾನ ತಡವಾಗಿರುವುದೇ ವಿದ್ಯುತ್​​ ಬಿಲ್​​ ಪಾವತಿ ವಿಳಂಬಕ್ಕೆ ಕಾರಣ ಎನ್ನಲಾಗಿದ್ದು, ಅಧಿವೇಶನಕ್ಕೆ ದಿನಗಣನೆ ಶುರುವಾಗಿದ್ದರೂ ಅನುದಾನ ಬಿಡುಗಡೆಯಾಗದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಡಿ.2ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಸುವರ್ಣ ಸೌಧ ಸುತ್ತ 5,000ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ

ಸರ್ಕಾರದ ವಿರುದ್ಧ ವಿಪಕ್ಷಗಳಿಂದ ಟೀಕೆ

ಇದೇ ವಿಚಾರವಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಒಳಗಡೆ ಹುಳುಕು, ಹೊರಗೆ ಸೆಂಟ್” ಎಂದು ಪರಿಷತ್​​ ಬಿಜೆಪಿ ಸದಸ್ಯ ಸಿ.ಟಿ. ರವಿ ಕಿಡಿಕಾರಿದ್ದಾರೆ. ಖಜಾನೆ ಖಾಲಿಯಾಗಿದೆ ಅಂತ ಈಗಾಗಲೇ 20 ಬಾರಿ ಹೇಳಿ ಆಗಿದೆ. ಒಳಗಡೆ ಬೆಳಕಿಗೆ ಕ್ಯಾಂಡಲ್ ಇಡ್ತೀರೋ ಏನಾದರೂ ಬೇರೆ ಇಡ್ತೀರೋ ಅಂತ ನಾವು ಸರ್ಕಾರವನ್ನು ಕೇಳಬೇಕಾಗಿದೆ ಎಂದು ಪರಿಷತ್​​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕೂಡ ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಸಹ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಟೀಕಿಸಿದ್ದು, ರಾಜ್ಯ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಾಗ್ತಾ ಇಲ್ಲ ಎಂದು ಟೀಕಿಸಿದ್ದಾರೆ.

ಬಿಲ್​​ ಬಾಕಿ ಬಗ್ಗೆ ಸಚಿವರಿಂದ ಸ್ಪಷ್ಟನೆ

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಅದು 20 ಕೋಟಿಯಾಗಲಿ- 30 ಕೋಟಿಯಾಗಲಿ, ಅದು ಸರ್ಕಾರದ ಜವಾಬ್ದಾರಿ. ಹಣ ಬಿಡುಗಡೆಯಾಗುವುದು ಯಾವಾಗಲೂ ಲೇಟ್ ಆಗುತ್ತೆ. ಅದಕ್ಕೆ ಅಧಿಕಾರಿಗಳಿರುತ್ತಾರೆ. ಸರ್ಕಾರದಲ್ಲಿ ಯಾವಾಗಲೂ ಆರು ತಿಂಗಳು, ಒಂದು ವರ್ಷ ಬಿಲ್ ಯಾವಾಗಲೂ ಪೆಂಡಿಂಗ್ ಇದ್ದೇ ಇರುತ್ತದೆ. ನಮ್ಮ ಹತ್ರ ದುಡ್ಡಿಲ್ಲ ಅಂತ ಯಾರನ್ನಾದರೂ ಕೇಳಿದ್ದೀವಾ? ಎಂದು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:07 am, Sun, 15 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More