ಇಂದಿನಿಂದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ನವೆಂಬರ್ 1 ರಿಂದ B ಖಾತಾದಿಂದ A ಖಾತೆಗೆ ಪರಿವರ್ತಿಸಲು ಅವಕಾಶ ನೀಡಿದೆ. ಆ ಮೂಲಕ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ. ಆನ್‌ಲೈನ್ ಮೂಲಕ ಸುಲಭವಾಗಿ ಎ ಖಾತಾ ಪಡೆಯುವ ಪ್ರಕ್ರಿಯೆ ಮತ್ತು ಅದರ ಹಂತಗಳನ್ನು ಸಂಪೂರ್ಣವಾಗಿ ಇಲ್ಲಿ ವಿವರಿಸಲಾಗಿದೆ.

ಇಂದಿನಿಂದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ

Updated on: Nov 01, 2025 | 3:48 PM

ಬೆಂಗಳೂರು, ನವೆಂಬರ್ 01: ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (GBA) ಬಿ ಖಾತಾ (b khata) ಆಸ್ತಿಯನ್ನ ಎ ಖಾತಾಗೆ ಪರಿವರ್ತಿಸಲು ಅವಕಾಶ ನೀಡಿದೆ. ನವೆಂಬರ್‌ 1ರಿಂದ ಫೆಬ್ರವರಿ ಮೊದಲ ವಾರದವರೆಗೆ, ಅಂದರೆ 100 ದಿನಗಳ ಅಭಿಯಾನ ಆರಂಭಿಸಿದೆ. ಆ ಮೂಲಕ ಬಿ ಖಾತಾದಾರರು ತಮ್ಮ ಆಸ್ತಿಗಳಿಗೆ ಎ ಖಾತಾ ಪಡೆಯಲು ದಾರಿ ಮತ್ತಷ್ಟು ಸುಗಮವಾಗಿದೆ. ಇದೀಗ ಬಿ ಖಾತಾ ಇರುವವರು ಎ ಖಾತಾಗೆ ಪರಿವರ್ತಿಸುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ. ಹಾಗಾದರೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ನಗರದಲ್ಲಿ ಸರಿಸುಮಾರು 25 ಲಕ್ಷಕ್ಕೂ ಹೆಚ್ಚು ಆಸ್ತಿ ಖಾತಾಗಳಿವೆ. ಈ ಪೈಕಿ 7.5 ಲಕ್ಷ ಆಸ್ತಿಗಳಿಗೆ ಬಿ ಖಾತಾ ಇದೆ. ಬಿ ಖಾತಾ ಆಸ್ತಿ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಮುಖ್ಯವಾಗಿ ಬ್ಯಾಂಕ್​ಗಳಲ್ಲಿ ಸಾಲ ಕೂಡ ಸಿಗುತ್ತಿಲ್ಲ. ಬಿ ಖಾತಾ ಸೈಟ್ ಮಾಲೀಕರಿಗೆ ಕಟ್ಟಡ ಯೋಜನೆ ಅನುಮೋದನೆ ಸಿಗಲ್ಲ. ಹೀಗಾಗಿ ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಖಾತಾ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಿದೆ.

ಆನ್‌ಲೈನ್‌ನಲ್ಲಿ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಹೇಗೆ?

  • ಮೊದಲು https://bbmp.karnataka.gov.in/BtoAKhata ವೆಬ್​ಸೈಟ್​ಗೆ ಭೇಟಿ ನೀಡಿ.
  • ಮೊಬೈಲ್ ನಂಬರ್, ಕ್ಯಾಪ್ಚಾ ಮತ್ತು ಓಟಿಪಿ ನಮೂದಿಸಿ.
  • ಲಾಗಿನ್​​ ಆದ ಬಳಿಕ ಬಿ-ಖಾತೆಯಿಂದ ಎ-ಖಾತೆ ಪರಿವರ್ತನೆ ಮತ್ತು ಒಂದೇ ಪ್ಲಾಟ್ ಅನುಮೋದನೆಯ ಮೂಲಕ ಸೈಟ್‌ಗಳಿಗೆ ಹೊಸ ಎ-ಖಾತೆ ಎಂಬ ಆಯ್ಕೆ ಕಾಣಿಸುತ್ತದೆ.
  • ಹೊಸದಾಗಿ ವಿನಂತಿ ಕೊಡಿ ಮತ್ತು ಪರಿವರ್ತಿಸಬೇಕಾದ ಖಾತೆ ಐಡಿಯನ್ನು ನಮೂದಿಸಿ. ಫೆಚ್​​ ಮೇಲೆ ಕ್ಲಿಕ್ ಮಾಡಿ.
  • ಸೈಟ್ ಮಾಲೀಕರ ಆಧಾರ್ ದೃಢೀಕರಣ ಮಾಡಬೇಕು. ಜೊತೆಗೆ ಇ-ಕೆವೈಸಿ ಕೂಡ ಪರಿಶೀಲನೆ ಮಾಡಿ.
  • ಪ್ಲಾಟ್ ಸರ್ವೆ ಸಂಖ್ಯೆಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ.
  • ಕೃಷಿಯಿಂದ ಕೃಷಿಯೇತರಕ್ಕೆ ಡಿಸಿ ಪರಿವರ್ತನೆ ಆದೇಶವನ್ನು ನಮೂದಿಸಿ.
  • ಆಸ್ತಿಯ ಪ್ರಕಾರವನ್ನು ಆಯ್ಕೆ ಮಾಡಿ ಮತ್ತು ಕಟ್ಟಡದ ರೇಖಾಚಿತ್ರವನ್ನು ಅಪ್‌ಲೋಡ್ ಮಾಡಿ.
  • ಮಾರ್ಗ, ರಸ್ತೆಗಳು ಅಥವಾ ಹತ್ತಿರದ ರಸ್ತೆಗಳಿಗೆ ಸಂಬಂಧಿಸಿದ ಇತರ ದಾಖಲೆಗಳು ಮತ್ತು ವಿವರಗಳನ್ನು ಅಪ್‌ಲೋಡ್ ಮಾಡಿ.
  • ನಿರ್ದಿಷ್ಟ ಆಸ್ತಿಗೆ ಸಂಬಂಧಿಸಿದಂತೆ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದರೆ, ಇತರ ಮಾಲೀಕರ ಇ-ಕೆವೈಸಿ, ಫೋನ್ ನಂಬರ್​ ಪರಿಶೀಲನೆ ಮಾಡಿ, ಬಳಿಕ ಪ್ಲಾಟ್ ವಿವರಗಳನ್ನು ನಮೂದಿಸಿ.
  • ಅರ್ಜಿಯನ್ನು ಸಲ್ಲಿಸಿ ಮತ್ತು ಹಣ ಪಾವತಿಸಿ.
  • ಬಳಿಕ ಡ್ಯಾಶ್‌ಬೋರ್ಡ್‌ನಿಂದ ಸ್ವೀಕೃತಿ ಸ್ಲಿಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:25 pm, Sat, 1 November 25