AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rains: ಬೆಂಗಳೂರಲ್ಲಿ ಅಕ್ಟೋಬರ್ 21ರಿಂದ ಮತ್ತೆ ಮಳೆ, ಯೆಲ್ಲೋ ಅಲರ್ಟ್​

ಇಂದು ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ, ಮಂಗಳೂರು, ಹಾವೇರಿ ಹಾಗೂ ತುಮಕೂರುತಲಾ 7 ಸೆಂ.ಮೀ, ದಾವಣಗೆರೆ 9 ಸೆಂ.ಮೀ‌ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 21ರ ವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ ಅಕ್ಟೋಬರ್ 19ರವರೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

Karnataka Rains: ಬೆಂಗಳೂರಲ್ಲಿ ಅಕ್ಟೋಬರ್ 21ರಿಂದ ಮತ್ತೆ ಮಳೆ, ಯೆಲ್ಲೋ ಅಲರ್ಟ್​
ಮಳೆ Image Credit source: PTI
ನಯನಾ ರಾಜೀವ್
|

Updated on:Oct 18, 2024 | 7:50 AM

Share

ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಶುಭ್ರ ಆಕಾಶವಿದ್ದು, ಬಿಸಿಲಿದೆ. ಆದರೆ ಅಕ್ಟೋಬರ್ 21ರಿಂದ ಮಳೆ ಶುರುವಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕುಂದಾಪುರ, ಹಿರೇಕೆರೂರು, ಹುಣಸೂರು, ಶಿರಾಲಿ, ಕಿರವತ್ತಿ, ಶಿಗ್ಗಾಂವ್, ಮಂಕಿ, ಗೋಕರ್ಣ, ಶೋರಾಪುರ, ನರಗುಂದ, ನಾಯಕನಹಟ್ಟಿ, ಯಲ್ಲಾಪುರ, ನಂಜನಗೂಡು, ಕದ್ರಾ, ಮಂಕಿ, ಗಬ್ಬೂರು, ಬೈಲಹೊಂಗಲ, ಬಾದಾಮಿಯಲ್ಲಿ ಮಳೆಯಾಗಿದೆ.

ಬೆಳಗಾವಿ, ಅಂಕೋಲಾ, ಕಾರವಾರ, ಗೇರುಸೊಪ್ಪ, ಮುದಗಲ್, ಲೋಕಾಪುರ, ಭದ್ರಾವತಿ, ಕಡೂರು, ಕೋಟ, ಆಲಮಟ್ಟಿ, ಕುಮಟಾ, ಹಳಿಯಾಳ, ಧರ್ಮಸ್ಥಳ, ಮುದ್ದೇಬಿಹಾಳ, ರಾಯಚೂರು, ಸೇಡಂ, ಹೊನ್ನಾವರ, ಕುಷ್ಟಗಿ, ಖಜೂರಿ, ಧಾರವಾಡ, ಸೈದಾಪುರ, ಕುಂದಗೋಳ, ಚಿಕ್ಕೋಡಿ, ಗೋಕಾಕ್​ನಲ್ಲಿ ಮಳೆಯಾಗಿದೆ.

ಮತ್ತಷ್ಟು ಓದಿ: Karnataka Rains: ಬೆಂಗಳೂರಿಗೆ ಆರೆಂಜ್ ಅಲರ್ಟ್​, ಅಕ್ಟೋಬರ್ 23ರವರೆಗೂ ಮಳೆ

ಜೇವರ್ಗಿ, ಮಧುಗಿರಿ, ಲಿಂಗನಮಕ್ಕಿ, ಕುಡತಿನಿ, ಹೊಸದುರ್ಗ, ದೊಡ್ಡಬಳ್ಳಾಪುರ, ಚಿಕ್ಕಮಗಳೂರು, ಬೆಳ್ಳೂರು, ತ್ಯಾಗರ್ತಿಯಲ್ಲಿ ಮಳೆಯಾಗಿದೆ. ಕಾರವಾರದಲ್ಲಿ 31.08 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 16.8 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನಲ್ಲಿ ಶುಭ್ರ ಆಕಾಶವಿದೆ, ಎಚ್​ಎಎಲ್​ನಲ್ಲಿ22.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 22.1ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 24.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 24.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 30.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 31.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 31.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 16.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ,ಪಣಂಬೂರಿನಲ್ಲಿ 30.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.3 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಹವಾಮಾನಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೀದರ್​ನಲ್ಲಿ 29.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 27.5ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 29.ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಧಾರವಾಡದಲ್ಲಿ 26.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 25.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 30.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 25.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 25.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 28.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:49 am, Fri, 18 October 24

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ರಸ್ತೆ ಪರಿಶೀಲನೆ ವೇಳೆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ದೆಹಲಿ ಸಚಿವ ಪರ್ವೇಶ್
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ದಿನ ಭವಿಷ್ಯ: ರವಿ ಕನ್ಯಾ, ಚಂದ್ರ ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚಾರ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಹಿಂದೂಗಳು ಯಾರ ಮೇಲೂ ಮುಗಿಬೀಳಲ್ಲ, ತಂಟೆಗೆ ಬಂದ್ರೆ ಸುಮ್ನೆ ಬಿಡಲ್ಲ: ಸಿಂಹ
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಮೆಗ್ಗಾನ್ ಆಸ್ಪತ್ರೆ ವೈದ್ಯರ ಯಡವಟ್ಟು: ವಿದ್ಯಾರ್ಥಿನಿ ದುರಂತ ಸಾವು
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಫೇಕ್ ಸುದ್ದಿ ಹಬ್ಬಿಸುವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಕೊಪ್ಪಳ ಎಸ್ಪಿ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ಕ್ಯಾಂಟೀನ್‌ನಲ್ಲಿ ಬಾಣಂತಿಗೆ ನೀಡಿದ್ದ ಕೇಸರಿಬಾತ್‌ನಲ್ಲಿ ಹಲ್ಲಿ ಪತ್ತೆ
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ಭೂಮಿ ಹಿಂದಿರುಗಿಸಬೇಕೆಂದು ಆಂದೋಲನ ಘೋಷಿಸಿದ ಕುಮಾರಸ್ವಾಮಿ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ವಿಷ್ಣು ಅಮೃತ ಮಹೋತ್ಸವದಲ್ಲಿ ಶಿವಣ್ಣ ಮುತ್ತಿನಂಥ ಮಾತು: ವಿಡಿಯೋ
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು
ಸ್ನೇಹಿತನಿಗೆ ಸೀಟ್‌ ಕೊಡಿಸಲು ಡೀಲ್‌; ಕನ್ನಾಳೆ ಶಿಷ್ಯನ ಕಳ್ಳಾಟ ಬಯಲು