Bengaluru: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಾಂಗ್ರೆಸ್ ಶಾಸಕರ ಸಂಬಂಧಿ ಬ್ಯಾಗ್​ನಲ್ಲಿ 2 ಜೀವಂತ ಬುಲೆಟ್ ಪತ್ತೆ

| Updated By: ಸುಷ್ಮಾ ಚಕ್ರೆ

Updated on: Oct 13, 2021 | 2:20 PM

Bangalore International Airport: ಎನ್​.ಎ ಹ್ಯಾರಿಸ್ ಅವರ ಅಂಕಲ್ ಆಗಿರುವ ಉಮರ್ ಫರೂಕ್ ಹ್ಯಾರಿಸ್ ನಲಪಾಡ್ ಅವರ ಬ್ಯಾಗ್​ನಲ್ಲಿ ಎರಡು ಜೀವಂತ ಬುಲೆಟ್​ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.

Bengaluru: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಾಂಗ್ರೆಸ್ ಶಾಸಕರ ಸಂಬಂಧಿ ಬ್ಯಾಗ್​ನಲ್ಲಿ 2 ಜೀವಂತ ಬುಲೆಟ್ ಪತ್ತೆ
ಬೆಂಗಳೂರು ವಿಮಾನ ನಿಲ್ದಾಣ
Follow us on

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಅವರ ಸಂಬಂಧಿಯನ್ನು ಏರ್​ಪೋರ್ಟ್ ಅಧಿಕಾರಿಗಳು ತಡೆಹಿಡಿದಿದ್ದಾರೆ. ಎನ್​.ಎ ಹ್ಯಾರಿಸ್ ಅವರ ಅಂಕಲ್ ಆಗಿರುವ ಉಮರ್ ಫರೂಕ್ ಹ್ಯಾರಿಸ್ ನಲಪಾಡ್ ಅವರ ಬ್ಯಾಗ್​ನಲ್ಲಿ ಎರಡು ಜೀವಂತ ಬುಲೆಟ್​ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.

ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಅವರ ಅಂಕಲ್ ಫರೂಕ್ ನಲಪಾಡ್ ಬೆಂಗಳೂರಿನಿಂದ ದುಬೈ ವಿಮಾನವನ್ನು ಹತ್ತಲು ಇಂದು ಬೆಳಗ್ಗೆ 9.30ರ ವೇಳೆಗೆ ಬೆಂಗಳೂರಿನ ವಿಮಾನ ನಿಲ್ದಾಣದೊಳಗೆ ಹೋದಾಗ ಅವರ ಕ್ಯಾಬಿನ್ ಬ್ಯಾಗ್​ನಲ್ಲಿ ಎರಡು ಜೀವಂತ ಗುಂಡುಗಳು ಪತ್ತೆಯಾಗಿವೆ. ಅವರು ತೆಗೆದುಕೊಂಡು ಹೋಗುತ್ತಿದ್ದ ಬ್ಯಾಗ್​ನಲ್ಲಿ ಬುಲೆಟ್​ಗಳು ಪತ್ತೆಯಾಗುತ್ತಿದ್ದಂತೆ ತಕ್ಷಣ ಭದ್ರತಾ ಪಡೆಗೆ ಹಾಗೂ ಸಿಐಎಸ್​ಎಫ್ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು.

ಬಳಿಕ ಫರೂಕ್ ಹ್ಯಾರಿಸ್ ನಲಪಾಡ್ ತಮ್ಮ ಬಳಿ ಇದ್ದ ಗನ್​ನ ಲೈಸೆನ್ಸ್ ಅನ್ನು ಪೊಲೀಸರಿಗೆ ತೋರಿಸಿದರು. ತಾವು ಅದೇ ಬ್ಯಾಗ್​ನಲ್ಲಿ ಬುಲೆಟ್ ಹಾಗೂ ಗನ್ ಅನ್ನು ಇಟ್ಟಿದ್ದಾಗಿಯೂ, ಅವಸರದಲ್ಲಿ ಅದನ್ನು ಮನೆಯಲ್ಲಿ ತೆಗೆದಿಡಲು ಮರೆತಿದ್ದಾಗಿಯೂ ಅವರು ಪೊಲೀಸರಿಗೆ ತಿಳಿಸಿದರು. ಬೆಳಗ್ಗೆ ಬೇಗ ಗಡಿಬಿಡಿಯಿಂದ ಮನೆಯಿಂದ ಹೊರಟಿದ್ದರಿಂದ ಆ ಬುಲೆಟ್​ಗಳು ಬ್ಯಾಗ್​ನಲ್ಲಿಯೇ ಉಳಿದಿವೆ ಎಂದು ಅವರು ಸಮಜಾಯಿಷಿ ನೀಡಿದರು.

ಅವರು ನೀಡಿದ ಲೈಸೆನ್ಸ್ ಅನ್ನು ಪರಿಶೀಲಿಸಿದ ವಿಮಾನದ ಪೊಲೀಸ್ ಸಿಬ್ಬಂದಿ ಅದು ಅಸಲಿ ಎಂದು ಖಚಿತವಾದ ಬಳಿಕ ಅವರಿಗೆ ವಿಮಾನ ಏರಲು ಅವಕಾಶ ನೀಡಿದರು. ಅವರ ಬಳಿಯಿದ್ದ ಎರಡು ಬುಲೆಟ್​ಗಳನ್ನು ಸೀಜ್ ಮಾಡಲಾಗಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಜಯನಗರ, ವೈಟ್​ಫೀಲ್ಡ್, ರಾಜಾಜಿನಗರ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್

Karnataka Weather Today: ಬೆಂಗಳೂರಿನಲ್ಲಿ ಅ. 17ರವರೆಗೆ ವಿಪರೀತ ಮಳೆ; ಕರಾವಳಿಯಲ್ಲೂ ನಿಲ್ಲದ ವರುಣನ ಆರ್ಭಟ

Published On - 1:54 pm, Wed, 13 October 21