ಬೆಂಗಳೂರು: ಚೆನ್ನಾಗಿ ಕಾಣಬೇಕು. ಸಿನಿಮಾ ಹಿರೋಗಳ ರೀತಿ ಬಲಿಷ್ಠವಾದ ದೇಹ ಹೊಂದಿರಬೇಕು ಅಂತ ಯುವಕರು ಜಿಮ್ಗೆ ಹೋಗಿ ವರ್ಕೌಟ್ ಮಾಡುತ್ತಾರೆ. ಹೀಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಹೋದ ಯುವಕನೊಬ್ಬನಿಂದ ಜಿಮ್ ಟ್ರೈನರ್ ಲಕ್ಷ ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಜಿಮ್ ಟ್ರೈನರ್ ಮಾತು ನಂಬಿ ಯುವಕ ಸುಮಾರು 7 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾನೆ.
7 ಲಕ್ಷ ಹಣ ಕಳೆದುಕೊಂಡ ಹೊಸಕೆರೆಹಳ್ಳಿಯ ಯುವಕ ಕೌಶಿಕ್, ಜಿಮ್ ಟ್ರೈನರ್ ಮೋಹನ್ ವಿರುದ್ಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ಜಿಮ್ ಟ್ರೈನರ್ ಮೋಹನ್ ಪರಾರಿಯಾಗಿದ್ದಾನೆ. ಮೋಹನ್ ಬೆಂಗಳೂರಿನ ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸುತ್ತಿದ್ದ. ಜಿಮ್ಗೆ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲು ಕೌಶಿಕ್ ಹೋಗಿದ್ದ. ಕೆಲವು ಫೋಟೋಗಳನ್ನು ತೋರಿಸಿ ಮೂರೇ ತಿಂಗಳಲ್ಲಿ ಸಿಕ್ ಪ್ಯಾಕ್ ಮಾಡುವುದಾಗಿ ಮೋಹನ್ ನಂಬಿಸಿದ್ದನಂತೆ.
ಟ್ರೈನಿ ಮೋಹನ್ ಯುವಕನಿಂದ ಆರಂಭದಲ್ಲಿ 2 ಲಕ್ಷ ರೂಪಾಯಿ ಪಡೆದಿದ್ದ. ನಂತರ 5 ಲಕ್ಷ ಸಾಲ ಕೊಡಿಸುವಂತೆ ಕೌಶಿಕ್ ಬಳಿ ಕೇಳಿದ್ದ. ಮೋಹನ್ ಮಾತು ಕೇಳಿ ಕೌಶಿಕ್ ಸಾಲ ಕೊಡಿಸಿದ್ದ. ಕೌಶಿಕ್ ತನ್ನ ಹೆಸರಿನಲ್ಲೇ ಮೋಹನ್ಗೆ ಸಾಲ ಕೊಡಿಸಿದ್ದನು. ನಂತರ ಸಿಕ್ಸ್ ಪ್ಯಾಕ್ ಮಾಡಿಸದೇ, ಸಾಲದ ಇಎಂಐ ಕಟ್ಟದೇ ಕೌಶಿಕ್ಗೆ ಜಿಮ್ ಟ್ರೈನರ್ ಮೋಹನ್ ಅವಾಜ್ ಹಾಕುತ್ತಿದ್ದನಂತೆ. ಸದ್ಯ ಈ ಪ್ರಕರಣ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೋಹನ್ ಪರಾರಿಯಾಗಿದ್ದಾನೆ.
ಇದನ್ನೂ ಓದಿ
Talguppa Railway Station: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋದ ಯುವಕನ ಕಾಲು ತುಂಡು
(Gym Trainer cheated on the young man without giving him money)
Published On - 11:17 am, Tue, 29 June 21