ಬೆಂಗಳೂರಿನ ಕೊಳದ ಮಠದ ಶಾಂತವೀರ ಸ್ವಾಮೀಜಿ ಲಿಂಗೈಕ್ಯ; ಹೃದಯಾಘಾತದಿಂದ ನಿಧನ

| Updated By: Lakshmi Hegde

Updated on: Apr 30, 2022 | 1:13 PM

ಈಗ 8-9 ತಿಂಗಳ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಕೊಳದ ಮಠದ ಶಾಂತವೀರ ಸ್ವಾಮೀಜಿಯವರ ಹೆಸರು ಮುನ್ನೆಲೆಗೆ ಬಂದಿತ್ತು.  ವಿವಿಧ ಸ್ವಾಮೀಜಿಗಳೊಂದಿಗೆ ಸೇರಿ ಸುದ್ದಿಗೋಷ್ಠಿ ನಡೆಸಿದ್ದ ಅವರು, ಯಡಿಯೂರಪ್ಪನವರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಬಾರದು ಎಂದು ಆಗ್ರಹಿಸಿದ್ದರು.

ಬೆಂಗಳೂರಿನ ಕೊಳದ ಮಠದ ಶಾಂತವೀರ ಸ್ವಾಮೀಜಿ ಲಿಂಗೈಕ್ಯ; ಹೃದಯಾಘಾತದಿಂದ ನಿಧನ
ಕೊಳದ ಮಠದ ಶಾಂತವೀರ ಸ್ವಾಮೀಜಿ
Follow us on

ಬೆಂಗಳೂರಿನ ಕೊಳದ ಮಠದ ಶಾಂತವೀರ ಸ್ವಾಮೀಜಿ ಇಂದು ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಅವರಿಗೆ 80ವರ್ಷ ವಯಸ್ಸಾಗಿತ್ತು. ಸ್ವಾಮೀಜಿ ನಿಧನದ ಬಗ್ಗೆ ಅವರ ಅಣ್ಣನ ಮಗ ಹರ್ಷ ಮಾಹಿತಿ ನೀಡಿದ್ದಾರೆ. ಸ್ವಾಮೀಜಿ ನಿನ್ನೆ ಆರಾಮಾಗಿಯೇ ಇದ್ದರು. ಮಹಾಲಕ್ಷ್ಮೀ ಲೇಔಟ್​​ನಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೂ ಹೋಗಿದ್ದರು. ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಹಾಗೇ, ಇಂದು ಬೆಳಗ್ಗ ನಾನು ಮಠಕ್ಕೆ ಬಂದು ನೋಡಿದಾಗ ಅವರು ನಿಧನರಾಗಿದ್ದರು. ಆದರೆ ಆಸ್ಪತ್ರೆಗೆ  ಕರೆದುಕೊಂಡು ಹೋಗಲಾಯಿತು. ಸ್ವಾಮೀಜಿ ನಿಧನರಾಗಿದ್ದನ್ನು ವೈದ್ಯರು ದೃಢಪಡಿಸಿದರು. ಯಾವಾಗ? ಎಷ್ಟೊತ್ತಿಗೆ ಪ್ರಾಣ ಹೋಗಿದೆ ಎಂಬುದು ಗೊತ್ತಿಲ್ಲ.  ಬೆಳಗಿನ ಜಾವವೇ ಪ್ರಾಣ ಹೋಗಿರಬಹುದು ಎಂದು  ತಿಳಿಸಿದ್ದಾರೆ.

ಈಗ 8-9 ತಿಂಗಳ ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗ ಕೊಳದ ಮಠದ ಶಾಂತವೀರ ಸ್ವಾಮೀಜಿಯವರ ಹೆಸರು ಮುನ್ನೆಲೆಗೆ ಬಂದಿತ್ತು.  ವಿವಿಧ ಸ್ವಾಮೀಜಿಗಳೊಂದಿಗೆ ಸೇರಿ ಸುದ್ದಿಗೋಷ್ಠಿ ನಡೆಸಿದ್ದ ಅವರು, ಯಡಿಯೂರಪ್ಪ ಬದಲಾವಣೆ ವಿಚಾರ ಕುರಿತು ಊಹಾಪೋಹ ಕೇಳಿ ಬರುತ್ತಿದೆ. ರಾಜ್ಯಕೀಯ ಅನ್ನೋದು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ವೀರಶೈವ ಲಿಂಗಾಯತ ಜನಾಂಗದವರು ಐವತ್ತಕ್ಕು ಹೆಚ್ಚು ಜನ ಸ್ಥಾನದಲ್ಲಿದ್ದಾರೆ. ಸಮುದಾಯವನ್ನು ಕಡೆಗಣಿಸುವ ಕೆಲಸ ಆಗಬಾರದು ಎಂದಿದ್ದರು. ನಮ್ಮ ಸಾಧು ಸಂತರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುತ್ತೀವಿ. ಕರ್ನಾಟಕದ ವತಿಯಿಂದ ಸುಮಾರು ಮೂನ್ನೂರರಿಂದ ನಾನೂರು ಸಾಧು ಸಂತರನ್ನು ಸೇರಿಸಿ ಮೋದಿಯನ್ನು ಭೇಟಿ ಮಾಡುತ್ತೇವೆ ಎಂದು ಕೊಳದ ಮಠದ ಡಾ.ಶಾಂತವೀರ ಮಹಾಸ್ವಾಮಿ ಹೇಳಿದ್ದರು.

ಹಾಗೇ ಕಳೆದ ವರ್ಷ ಬಿಜೆಪಿ ಎಸ್​ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಮತಾಂತರದ ಆರೋಪ ಹೊರೆಸಿ ಡಾ.ಶಾಂತವೀರ ಸ್ವಾಮಿ ಸುದ್ದಿಯಾಗಿದ್ದರು. ನಾರಾಯಣಸ್ವಾಮಿಯವರು ತಮ್ಮ ಊರಿನಲ್ಲಿ ಚರ್ಚ್​ ನಿರ್ಮಿಸಿದ್ದಾರೆ. ಜನರನ್ನು ರಹಸ್ಯವಾಗಿ ಮತಾಂತರ ಮಾಡುತ್ತಿದ್ದಾರೆ. ಹೀಗೆ ಮತಾಂತರ ಆದವರೆಲ್ಲ ಮರಳಿ ತಮ್ಮ ಧರ್ಮಕ್ಕೆ ಬರಬೇಕು ಎಂದು ಹೇಳಿದ್ದರು. ಅಷ್ಟೇ ಅಲ್ಲ, ಇದೇ ವಿಚಾರವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿಯ ಇತರ ನಾಯಕರಿಗೆ ಪತ್ರವನ್ನೂ ಬರೆದಿದ್ದನ್ನು ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ PSI ಹುದ್ದೆಗಳಿಗೆ ಮರು ಪರೀಕ್ಷೆ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ; ಪರೀಕ್ಷೆ ರದ್ದು ಮಾಡುವಂತೆ ಆಗ್ರಹ

Published On - 12:56 pm, Sat, 30 April 22