ಬೆಂಗಳೂರಿನಲ್ಲಿ PSI ಹುದ್ದೆಗಳಿಗೆ ಮರು ಪರೀಕ್ಷೆ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ; ಪರೀಕ್ಷೆ ರದ್ದು ಮಾಡುವಂತೆ ಆಗ್ರಹ

ನಾವು ನಿಯತ್ತಿನಿಂದ ಪರೀಕ್ಷೆ ಬರೆದು ಪಾಸ್ ಆಗಿದ್ದೇವೆ. ಮೂರು ವರ್ಷಗಳ ಕಾಲ ಸತತವಾಗಿ ಓದಿದ್ದೆವು. ಈಗ ಸರ್ಕಾರ ಪರೀಕ್ಷೆ ರದ್ದು ಮಾಡಿದೆ. ಮೂರು ತಿಂಗಳಲ್ಲಿ ಪರೀಕ್ಷೆ ನಡೆಸುತ್ತೇವೆ ಅಂತೀದ್ದಾರೆ. ನಾವು ಪರೀಕ್ಷೆಗೆ ಯಾವುದೇ ತಯಾರಿ ಮಾಡಿಲ್ಲ

ಬೆಂಗಳೂರಿನಲ್ಲಿ PSI ಹುದ್ದೆಗಳಿಗೆ ಮರು ಪರೀಕ್ಷೆ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ; ಪರೀಕ್ಷೆ ರದ್ದು ಮಾಡುವಂತೆ ಆಗ್ರಹ
ಪ್ರತಿಭಟನೆ ನಡೆಸುತ್ತಿರುವ ಅಭ್ಯರ್ಥಿಗಳು
Follow us
TV9 Web
| Updated By: sandhya thejappa

Updated on:Apr 30, 2022 | 1:13 PM

ಬೆಂಗಳೂರು: PSI ಹುದ್ದೆಗಳಿಗೆ (PSI Recruitment) ಮರು ಪರೀಕ್ಷೆ (Re Exam) ನಡೆಸಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಇಂದು (ಏಪ್ರಿಲ್ 30) ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಧರಣಿ ನಡೆಸಿದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು, ಮರು ಪರೀಕ್ಷೆ ನಿರ್ಧಾರವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಪಿಎಸ್ಐ ವಿದ್ಯಾರ್ಥಿಗಳು, ತನಿಖೆ ಮುಗಿಯದೇ ಪರೀಕ್ಷೆ ರದ್ದು ಮಾಡಿದ್ದಾರೆ. ಯಾರು ನ್ಯಾಯಯುತ ವಿದ್ಯಾರ್ಥಿಗಳು ಯಾರು ಅಕ್ರಮ ವಿದ್ಯಾರ್ಥಿಗಳು ಎಂಬುದು ತಿಳಿದಿಲ್ಲ. ನಾವು 5 ವರ್ಷದಿಂದ ಓದುತ್ತಾ ಇದ್ದೇವೆ. ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ನಾವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೇವೆ ಅಂತ ಅಳಲು ತೋಡಿಕೊಂಡರು.

ನಾವು ನಿಯತ್ತಿನಿಂದ ಪರೀಕ್ಷೆ ಬರೆದು ಪಾಸ್ ಆಗಿದ್ದೇವೆ. ಮೂರು ವರ್ಷಗಳ ಕಾಲ ಸತತವಾಗಿ ಓದಿದ್ದೆವು. ಈಗ ಸರ್ಕಾರ ಪರೀಕ್ಷೆ ರದ್ದು ಮಾಡಿದೆ. ಮೂರು ತಿಂಗಳಲ್ಲಿ ಪರೀಕ್ಷೆ ನಡೆಸುತ್ತೇವೆ ಅಂತೀದ್ದಾರೆ. ನಾವು ಪರೀಕ್ಷೆಗೆ ಯಾವುದೇ ತಯಾರಿ ಮಾಡಿಲ್ಲ. ನಾವು ನ್ಯಾಯಯುತವಾಗಿ ಇದ್ದೇವೆ. ಯಾರು ಅಕ್ರಮದಲ್ಲಿ ಭಾಗಿಯಾಗಿದ್ದರೆ ಅವರನ್ನು ಬಂಧಿಸಲಿ. ನಾವು ತಪ್ಪು ಮಾಡಿದ್ರೆ ನಮ್ಮನ್ನು ಬಂಧಿಸಲಿ. ಅದು ಬಿಟ್ಟು ಪರೀಕ್ಷೆ ಏಕಾಏಕಿ ರದ್ದು ಮಾಡಿದ್ದು ತಪ್ಪು. ನಮಗೆ ಅನ್ಯಾಯ ಆಗಿದೆ, ಭವಿಷ್ಯ ಮಂಕಾಗಿದೆ. ನಾವೆಲ್ಲ ಬಡವರು. ಕಷ್ಟ ಪಟ್ಟು ಓದಿ ಪಾಸಾಗಿದ್ದೇವೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ನೀಡಲಿ. ನಮ್ಮನ್ನು ಸರ್ಕಾರ ರಕ್ಷಿಸುವ ಕೆಲಸ ಮಾಡಲಿ ಅಂತ ಅಭ್ಯರ್ಥಿಗಳಾದ ಚೈತ್ರ, ರಾಜೇಶ್ವರಿ ಹೇಳಿಕೆ ನೀಡಿದ್ದಾರೆ.

ಫ್ರೀಡಂ ಪಾರ್ಕ್ನಲ್ಲಿ ನಿವೃತ್ತ ಯೋಧ ಓಂಕಾರಪ್ಪ ಎಂಬುವವರು ಮಾತನಾಡಿ, ನಾನು ಸೈನಿಕನಾಗಿ ಕೆಲಸ ಮಾಡಿದ್ದೇನೆ. ಪಿಎಸ್ಐ ಎಕ್ಸಾಂಗಾಗಿ ಮೂರು ವರ್ಷ ಓದಿದ್ದೇನೆ. ಕೆಎಸ್ಪಿಎಸ್, ಎಫ್ಡಿಎ, ವೈರ್ಲೆಸ್ ಪಿಎಸ್ಐ ಆಗಿತ್ತು. ನಾವು ಗಡಿ ಕಾದರೆ, ಪೊಲೀಸ್ ಒಳಗೆ ಕಾಯುತ್ತಾನೆ. ಭಾಸ್ಕರ್ ರಾವ್ ಆಮ್ ಆದ್ಮಿ ಸೇರಿಕೊಂಡು ಬಾಯಿಗೆ ಬಂದಂತೆ ಮಾತನಾಡ್ತಾರೆ. ಆಮ್ ಆದ್ಮಿಗೆ ಹೋದ ತಕ್ಷಣ ತಿನ್ನುವ ಅನ್ನ ನೀಡುವ ಬಗ್ಗೆ ಮಾತನಾಡಬೇಡಿ. ಪೊಲೀಸ್ ಇಲಾಖೆ ಬಗ್ಗೆ ಮಾತನಾಡಬೇಡಿ. ಇಷ್ಟು ಜನಕ್ಕೆ ಅನ್ಯಾಯ ಆಗ್ತಾ ಇದೆ. 17 ವರ್ಷ ಸೇವೆ ಮಾಡಿ ಬಂದಿದ್ದೇವೆ. ನನ್ನ ಜೀವನದಲ್ಲಿ ಜನ ಸೇವೆ ಮಾಡೋದಕ್ಕೆ ಬಂದೆ. ಕೆಎಎಸ್ ಎಕ್ಸಾಮ್ ಬರೆದು ಒಂದು ವರ್ಷ ಆಯ್ತು ರಿಸಲ್ಟ್ ಬಂದಿಲ್ಲ. ನಾವು ಎಲ್ಲಿಗೆ ಹೋಗಬೇಕಾಗುತ್ತೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಗೃಹ ಸಚಿವರು ಟೆಕ್ನಾಲಜಿ ಉಪಯೋಗ ಮಾಡಿದ್ದೀರಿ ಅಂತಾರೆ. ಮತ್ತೆ ಪರೀಕ್ಷೆಯಾದ್ರೂ ಟೆಕ್ನಾಲಜಿ ಬಳಸಿ ಅಕ್ರಮ ನಡೆಯಲ್ವಾ? ನಮ್ಮನ್ನು ಉಳಿಸಿ, ನಿಮ್ಮನ್ನು ಸಾಯೋವರೆಗೂ ನೆನಪಿಸುತ್ತೇವೆ ಗೃಹ ಸಚಿವರೆ. ಪ್ರಧಾನ ಮಂತ್ರಿ ಮನ್ ಕೀ ಬಾತ್ ವರೆಗೂ ನಾನು ಈ ಅಕ್ರಮದ ಬಗ್ಗೆ ತಲುಪಿಸುತ್ತೇನೆ. ಸಿಐಡಿ ತನಿಖೆಗೆ ಕೊಟ್ಟಿದ್ದೀರಾ ಅದು ನ್ಯಾಯಯುತವಾಗಿ ನಡೆಯಲ್ಲ. ಗೃಹ ಸಚಿವ, ಸಿಎಂ ಬಳಿ ನಾವು ಹೋಗುತ್ತೇವೆ. ಕೆಲಸ ಕೊಡಿಸುವ ಹಾಗೇ ಇದ್ದರೆ, ನೀವು ಕೊಡಿಸಿ ಗೃಹ ಸಚಿವರೆ. 41 ವರ್ಷದ ಸೈನಿಕ ಕುಳಿತು ಓದಬೇಕು. 25 ವರ್ಷದ ವಿದ್ಯಾರ್ಥಿಗಳ ಜೊತೆ ನಾನು ಫೈಟ್ ಮಾಡಬೇಕು. ಈ ವಿಷಯ ಮೋದಿಯವರೆಗೆ ಮುಟ್ಟಬೇಕು ಅಂತ ಪಿಎಸ್ಐ ಪರೀಕ್ಷೆ ಬರೆದಿರುವ ನಿವೃತ್ತ ಯೋಧ ಓಂಕಾರಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಹೇಳಿಕೆ ನೀಡಿರುವ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ, ಪರೀಕ್ಷಾ ಅಕ್ರಮ ನಡೆದಿರುವುದರಿಂದ ಮರುಪರೀಕ್ಷೆ ಅನಿವಾರ್ಯ. ದೈಹಿಕ ಸಾಮರ್ಥ್ಯ ಪರೀಕ್ಷೆ ಇರುವುದಿಲ್ಲ, ಲಿಖಿತ ಪರೀಕ್ಷೆ ಮಾತ್ರ. 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಧಿಸೂಚನೆ ಹಿಂಪಡೆದಿಲ್ಲ. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದರಿಂದ ಮರುಪರೀಕ್ಷೆಗೆ ಆದೇಶ ಮಾಡಲಾಗಿದೆ. ಹೊಸ ಹೊಸ ತಂತ್ರಜ್ಞಾನ ಬಳಸಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾರೆ. ಅಕ್ರಮದಲ್ಲಿ ಸಿಲುಕಿರುವವರನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ನೀಡಲಾಗುತ್ತದೆ. ಕಷ್ಟಪಟ್ಟು ಓದಿದವರಿಗೆ ಅನ್ಯಾಯವಾಗಬಾರದೆಂದು ತೀರ್ಮಾನಿಸಿದ್ದೇವೆ ಎಂದರು.

ಇದನ್ನೂ ಓದಿ

Cheteshwar Pujara: ಕೌಂಟಿಯಲ್ಲಿ ಪೂಜಾರ ಹ್ಯಾಟ್ರಿಕ್ ಶತಕ: ಪಾಕ್ ಸ್ಟಾರ್ ಬ್ಯಾಟರ್​ನೊಂದಿಗೆ ಜೊತೆಯಾಟ

ಬೆಂಗಳೂರಿನ ನಡುರಸ್ತೆಯಲ್ಲಿ ಕುಳಿತು ಉಪಹಾರ ಸೇವಿಸಿದ ವ್ಯಕ್ತಿ; ವಿಡಿಯೋ ಮಜವಾಗಿದೆ

Published On - 1:05 pm, Sat, 30 April 22