ಕನ್ನಡ ಬಿಡಿ ಎಂದು ಅಮಿತ್ ಶಾ ಎಲ್ಲಿಯೂ ಹೇಳಿಲ್ಲ; ಸಿದ್ದರಾಮಯ್ಯ ಮಾತಿಗೆ ಸಿ ಟಿ ರವಿ ತಿರುಗೇಟು

ಸಿದ್ದರಾಮಯ್ಯ ನಮ್ಮ ದೇಶದಲ್ಲಿರುವ ಭಾಷೆಯನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಆಕ್ರಮಣ ಮಾಡಿ ಹೇರಿದ ಗುಲಾಮಗಿರಿಯ ಭಾಷೆಗೆ ಆದ್ಯತೆ ಕೊಡುತ್ತಾರೋ ಎಂದು ಸಿಟಿ ರವಿ ಪ್ರಶ್ನಿಸಿದರು.

ಕನ್ನಡ ಬಿಡಿ ಎಂದು ಅಮಿತ್ ಶಾ ಎಲ್ಲಿಯೂ ಹೇಳಿಲ್ಲ; ಸಿದ್ದರಾಮಯ್ಯ ಮಾತಿಗೆ ಸಿ ಟಿ ರವಿ ತಿರುಗೇಟು
ಸಿದ್ದರಾಮಯ್ಯ ಮತ್ತು ಸಿಟಿ ರವಿ
Follow us
TV9 Web
| Updated By: Lakshmi Hegde

Updated on: Apr 30, 2022 | 3:32 PM

ಸಿದ್ದರಾಮಯ್ಯನವರು ತಾವು ಇಂಗ್ಲಿಷ್​ ಮತ್ತು ಸೋನಿಯಾ ಗಾಂಧಿ ಗುಲಾಮ ಎಂಬುದನ್ನು ಘೋಷಣೆ ಮಾಡಿಕೊಳ್ಳಲಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ‘ಬಿಜೆಪಿ ನಾಯಕರೇ, ನೀವು ಅಮಿತ್​ ಶಾ ಗುಲಾಮರಾಗಬೇಡಿ’ ಎಂಬ ಸಿದ್ದರಾಮಯ್ಯನವರ ಹೇಳಿಕೆ ತಿರುಗೇಟು ಕೊಟ್ಟ ಸಿ.ಟಿ.ರವಿ ಈ ಮಾತುಗಳನ್ನಾಡಿದರು. ತುಮಕೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ಮಾತನಾಡಿ,  ಸಿದ್ದರಾಮಯ್ಯನವರು ಮೊದಲು ತಾವು ಗುಲಾಮರು ಎಂಬುದನ್ನು ಒಪ್ಪಿಕೊಂಡು, ಬಳಿಕ ಮಾತನಾಡಲಿ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ದೇಶದಲ್ಲಿರುವ ಭಾಷೆಯನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಆಕ್ರಮಣ ಮಾಡಿ ಹೇರಿದ ಗುಲಾಮಗಿರಿಯ ಭಾಷೆಗೆ ಆದ್ಯತೆ ಕೊಡುತ್ತಾರೋ ಎಂದು ಪ್ರಶ್ನಿಸಿದರು. ಹಾಗೇ, ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ. ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ. ನಾವೆಂದಿಗೂ ಗುಲಾಮರಾಗುವ ಪ್ರಶ್ನೆಯೇ ಇಲ್ಲ. ಅಮಿತ್​ ಶಾ ಹೇಳಿದ್ದು, ಮಾತೃಭಾಷೆಗೆ ಮನ್ನಣೆ ಕೊಡಿ ಎಂದು. ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಭಾಷೆಯ ಬದಲಿಗೆ ಹಿಂದಿ ಬಳಸಿ ಎಂದು ಅವರು ಹೇಳಿದ್ದಾರೆಯೇ ಹೊರತು ಕನ್ನಡ ಬಿಡಿ ಎಂದಿಲ್ಲ. ಹಾಗೊಮ್ಮೆ ಅಮಿತ್​ ಶಾ ಕನ್ನಡ ಬಿಡಿ ಎಂದು ಹೇಳಿದ್ದರೆ, ನಾವೂ ಧ್ವನಿ ಎತ್ತುತ್ತಿದ್ದೆವು ಎಂದು ಹೇಳಿದ್ದಾರೆ.

ಇಂಗ್ಲಿಷ್​ ನಿಜಕ್ಕೂ ಗುಲಾಮತನದ ಭಾಷೆ. ಹಾಗೆ ಹೇಳುವುದಾದರೆ ಸಿದ್ದರಾಮಯ್ಯನವರು ತಾವು ಇಂಗ್ಲಿಷ್​ ಗುಲಾಮ ಎಂಬುದನ್ನು ಒಪ್ಪಿಕೊಳ್ಳಲೇಬೇಕು.  ಅಮಿತ್​ ಶಾ ಮಾತುಗಳನ್ನು ಸಿದ್ದರಾಮಯ್ಯನವರು ತಿರುಚಿದ್ದಾರೆ. ತಮಗೆ ಬೇಕಾದಂತೆ ಅಂದುಕೊಂಡು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ನಮಗೆ ಪಾಠ ಮಾಡುವುದಕ್ಕೂ ಮೊದಲು ಅವರು ತಾವು ಗುಲಾಮ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಸಿಟಿ ರವಿ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಬಹುತೇಕ ರಾಜಕಾರಣಿಗಳು ಬೆಂಗಳೂರಿನಲ್ಲಿ ವೈಭವದ ಜೀವನ ನಡೆಸ್ತಿದಾರೆ -ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ