ಮೇ 3ರಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜ್ಯ ಪ್ರವಾಸ

ಮೇ 3ರಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ರಾಜ್ಯ ಪ್ರವಾಸ
ಕೇಂದ್ರ ಗೃಹ ಸಚಿವ ಅಮಿತ್​ ಶಾ

ಸಂಜೆ 4 ಗಂಟೆಗೆ ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಿ, ಸಂಜೆ 5.30ಕ್ಕೆ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

TV9kannada Web Team

| Edited By: Apurva Kumar Balegere

Apr 29, 2022 | 4:05 PM

ಬೆಂಗಳೂರು: ಮೇ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ 10 ಗಂಟೆಗೆ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ನೃಪತುಂಗ ರಸ್ತೆಯಲ್ಲಿ ನೃಪತುಂಗ ವಿವಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ವೇಳೆ ಫಾರೆನ್ಸಿಕ್ ಸೈನ್ಸ್ ಲ್ಯಾಬ್​ನ್ನು ವರ್ಚುವಲ್ ಉದ್ಘಾಟನೆ ಮಾಡಲಿದ್ದು, ಬಳ್ಳಾರಿಯ ಫಾರೆನ್ಸಿಕ್ ಸೈನ್ಸ್ ಲ್ಯಾಬ್ ಸಹ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಾಟ್ ಗ್ರಿಡ್ ಮತ್ತು ಯಲಹಂಕ ಡಿಸಾಸ್ಟರ್ ರಿಕವರಿ ಸೆಂಟರ್​ನಲ್ಲಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 2ಗಂಟೆಗೆ ಸಿಎಂ ಅಧಿಕೃತ ನಿವಾಸಕ್ಕೆ ಬರಲಿರುವ ಶಾ, ಸಿಎಂ ಅಧಿಕೃತ ನಿವಾಸದಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದೆ.

ಸಂಜೆ 4 ಗಂಟೆಗೆ ಮಲ್ಲೇಶ್ವರಂ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಿ, ಸಂಜೆ 5.30ಕ್ಕೆ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್​ ಕಂಠೀರವ ಸ್ಟೇಡಿಯಂನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ವಿಶೇಷ ವಿಮಾನದ ಮೂಲಕ ರಾತ್ರಿ 8.15ಕ್ಕೆ ಹೆಚ್​ಎಎಲ್​ ಏರ್​ಪೋರ್ಟ್​​ನಿಂದ ದೆಹಲಿಗೆ ತೆರಳಲಿದ್ದಾರೆ. ಇನ್ನೂ ಅದೇ ಮೇ 3ರಂದು ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಶಾ ಭೇಟಿ ನೀಡಿವ ಸಾಧ್ಯತೆಯಿದ್ದು, ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ರೆ ಅಮಿತ್ ಶಾ ಮಂಡ್ಯ ಭೇಟಿ ಇನ್ನೂ ನಿರ್ಧಾರವಾಗಿಲ್ಲ.

ಕರ್ನಾಟಕ ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇದನ್ನೂ ಓದಿ;

Elon Musk: ಟ್ವೀಟ್​ನಿಂದ ಹಣ ಗಳಿಕೆ, ವೇತನ ಕಡಿತ ಸೇರಿದಂತೆ ಸಾಲ ನೀಡುವವರ ಮುಂದೆ ಎಲಾನ್ ಮಸ್ಕ್ ಇಟ್ಟ ಪ್ಲಾನ್​ಗಳಿವು

‘ಆಚಾರ್ಯ’ ಚಿತ್ರಕ್ಕೆ ಅದ್ದೂರಿ ಸ್ವಾಗತ ನೀಡಿದ ಫ್ಯಾನ್ಸ್​; ಇಲ್ಲಿದೆ ವಿಡಿಯೋ

Follow us on

Related Stories

Most Read Stories

Click on your DTH Provider to Add TV9 Kannada