ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿಗೆ ಮುಂದುವರೆದ ಚಿಕಿತ್ಸೆ; ಆರೋಪಿ ಪತ್ತೆಗೆ ಮೂರು ತಂಡ ರಚನೆ

ಘಟನೆ ಬಳಿಕ ತಲೆಮರೆಸಿಕೊಂಡಿರುವ ಆ್ಯಸಿಡ್ ದಾಳಿಕೋರ ನಾಗೇಶ್ ಪತ್ತೆಗಾಗಿ ಮೂರು ತಂಡಗಳ ರಚನೆ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್, ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿಕುಮಾರ್, ವಿಜಯನಗರ ಉಪವಿಭಾಗದ ಎಸಿಪಿ ಸ್ಕ್ವಾಡ್ನಿಂದ ಶೋಧ ಕಾರ್ಯ ಶುರುವಾಗಿದೆ.

ಆ್ಯಸಿಡ್ ದಾಳಿಗೆ ಒಳಗಾಗಿರುವ ಯುವತಿಗೆ ಮುಂದುವರೆದ ಚಿಕಿತ್ಸೆ; ಆರೋಪಿ ಪತ್ತೆಗೆ ಮೂರು ತಂಡ ರಚನೆ
ಆ್ಯಸಿಡ್ ದಾಳಿ ನಡೆಸಿದ ಜಾಗ
Follow us
TV9 Web
| Updated By: ಆಯೇಷಾ ಬಾನು

Updated on:Apr 29, 2022 | 12:14 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯೊಬ್ಬ ಯುವತಿಯ ಮೇಲೆ ಌಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಂಟ್ಜಾನ್ಸ್ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ಮುಂದುವರಿದಿದೆ. ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಲಕ್ಷ್ಮೀ ಆಸ್ಪತ್ರೆಯಿಂದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಸದ್ಯ ಚಿಕಿತ್ಸೆ ಮುಂದುವರೆದಿದೆ. ಌಸಿಡ್ ಎರಚಿದ್ದ ನಾಗೇಶ್ಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.

ಆರೋಪಿ ನಾಗೇಶ್ ಪತ್ತೆಗಾಗಿ ಮೂರು ತಂಡ ಘಟನೆ ಬಳಿಕ ತಲೆಮರೆಸಿಕೊಂಡಿರುವ ಆ್ಯಸಿಡ್ ದಾಳಿಕೋರ ನಾಗೇಶ್ ಪತ್ತೆಗಾಗಿ ಮೂರು ತಂಡಗಳ ರಚನೆ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಶಾಂತ್, ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿಕುಮಾರ್, ವಿಜಯನಗರ ಉಪವಿಭಾಗದ ಎಸಿಪಿ ಸ್ಕ್ವಾಡ್ನಿಂದ ಶೋಧ ಕಾರ್ಯ ಶುರುವಾಗಿದೆ. ನಿನ್ನೆ ಮಧ್ಯಾಹ್ನದ ವೇಳೆ ಆರೋಪಿ ನಾಗೇಶ್ ಕೋರ್ಟ್ ಬಳಿ ಹೋಗಿ ವಕೀಲರನ್ನ ಭೇಟಿಯಾಗಿದ್ದಾನೆ. ಆನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ನಿನ್ನೆಯಿಂದ ಆರೋಪಿಯ ಗಾರ್ಮೆಂಟ್ಸ್ ಸಹ ಮುಚ್ಚಲಾಗಿದೆ. ಆರೋಪಿ ನಾಗೇಶ್ನ ಸಹೋದರ ಕೂಡ ತಲೆಮರೆಸಿಕೊಂಡಿದ್ದಾನೆ. ಆರೋಪಿಯ ಊರು, ಸಂಬಂಧಿಕರ ಮನೆ, ಎಲ್ಲಾ ಕಡೆ ನಿನ್ನೆ ರಾತ್ರಿಯಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಈವರೆಗೂ ಆರೋಪಿ ಬಗ್ಗೆ ಸಣ್ಣ ಕುರುಹು ಕೂಡ ಪತ್ತೆಯಾಗಿಲ್ಲ. ಹೊಸೂರಿನಿಂದ ಆರೋಪಿ ಸಂಬಂಧಿಕರು, ಸ್ನೇಹಿತರನ್ನು ಕರೆದು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಪಿಯ ಮೊಬೈಲ್ ಸಿಡಿಆರ್ ಶೋಧಿಸಿಲಾಗಿದೆ.

ಆರೋಪಿ ಕೊನೆಯದಾಗಿ ಸಂಪರ್ಕಿಸಿದ್ದ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೋರ್ಟ್ ಆವರಣ ಸುತ್ತಮುತ್ತ ಒಂದು ತಂಡ ಕಾರ್ಯ ನಿರ್ವಹಿಸುತ್ತಿದೆ. ಕೋರ್ಟ್ ಗೆ ಶರಣಾಗಲು ಬಂದ್ರೆ ಲಾಕ್ ಮಾಡಲು ತಯಾರಿ ನಡೆದಿದೆ. ಮತ್ತೊಂದು ತಂಡ ಟೆಕ್ನಿಕಲ್ ಎವಿಡೆನ್ಸ್ ಮೇಲೆ ಕಣ್ಣಿಟ್ಟಿದೆ. ಆತನ‌ ಮೊಬೈಲ್ ನಂಬರ್ ಟ್ರಾಕ್ ಗೆ ಹಾಕಿಕೊಳ್ಳಲಾಗಿದೆ. ಆತನ ಬ್ಯಾಂಕ್ ಟ್ರಾನ್ಸಾಕ್ಷನ್ ಮೇಲೆಯೂ ನಿಗಾ ಇಡಲಾಗಿದೆ. ಎಟಿಎಂ ನಿಂದ ಹಣ ಡ್ರಾ ಮಾಡ್ತಾನಾ? ಹೋಟೆಲ್ ಬುಕ್ ಮಾಡಲು ಎಟಿಎಂ ಕಾರ್ಡ್ ಉಪಯೋಗಿಸ್ತಾನಾ ಎಂದು ಖಾಕಿ ಕಣ್ಣಿಟ್ಟಿದೆ.

ಗಾಯ ವಾಸಿಯಾಗಲು ಸಾಕಷ್ಟು ಸಮಯ ಬೇಕಾಗುತ್ತದೆ ಇನ್ನು ಌಸಿಡ್ ದಾಳಿಗೆ ಒಳಗಾಗಿರುವ ಯುವತಿ ಸೇಂಟ್ಜಾನ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸದ್ಯ ಸಂತ್ರಸ್ತೆ ಯುವತಿಯ ಜೀವಕ್ಕೆ ಯಾವುದೇ ತೊಂದರೆಯಿಲ್ಲ. ಗಾಯ ವಾಸಿಯಾಗಲು ಸಾಕಷ್ಟು ಸಮಯ ಬೇಕಾಗುತ್ತದೆ. ಗಾಯ ವಾಸಿಯಾದ ನಂತರ ಸರ್ಜರಿ ಮಾಡಲಾಗುತ್ತೆ ಎಂದು ವೈದ್ಯರು ತಿಳಿಸಿದ್ದಾರೆ.

ಌಸಿಡ್ ಹಾಕಿದ ನಂತರ ಪೋಷಕರಿಗೆ ಕರೆ ಮಾಡಿದ್ದ ನಾಗೇಶ್ ಯುವತಿ ಮೇಲೆ ಌಸಿಡ್ ಹಾಕಿದ ನಂತರ ಆರೋಪಿ ನಾಗೇಶ್ ಪೋಷಕರಿಗೆ ಕರೆ ಮಾಡಿದ್ದ. ಅಪ್ಪ, ಅಮ್ಮ, ಅಣ್ಣನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ಌಸಿಡ್ ಹಾಕಿದ್ದೇನೆ, ಮನೆಯಿಂದ ಹೊರಟುಹೋಗಿ ಎಂದಿದ್ದ. ನಾಗೇಶ್ ಕರೆ ಬರುತ್ತಿದ್ದಂತೆ ಕುಟುಂಬಸ್ಥರು ಮನೆಯಿಂದ ತೆರಳಿದ್ದಾರೆ. ಘಟನೆ ನಂತರ ನಾಗೇಶ್ ಕುಟುಂಬದ ಯಾರೊಬ್ಬರೂ ಪತ್ತೆಯಿಲ್ಲ.

ಅಷ್ಟಕ್ಕೂ ಆರೋಪಿ ನಾಗೇಶ್ ಹಿನ್ನೆಲೆ ಏನು? ಎಂಬಿಎ ಪದವೀಧರನಾಗಿರುವ ಆರೋಪಿ‌ ನಾಗೇಶ್, 7 ವರ್ಷದ ಹಿಂದೆ ಯುವತಿಗೆ ಪ್ರಪೋಸ್ ಮಾಡಿದ್ದ. ನಂತರ ಯುವತಿ ಮನೆಯವರು ಮನೆ ಖಾಲಿ ಮಾಡಿ ಕಳುಹಿಸಿದ್ರು. ಬಳಿಕ ಯುವತಿಗೆ ಸಂಪರ್ಕ ಮಾಡಿರಲಿಲ್ಲ. ನಂತರ ಅಣ್ಣನ ಗಾರ್ಮೆಂಟ್ಸ್ ಉಸ್ತುವಾರಿ ನೋಡಿಕೊಂಡಿದ್ದ. ತಾನೂ ಕೂಡ ಗಾರ್ಮೆಂಟ್ಸ್ ಪ್ರಾರಂಭಿಸಿದ್ದ. ಘಟನೆ ಆಗುವ ಎರಡು ದಿನ ಮುಂಚಿತವಾಗಿಯೇ ಗಾರ್ಮೆಂಟ್ಸ್ ಕ್ಲೋಸ್ ಮಾಡಿ ಮನೆಗೂ ಬೀಗ ಹಾಕಿ ಎಸ್ಕೇಪ್ ಆಗಿದ್ದಾನೆ.

ಆ್ಯಸಿಡ್ ಹಾಕಬೇಕು ಅಂತಾ ಮೊದಲೇ ನಿರ್ಧರಿಸಿದ್ದ ಆರೋಪಿ ಒಂದು ವಾರದ ಹಿಂದೆಯೇ ಅಂದ್ರಳ್ಳಿ ಪಟಾಕಿ‌ ಗೋಡೌನ್ ಬಳಿ ಇದ್ದ ಗಾರ್ಮೆಂಟ್ಸ್ ಖಾಲಿ ಮಾಡಿಸಿದ್ದ ಆರೋಪಿ ನಾಗೇಶ್ ಮೊದಲೇ ಕೃತ್ಯ ಎಸಗಲು ಸಂಚು ರೂಪಿಸಿದ್ದ. 27 ರಂದು ಯುವತಿಗೆ ಆ್ಯಸಿಡ್ ಹಾಕಿ ಸರೆಂಡರ್ ಆಗ್ತಿನಿ ಎಂದು ಅಣ್ಣನ ಬಳಿ ಹೇಳಿದ್ದ. ಅದರಂತೆ 28 ರಂದು ಆ್ಯಸಿಡ್ ಎರಚಿ ನಂತರ ಸರೆಂಡರ್ ಆಗಲು ಕೋರ್ಟ್ ಬಳಿ ಹೋಗಿದ್ದ. ನಂತರ ಕೋರ್ಟ್ ಬಳಿ ವಕೀಲರ ಭೇಟಿ ಮಾಡಿ ಎಸ್ಕೇಪ್ ಆಗಿದ್ದಾನೆ. ಅದೇ ಕಾರಣಕ್ಕೆ ಆರೋಪಿ ಅಣ್ಣ ಕೂಡ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ರಾಜಕಾರಣ ಸೇರಲೆಂದು ರಾಜೀನಾಮೆ ಕೊಟ್ಟಿದ್ದ ಐಎಎಸ್ ಅಧಿಕಾರಿಯನ್ನು ಮತ್ತೆ ಸೇವೆಗೆ ನಿಯೋಜಿಸಿದ ಕೇಂದ್ರ ಸರ್ಕಾರ

Published On - 11:42 am, Fri, 29 April 22