Coronavirus 4th Wave: ದೇಶದ ಐದು ಮಹಾನಗರಗಳಲ್ಲಿ ಕೊವಿಡ್ ಪ್ರಕರಣಗಳ ಏರಿಕೆ, ಬೆಂಗಳೂರಿಗೆ ನಂ. 2 ಸ್ಥಾನ

ದೆಹಲಿಯಲ್ಲಿ 4,508 ಸಕ್ರಿಯ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಲ್ಲಿ 1,648 ಸಕ್ರಿಯ ಕೊವಿಡ್ ಪ್ರಕರಣಗಳು ಸಿಕ್ಕಿದ್ದು ಮುಂಬೈ-549 ಸಕ್ರಿಯ ಕೇಸ್, ಚೆನ್ನೈ-255 ಸಕ್ರಿಯ ಕೇಸ್, ಕೋಲ್ಕತ್ತಾದಲ್ಲಿ 272 ಆ್ಯಕ್ಟೀವ್ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

Coronavirus 4th Wave: ದೇಶದ ಐದು ಮಹಾನಗರಗಳಲ್ಲಿ ಕೊವಿಡ್ ಪ್ರಕರಣಗಳ ಏರಿಕೆ, ಬೆಂಗಳೂರಿಗೆ ನಂ. 2 ಸ್ಥಾನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Apr 29, 2022 | 11:45 AM

ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೊನಾ(Coronavirus) ನಾಲ್ಕನೇ ಅಲೆ ಹಾವಳಿ ಶುರುವಾಗಿದೆ. ಐದು ಮಹಾನಗರಗಳಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿವೆ. 2 ಮಹಾನಗರಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಕೇಸ್ ದಾಖಲಾಗುತ್ತಿವೆ. ದೇಶದ ಐದು ಮಹಾನಗರಗಳ ಪೈಕಿ ದೆಹಲಿ ಮೊದಲ ಸ್ಥಾನ ಪಡೆದಿದ್ದು ಬೆಂಗಳೂರು 2ನೇ ಸ್ಥಾನ ಪಡೆದಿದೆ. ಹಾಗೂ ಕ್ರಮವಾಗಿ ಮುಂಬೈ, ಚೆನ್ನೈ, ಕೋಲ್ಕತ್ತಾ 3, 4, 5ನೇ ಸ್ಥಾನದಲ್ಲಿದೆ.

ದೆಹಲಿಯಲ್ಲಿ 4,508 ಸಕ್ರಿಯ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಲ್ಲಿ 1,648 ಸಕ್ರಿಯ ಕೊವಿಡ್ ಪ್ರಕರಣಗಳು ಸಿಕ್ಕಿದ್ದು ಮುಂಬೈ-549 ಸಕ್ರಿಯ ಕೇಸ್, ಚೆನ್ನೈ-255 ಸಕ್ರಿಯ ಕೇಸ್, ಕೋಲ್ಕತ್ತಾದಲ್ಲಿ 272 ಆ್ಯಕ್ಟೀವ್ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

5-12 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ತಯಾರಿ ಬೆಂಗಳೂರಿನಲ್ಲಿ 5-12 ವರ್ಷದ ಒಟ್ಟು 4 ಲಕ್ಷ ಮಕ್ಕಳಿಗೆ ಲಸಿಕೆ ನೀಡಲು ತಯಾರಿ ನಡೆದಿದೆ. ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಸಿದ್ಧತೆ ನಡೆದಿದ್ದು ಕೇಂದ್ರದಿಂದ ಲಸಿಕೆ ನೀಡಲು ಗೈಡ್ ಲೈನ್ಸ್ ಬಂದ ಕೂಡಲೇ ಲಸಿಕೆ ನೀಡಲು ಶುರು ಮಾಡಲಾಗುತ್ತೆ. ಆಯಾ ಶಾಲೆಗಳಲ್ಲೇ ಮಕ್ಕಳಿಗೆ ಲಸಿಕೆ ನೀಡಲು ಬಿಬಿಎಂಪಿ ತಯಾರಿ ಮಾಡಿಕೊಳ್ಳುತ್ತಿದೆ.

ಮೇ 5ಕ್ಕೆ WHO ಕೊರೊನಾ ಸಾವಿನ ವರದಿ ಬಿಡುಗಡೆ ಭಾರತದಲ್ಲಿ ಕೊರೊನಾದಿಂದ ಸಂಭವಿಸಿದ ಸಾವುಗಳ ಸಂಖ್ಯೆಯನ್ನು ಮುಚ್ಚಿಡಲಾಗಿದೆಯೇ? ಭಾರತ ಸರ್ಕಾರವು ಕೊರೊನಾದಿಂದ ದೇಶದಲ್ಲಿ 5.22ಲಕ್ಷ ಮಂದಿ ಸಾವನ್ನಪ್ಪಿದ್ದಾರೆ (Death) ಎಂದು ಅಧಿಕೃತವಾಗಿ ಹೇಳಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯು (WHO) ಭಾರತದಲ್ಲಿ ಕೊರೊನಾದಿಂದ ನಲವತ್ತು ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎನ್ನುತ್ತಿದೆ. ಈ ಬಗ್ಗೆ ಮೇ 5 ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಸಾವಿನ ತನ್ನ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಭಾರತ ಸರ್ಕಾರದ ವಿರೋಧ ಇರುವುದು ವಿಶೇಷ.

ಮೇ 5ಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೊನಾ ಸಾವಿನ ವರದಿ ಬಿಡುಗಡೆ ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಜಾಗತಿಕ ಕೊರೊನಾ ಸಾವಿನ ಸಂಖ್ಯೆಯ ವರದಿಯನ್ನು ಮೇ 5 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಅಂಕಿ ಅಂಶ ಸಿದ್ದಪಡಿಸುವ ಜವಾಬ್ದಾರಿ ಹೊಂದಿರುವ WHO ನ ತಾಂತ್ರಿಕ ಸಲಹಾ ಗುಂಪಿನ ಸದಸ್ಯ ಜಾನ್ ವೇಕ್‌ಫೀಲ್ಡ್ ಹೇಳಿದ್ದಾರೆ. ನ್ಯೂಯಾರ್ಕ್ ಟೈಮ್ಸ್ (NYT) ವರದಿಯ ಪ್ರಕಾರ WHO ಭಾರತದ ಕೋವಿಡ್ ಸಾವಿನ ಸಂಖ್ಯೆ ಸುಮಾರು ನಲವತ್ತು ಲಕ್ಷ ಎಂದು ಹೇಳುತ್ತದೆ. ಇದು ದೇಶದ ಅಧಿಕೃತ ಅಂಕಿ ಅಂಶಕ್ಕಿಂತ ಎಂಟು ಪಟ್ಟು ಹೆಚ್ಚು. ಭಾರತ ಸರ್ಕಾರವು ದೇಶದಲ್ಲಿ ಇದುವರೆಗೂ ಕೊರೊನಾದಿಂದ 5.22 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಆದರೆ ದೇಶದಲ್ಲಿ ಕೋವಿಡ್ ನಿಂದ ಉಂಟಾದ ಸಾವುಗಳನ್ನು ಅಂದಾಜು ಮಾಡಲು ಬಳಸುವ ವಿಧಾನವನ್ನು ಭಾರತ ಆಕ್ಷೇಪಿಸಿದೆ.

ಇದನ್ನೂ ಓದಿ: ಅಜಯ್​ ದೇವಗನ್​ಗೆ ಅಕ್ಷಯ್​ ಕುಮಾರ್ ಬೆಂಬಲ; ‘ಗುಟ್ಕಾ ಗ್ಯಾಂಗ್​’ ಎಂದು ತಿರುಗೇಟು ನೀಡಿದ ನೆಟ್ಟಿಗರು

Acharya: ರಾಮ್​ ಚರಣ್-ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ವಿವರ

Published On - 9:35 am, Fri, 29 April 22