ಸಮಾಧಾನಕರ ಸುದ್ದಿ: ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತಲೆಯೆತ್ತಿದೆ ಉತ್ತಮ ಸೌಲಭ್ಯಗಳ ಕೋವಿಡ್​ ಸೆಂಟರ್

| Updated By: Digi Tech Desk

Updated on: Apr 17, 2021 | 5:43 PM

ಕೊರೊನಾ ಸಮಸ್ಯೆ ಇರುವ asymptotic ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಸಿಗಲಿದೆ.‌ ಇಲ್ಲಿ ಸೋಂಕಿತರ ಚಿಕಿತ್ಸೆಗಾಗಿ ದಿನದ 24 ಗಂಟೆಗಳ ಕಾಲವೂ ವೈದ್ಯಕೀಯ ಚಿಕಿತ್ಸೆ ಲಭಿಸಲಿದ್ದು, ದಿನವಿಡೀ ವೈದ್ಯರು, ನರ್ಸ್ ಗಳು ಸೇವೆ ಸಿದ್ಧವಾಗಲಿದ್ದಾರೆ. ಕೋರಮಂಗಲ ಇನ್ ಡೋರ್ ಸ್ಟೇಡಿಯಂ ಕೋವಿಡ್ ಕೇರ್ ಸೆಂಟರ್​ ಗಾಗಿ ಹೊಸ ಮಂಚ, ಬೆಡ್, ಫ್ಯಾನ್, ಚೇರ್ ಗಳು ಬಂದಿವೆ.

ಸಮಾಧಾನಕರ ಸುದ್ದಿ: ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತಲೆಯೆತ್ತಿದೆ ಉತ್ತಮ ಸೌಲಭ್ಯಗಳ ಕೋವಿಡ್​ ಸೆಂಟರ್
ಸಮಾಧಾನಕರ ಸುದ್ದಿ: ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತಲೆಯೆತ್ತಿದೆ ಉತ್ತಮ ಸೌಲಭ್ಯಗಳ ಕೋವಿಡ್​ ಸೆಂಟರ್
Follow us on

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಒತರೆ ಭಾಗಗಳಲ್ಲಿ ಕೊರೊನಾ ಮಹಾಮಾರಿ ಎರನಡೆಯ ಅಲೆ ರಣಭೀಕರವಾಗುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜೊತೆಗೆ ಒಂದಷ್ಟು ಸೌಲಭ್ಯಗಳನ್ನು ಒದಗಿಸಲು ತಡವಾಗಿಯಾದರೂ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ರಾಜಧಾನಿಯಲ್ಲಿ ಕೋವಿಡ್ ಕೇಸ್ ಹೆಚ್ಚಳ ಕಳವಳಕಾರಿಯಾಗಿದ್ದು, ಸರ್ಕಾರ ತಕ್ಷಣಕ್ಕೆ ಕೋವಿಡ್ ಕೇರ್ ಸೆಂಟರ್​ ಒಂದನ್ನು ಕೋರಮಂಗಲ ಇನ್ ಡೋರ್ ಸ್ಟೇಡಿಯಂನಲ್ಲಿ ಸ್ಥಾಪಿಸುತ್ತಿದೆ. ಮುಂದಿನ ವಾರ ಅಂದ್ರೆ ಏಪ್ರಿಲ್ 19 ರಿಂದಲೇ ಕೋರಮಂಗಲ ಕೋವಿಡ್ ಕೇರ್ ಸೆಂಟರ್ ಸೋಂಕಿತರಿಗೆ ಲಭ್ಯವಾಗಲಿದೆ.

ಕೊರೊನಾ ಸಮಸ್ಯೆ ಇರುವ asymptotic ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಸಿಗಲಿದೆ.‌ ಇಲ್ಲಿ ಸೋಂಕಿತರ ಚಿಕಿತ್ಸೆಗಾಗಿ ದಿನದ 24 ಗಂಟೆಗಳ ಕಾಲವೂ ವೈದ್ಯಕೀಯ ಚಿಕಿತ್ಸೆ ಲಭಿಸಲಿದ್ದು, ದಿನವಿಡೀ ವೈದ್ಯರು, ನರ್ಸ್ ಗಳು ಸೇವೆ ಸಿದ್ಧವಾಗಲಿದ್ದಾರೆ.

asymptotic ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಸಿಗಲಿದೆ

ಕೋರಮಂಗಲ ಇನ್ ಡೋರ್ ಸ್ಟೇಡಿಯಂ ಕೋವಿಡ್ ಕೇರ್ ಸೆಂಟರ್​ ಗಾಗಿ ಹೊಸ ಮಂಚ, ಬೆಡ್, ಫ್ಯಾನ್, ಚೇರ್ ಗಳು ಬಂದಿವೆ. ಇಂದು ನಾಳೆ ಅವುಗಳ ಜೋಡಣೆ ನಡೆಯಲಿವೆ.

ಕೋವಿಡ್ ಕೇರ್ ಸೆಂಟರ್​ ಗಾಗಿ ಹೊಸ ಮಂಚ, ಬೆಡ್, ಫ್ಯಾನ್, ಚೇರ್ ಗಳು ಬಂದಿವೆ

ಸೋಂಕಿತರ ಲಾಂಡ್ರಿ, ಊಟ ತಿಂಡಿ ವ್ಯವಸ್ಥೆ ‌ಕೂಡ ಲಭ್ಯವಾಗಲಿದೆ. ವಲಯ ಸ್ಪೆಷಲ್ ಕಮಿಷನರ್ ತುಳಸಿ ಅವರು ಈ ಮಾಹಿತಿ ನೀಡಿದ್ದಾರೆ. ಸಿಸಿಸಿ ಸಿದ್ಧಗೊಂಡಿದೆ, asymptotic ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಎಲ್ಲಾ ಥರಹದ ಚಿಕಿತ್ಸೆ ಸೌಲಭ್ಯ ಇಲ್ಲಿ ಸಿಗಲಿದೆ ಎಂದು ಅವರು ಟಿವಿ9 ಜೊತೆ ಮಾತನಾಡುತ್ತಾ ವಿವರಿಸಿದ್ದಾರೆ.

asymptotic ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು

(Bengaluru koramangala indoor stadium gets covid care centres for asymptomatic coronavirus patients)

Published On - 5:16 pm, Sat, 17 April 21