ಬೆಂಗಳೂರು: ಶಸ್ತ್ರಚಿಕಿತ್ಸೆ ವೇಳೆ 22 ಜನ ಕಣ್ಣು ಕಳೆದುಕೊಂಡ ಪ್ರಕರಣದಲ್ಲಿ ಮಿಂಟೋ ಆಸ್ಪತ್ರೆ ಆಡಳಿತ ಮಂಡಳಿ ಅಮಾನವೀಯ ನಡೆ ಇಟ್ಟಿದೆ. ಕಣ್ಣು ಕಳೆದುಕೊಂಡವರಿಗೆ ಪರಿಹಾರ ನೀಡುವದರಲ್ಲೂ ಷರತ್ತು ಹಾಕುವ ಮೂಲಕ ಮಾನವೀಯತೆ ಮರೆತಿದೆ.
ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ರೂಪಾಯಿ ಪರಿಹಾರ ಹಣವನ್ನು ನೀಡುತ್ತೇವೆ. ಇದನ್ನು ಹೊರತುಪಡಿಸಿ ಸರ್ಕಾರದಿಂದ ಅಥವಾ ನ್ಯಾಯಾಲಯದ ಮೂಲಕ ಪರಿಹಾರ ಪಡೆದುಕೊಂಡರೆ ಆಡಳಿತ ಮಂಡಳಿಗೆ ವಾಪಸ್ ಕೊಡಬೇಕು. ಅದೂ ಶೇ.15ರಷ್ಟು ಬಡ್ಡಿ ಸಮೇತ ಹಣ ವಾಪಸ್ ಕೊಡಬೇಕೆಂದು ಷರತ್ತು ವಿಧಿಸಿದೆ. ಮುಚ್ಚಳಿಕೆ ನೋಡಿ ಶಾಕ್ ಆದ ಸಂತ್ರಸ್ತರು ಮಿಂಟೋ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
22 ಸಂತ್ರಸ್ತರ ಪೈಕಿ ಕೇವಲ 7 ಮಂದಿಗೆ ಮಾತ್ರ ಪರಿಹಾರ ನೀಡಿದೆ. ಇನ್ನೂ 15 ಮಂದಿಗೆ ಪರಿಹಾರ ನೀಡದ ವಿಂಟೋ ಆಡಳಿತ ಮಂಡಳಿ ಕಣ್ಣು ಕಳೆದುಕೊಂಡವರ ಜೊತೆ ಚೆಲ್ಲಾಟವಾಡುತ್ತಿದೆ.