ವೈದ್ಯರ ಯಡವಟ್ಟಿಗೆ ಬಾಣಂತಿ ಬಲಿ? ಸಂಬಂಧಿಕರಿಂದ ಆಸ್ಪತ್ರೆಗೆ ಮುತ್ತಿಗೆ
ಉಡುಪಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಕರು ಮುತ್ತಿಗೆ ಹಾಕಿದ್ದಾರೆ. ಅಂಕದಕಟ್ಟೆ ನಿವಾಸಿ ಸುಧೀರ್ ದೇವಾಡಿಗ ಅವರ ಪತ್ನಿ ಸುಜಾತ (27) ಮೃತಪಟ್ಟ ಬಾಣಂತಿ. ವೈದ್ಯರು ನಾರ್ಮಲ್ ಡೆಲಿವರಿಗೆ ಪ್ರಯತ್ನಿಸಿದ್ದಾರೆ. ಆದರೆ ಅಧಿಕ ರಕ್ತಸ್ರಾವಕ್ಕೆ ಒಳಗಾದ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ಬಾಣಂತಿ ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾರೆ. ಅಧಿಕ ರಕ್ತಸ್ರಾವದಿಂದಲೇ ಸಾವು ಸಂಭವಿಸಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಹೆರಿಗೆ ವೇಳೆ ವೈದ್ಯರ […]
ಉಡುಪಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಂಬಂಧಿಕರು ಮುತ್ತಿಗೆ ಹಾಕಿದ್ದಾರೆ. ಅಂಕದಕಟ್ಟೆ ನಿವಾಸಿ ಸುಧೀರ್ ದೇವಾಡಿಗ ಅವರ ಪತ್ನಿ ಸುಜಾತ (27) ಮೃತಪಟ್ಟ ಬಾಣಂತಿ. ವೈದ್ಯರು ನಾರ್ಮಲ್ ಡೆಲಿವರಿಗೆ ಪ್ರಯತ್ನಿಸಿದ್ದಾರೆ.
ಆದರೆ ಅಧಿಕ ರಕ್ತಸ್ರಾವಕ್ಕೆ ಒಳಗಾದ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ಬಾಣಂತಿ ಹೆಣ್ಣು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾರೆ. ಅಧಿಕ ರಕ್ತಸ್ರಾವದಿಂದಲೇ ಸಾವು ಸಂಭವಿಸಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಅಲ್ಲದೆ ಹೆರಿಗೆ ವೇಳೆ ವೈದ್ಯರ ಯಡವಟ್ಟಿನಿಂದಾಗಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 1:38 pm, Mon, 16 December 19