ಬೆಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ಟ್ರ್ಯಾಕ್‌ಗೆ ಹಾರಿದ ಯುವಕ
ನಮ್ಮ ಮೆಟ್ರೋ ರೈಲು ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8.56ಕ್ಕೆ ನಡೆದಿದೆ. ಸದ್ಯ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಂತರ ಮೈಸೂರು ರಸ್ತೆ ಮೆಟ್ರೋ ನಿಲ್ದಾಣ-ಮೆಜೆಸ್ಟಿಕ್ ನಡುವೆ ಸಂಚಾರ ಸ್ಥಗಿತವಾಗಿದ್ದು ಪ್ರಯಾಣಿಕರು ಪರದಾಡಿದ್ದಾರೆ.
ಬೆಂಗಳೂರು, ಜೂನ್ 10: ನಮ್ಮ ಮೆಟ್ರೋ (Metro) ರೈಲು ಹಳಿಗೆ ಹಾರಿ ಯುವಕ (Boy) ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರಾತ್ರಿ 8.56ಕ್ಕೆ ನಡೆದಿದೆ. ಮೆಟ್ರೋ ಹಳಿಗೆ ಹಾರಿದ್ದ ಯುವಕನನ್ನು ಸದ್ಯ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರು ರಸ್ತೆ ನಿಲ್ದಾಣದಿಂದ ಚಲ್ಲಘಟ್ಟ, ಮೆಜೆಸ್ಟಿಕ್ ನಿಲ್ದಾಣದಿಂದ ವೈಟ್ಫೀಲ್ಡ್ ನಡುವೆ ಮೆಟ್ರೋ ಸಂಚಾರ ಮಾಡುತ್ತದೆ. ಘಟನೆ ನಂತರ ಹೊಸಹಳ್ಳಿ ಮೆಟ್ರೋ ನಿಲ್ದಾಣದಲ್ಲೇ ರೈಲು ನಿಂತಿದ್ದು, ಮೈಸೂರು ರಸ್ತೆ ಮೆಟ್ರೋ ನಿಲ್ದಾಣ-ಮೆಜೆಸ್ಟಿಕ್ ನಡುವೆ ಸಂಚಾರ ಸ್ಥಗಿತದಿಂದ ಪ್ರಯಾಣಿಕರು ಪರದಾಡಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ನಗರದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಇದೇ ರೀತಿ ಯುವಕನೊಬ್ಬ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಪ್ರಾಣ ಬಿಟ್ಟಿದ್ದ. ಮಧ್ಯಾಹ್ನ 2 ಗಂಟೆ 10 ನಿಮಿಷದ ಹೊತ್ತಲ್ಲಿ ನಿಲ್ದಾಣಕ್ಕೆ ರೈಲು ಎಂಟ್ರಿಯಾಗ್ತಿತ್ತು. ರೈಲು ಬರೋದನ್ನೇ ಕಾಯುತ್ತಿದ್ದ ಧ್ರುವ ಟಕ್ಕರ್ ಎಂಬ ಯುವಕ ನೋಡ ನೋಡ್ತಿದಂತೆ ಹಳಿ ಮೇಲೆ ಜಿಗಿದೇ ಬಿಟ್ಟಿದ್ದ. ಕ್ಷಣ ಮಾತ್ರದಲ್ಲೇ ಆತನ ಮೇಲಿ ರೈಲು ಹರಿದಿದ್ರಿಂದ ಅಲ್ಲೇ ಪ್ರಾಣ ಬಿಟ್ಟಿದ್ದ. ಆತನ ದೇಹ ಎರಡು ತುಂಡಾಗಿತ್ತು.
ಇದನ್ನೂ ಓದಿ: ಬೆಂಗಳೂರು: ಮೆಟ್ರೋ ಬರುವಾಗ ಹಳಿಗೆ ಹಾರಿ ಯುವಕ ಆತ್ಮಹತ್ಯೆ; ರೈಲು ಸಂಚಾರ ಸ್ಥಗಿತ
ಅಷ್ಟಕ್ಕೂ ಧ್ರುವ ಹಳಿಗೆ ಜಿಗಿಯುತ್ತಿದ್ದಂತೆ ಜತೆಗಿದ್ದ ಸ್ನೇಹಿತರು ಎಳೆಯೋ ಪ್ರಯತ್ನ ಮಾಡಿದ್ರು. ಆದ್ರೆ ರೈಲು ಬರ್ತಿದ್ದಂತೆ ಅವರೆಲ್ಲಾ ಹಿಂದೆ ಸರಿದಿದ್ದರು. ಮುಂಬೈ ಮೂಲದ ಧ್ರುವ ಟಕ್ಕರ್, ನ್ಯಾಷನಲ್ ಕಾಲೇಜ್‌ನಲ್ಲಿ ಮೊದಲ ವರ್ಷದ ಲಾ ವ್ಯಾಸಂಗ ಮಾಡುತ್ತಿದ್ದ. ಆದರೆ ಅಂದು ಏನಾಯ್ತೋ ಏನೋ..ಸ್ನೇಹಿತರ ಜತೆ ಫೋನ್‌ನಲ್ಲಿ ಮಾತನಾಡ್ತಾ ಬಂದವನು ಹಳಿಗೆ ಜಿಗಿದು ಸೂಸೈಡ್ ಮಾಡಿಕೊಂಡಿದ್ದ.
ಇದನ್ನೂ ಓದಿ: ಬೆಂಗಳೂರು ನಮ್ಮ ಮೆಟ್ರೋದಲ್ಲಿ ರೊಮ್ಯಾನ್ಸ್: ಯುವಕ-ಯುವತಿ ವಿರುದ್ಧ ಪ್ರಯಾಣಿಕ ಆಕ್ರೋಶ
ಘಟನೆ ಬಳಿಕ ಸ್ಥಳಕ್ಕೆ ವೆಸ್ಟ್ ಡಿಸಿಪಿ ಗಿರೀಶ್ ಭೇಟಿ ನೀಡಿ ಪರಿಶೀಲಿಸಿದ್ದರು. ಮೆಟ್ರೋ ಹಳಿಯ ಮೇಲೆ ಬಿದ್ದಿದ್ದ ಮೃತ ದೇಹವನ್ನು ಹೊರ ತೆಗೆಯಲು ಹರಸಾಹಸ ಪಟ್ಟಿದ್ದರು. ಘಟನೆ ಬಳಿಕ BMRCL ಮೆಟ್ರೋ ರೈಲಿನ ಸಂಚಾರವನ್ನು ಸುಮಾರು ಎರಡು ಗಂಟೆ ಸ್ಥಗಿತಗೊಳಿಸಿತ್ತು. ಮಾಗಡಿ ರೋಡ್ನಿಂದ ವೈಟ್ ಫೀಲ್ಡ್ವರೆಗೆ ಮಾತ್ರ ರೈಲು ಸಂಚಾರ ಮಾಡಿದ್ವು. ಮೃತಪಟ್ಟ ವಿದ್ಯಾರ್ಥಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:39 pm, Mon, 10 June 24