ಬೆಂಗಳೂರು, ಏಪ್ರಿಲ್ 23: ನಗರದಲ್ಲಿ ಹೆಚ್ಚುತ್ತಿರುವ ಅನಧಿಕೃತ ಲೇಔಟ್‌ಗಳ (unauthorized layouts) ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕಳವಳ ವ್ಯಕ್ತಪಡಿಸಿದೆ. ಸದ್ಯ ನಗರದಲ್ಲಿ 27,000 ಪ್ಲಾಟ್‌ಗಳನ್ನು ಹೊಂದಿರುವ 279 ಅನಧಿಕೃತ ಲೇಔಟ್‌ಗಳನ್ನು ಬಿಡಿಎ ಗುರುತಿಸಿದ್ದು, ಕಾನೂನು ಮತ್ತು ಆರ್ಥಿಕ ತೊಂದರಿಯಿಂದ ಪಾರಾಗಲು ಈ ಪ್ರದೇಶಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡದಂತೆ ಬಿಡಿಎ ಎಚ್ಚರಿಕೆ ನೀಡಿದೆ. ಅನಧಿಕೃತ ಲೇಔಟ್‌ಗಳನ್ನು ತಡೆಗಟ್ಟಲು ಬಿಡಿಎ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಅನಧಿಕೃತ ಲೇಔಟ್‌ಗಳಲ್ಲಿ ಯಾವುದೇ ಹೊಸ ಆಸ್ತಿಯನ್ನು ನೋಂದಾಯಿಸದಂತೆ ಸಬ್ ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ.
ಅನಧಿಕೃತ ಲೇಔಟ್‌ಗಳ ಬಗ್ಗೆ ಬಿಡಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಲೇಔಟ್‌ಗಳು ಇರುವ ತಾಲ್ಲೂಕು, ಹೋಬಳಿಗಳು, ಗ್ರಾಮಗಳು ಮತ್ತು ಸರ್ವೆ ನಂಬರ್‌ಗಳ ವಿವರಗಳ ಸಮಗ್ರ ವರದಿಯನ್ನು ಸಹ ಪ್ರಕಟಿಸಿದೆ.
ಇದನ್ನೂ ಓದಿ: ಕೊನೆಗೂ ಶಿವರಾಮಕಾರಂತ ಫಲಾನುಭವಿಗಳಿಗೆ ಬಿಡಿಎನಿಂದ ಗುಡ್ ನ್ಯೂಸ್; ಗಣಪತಿ ಹಬ್ಬದ ಬಳಿಕ ನಿವೇಶನ ಹಂಚಿಕೆ
ಯಲಹಂಕ, ಆನೇಕಲ್, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಪೂರ್ವ ತಾಲ್ಲೂಕುಗಳಲ್ಲಿ ಈ ಅನಧಿಕೃತ ಲೇಔಟ್‌ಗಳಿವೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಬಿಡಿಎಯಿಂದ ಯಾವುದೇ ಅನುಮೋದನೆ ಪಡೆದಿಲ್ಲ. ಒಟ್ಟು 279 ಬಡಾವಣೆಗಳ ಪೈಕಿ ಬಿದರಹಳ್ಳಿ ಹೋಬಳಿ 52, ಯಲಹಂಕ ಹೋಬಳಿ 16, ಜಾಲ ಹೋಬಳಿ 29, ಕೆಂಗೇರಿ 41, ಉತ್ತರಹಳ್ಳಿ 4, ಜಿಗಣಿ 53, ಬೇಗೂರು 14, ಕೆಆರ್ ಪುರಂ 5, ಕೆಆರ್ ಪುರಂ 5, ಯಲಹಂಕ ಹೋಬಳಿ 279, ಸರ್ಜಾಪುರ ಮತ್ತು ವರ್ತೂರಿನಲ್ಲಿ 8 ಬಡಾವಣೆಗಳಿವೆ.
ಇದನ್ನೂ ಓದಿ: ಬೆಂಗಳೂರಿಗೆ ಜಲ ಕಂಟಕ: ಆರ್ಆರ್ ನಗರ ಬಿಡಿಎ ಅಪಾರ್ಟ್ ಮೆಂಟ್ನಲ್ಲೂ ನೀರಿಲ್ಲ, ಟ್ಯಾಂಕರ್ ಮೊರೆಹೋದ ನಿವಾಸಿಗಳು
ಬಿಡಿಎ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ‘ಈ ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳು ಬಿಡಿಎ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ. ನಿರ್ಮಿಸಿಲಾದ ರಸ್ತೆಗಳು ನಿಗದಿತ ಅಗಲ ಹೊಂದಿಲ್ಲ. ಉದ್ಯಾನವನಗಳು ಅಥವಾ CA ಸೈಟ್‌ಗಳಿಗೆ ಯಾವುದೇ ಜಾಗವನ್ನು ನಿಗದಿಪಡಿಸಲಾಗಿಲ್ಲ. ಬೋರ್‌ವೆಲ್ ಕೊರೆಯಲಾಗಿದೆ. ವಿದ್ಯುತ್ ಒದಗಿಸುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಪ್ಲಾಟ್ ಖರೀದಿದಾರರು ಇದರಿಂದ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.