ಬೆಂಗಳೂರು: ಬಿಬಿಎಂಪಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ. ಅವರು ಕೊರೊನಾ ಸಮಯದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಕೊವಿಡ್ ಸೂಕ್ತ ನಡವಳಿಕೆಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಹೀಗೆ ತಿಳಿಸಿದ್ದಾರೆ. ಏಪ್ರಿಲ್ 30ರಂದು ರಾಜ್ಯದಲ್ಲಿ ಹೆಚ್ಚು ಸೋಂಕಿತರ ಸಂಖ್ಯೆ ಇತ್ತು. ಆಗ ಔಷಧ ಕೊರತೆ, ಬೆಡ್ ಸಮಸ್ಯೆ ಇತ್ತು. ಬಿಬಿಎಂಪಿ ಮುಖ್ಯ ಆಯುಕ್ತರ ತಂಡದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕಷ್ಟದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಕೈಜೋಡಿಸಿದ್ದಾರೆ ಎಂದು ಸಭೆಯಲ್ಲಿ ಕಮಲ್ ಪಂತ್ ತಿಳಿಸಿದ್ದಾರೆ.
ಬಿಬಿಎಂಪಿಗೆ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿ ಸಹಾಯ ನೀಡಲಾಗಿದೆ. ಬಿಬಿಎಂಪಿ ಮಾರ್ಷಲ್‌ಗಳು ಜನರ ಜತೆ ಜಗಳ ಮಾಡಬಾರದು. ಸಮಾಧಾನವಾಗಿ ಜನರ ಜೊತೆ ವರ್ತಿಸಬೇಕು. ಮಾರ್ಷಲ್‌ಗಳ ಕೆಲಸಕ್ಕೆ ಅಡ್ಡಿ ಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಕಮಲ್ ಪಂತ್ ವಿವರಣೆ ನೀಡಿದ್ದಾರೆ.
ಕೊವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಿನ್ನೆಯಷ್ಟೇ ಸ್ಟಾರ್ ಹೋಟೆಲ್ ಹಾಲ್‌ಗೆ ಬೀಗ ಹಾಕಿದ್ದೇವೆ. ಕೊವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆ ಬೀಗ ಹಾಕಿದ್ದೇವೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣ ಕೆಲಸಕ್ಕೆ 54 ತಂಡ ರಚನೆ ಮಾಡಲಾಗಿದೆ. ಪ್ರತಿ ಟೀಂನಲ್ಲಿ 4 ಬಿಬಿಎಂಪಿ ಮಾರ್ಷಲ್‌ಗಳು ಇರ್ತಾರೆ. ಈ ತಂಡಗಳು ಮಾಸ್ಕ್, ಅಂತರದ ಬಗ್ಗೆ ಸೂಚಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ. ಪೊಲೀಸರು, ಮಾರ್ಷಲ್‌ಗಳ ಮಧ್ಯೆ ಸಮನ್ವಯತೆ ಅಗತ್ಯ ಇದೆ. ಪೊಲೀಸ್ ಠಾಣಾ ಮಟ್ಟದಲ್ಲಿ ಸಮನ್ವಯತೆ ಇರಬೇಕು ಎಂದು ತಿಳಿಸಿದ್ದಾರೆ.
ದಂಡ ಹಾಕಲು ಹೋಂಗಾರ್ಡ್‌ಗಳನ್ನು ಬಳಸಿಕೊಳ್ಳಬೇಕು. ಫುಟ್‌ಪಾತ್ ಮೇಲಿನ ಅಂಗಡಿ ತೆರವಿಗೆ ಸೂಚಿಸಲಾಗಿದೆ. ಹೈಕೋರ್ಟ್‌ನಿಂದ ಸೂಚನೆ ಹಿನ್ನೆಲೆ ತೆರವು ಮಾಡ್ತೇವೆ. ಫುಟ್‌ಪಾತ್ ಮೇಲಿನ ಅಂಗಡಿ ತೆರವು ಕೆಲಸವಾಗಬೇಕು ಎಂದು ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ ಅನ್‌ಲಾಕ್ ಬಗ್ಗೆ ಮತ್ತಷ್ಟು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು: ಕ್ರಮ ಕೈಗೊಳ್ಳದ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣ: ಎಫ್ಐಆರ್ ದಾಖಲು; ಆರೋಪಿಗಳು ಯಾರು ಗೊತ್ತಾ?