ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಳಿವಯಸ್ಸಿನಲ್ಲೂ ಓಡಾಡಿ ಕೆಲಸ ಮಾಡುತ್ತಿದ್ದಾರೆ: ವಿನಯ್ ಗುರೂಜಿ

ಪಿತೃಶಾಪ ನಿವಾರಣೆಗಾಗಿ ಗೋಕರ್ಣಕ್ಕೆ ಹೋಗುತ್ತೇವೆ. ಅದರ ಬದಲು ಆ ಹಣವನ್ನು ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೊಡಿ ಎಂದು ಬೆಂಗಳೂರಿನಲ್ಲಿ ವಿನಯ್ ಗುರೂಜಿ ಮನವಿ ಮಾಡಿದ್ದಾರೆ

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಳಿವಯಸ್ಸಿನಲ್ಲೂ ಓಡಾಡಿ ಕೆಲಸ ಮಾಡುತ್ತಿದ್ದಾರೆ: ವಿನಯ್ ಗುರೂಜಿ
ವಿನಯ್ ಗುರೂಜಿ
Follow us
TV9 Web
| Updated By: preethi shettigar

Updated on:Jul 03, 2021 | 1:54 PM

ಬೆಂಗಳೂರು: ಪಿತೃಶಾಪ ನಿವಾರಣೆಗಾಗಿ ಗೋಕರ್ಣಕ್ಕೆ ಹೋಗುತ್ತೇವೆ. ಅದರ ಬದಲು ಆ ಹಣವನ್ನು ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಕೊಡಿ. ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಅದರಲ್ಲೂ 1.5 ಲಕ್ಷ ಸಂಬಳ ಪಡೆಯುವವರು ಈ ಮಕ್ಕಳಿಗೆ ಸಹಾಯ ಮಾಡಿ. ಲಕ್ಷ ಲಕ್ಷ ಸಂಬಳ ಪಡೆಯುವವರು 5 ಸಾವಿರ ರೂಪಾಯಿ ಹಣವನ್ನು ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ನೀಡಿ ಎಂದು ಬೆಂಗಳೂರಿನಲ್ಲಿ ವಿನಯ್ ಗುರೂಜಿ ಮನವಿ ಮಾಡಿದ್ದಾರೆ.

ಬಳಿಕ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಕುರಿತು ಮಾತನಾಡಿದ ವಿನಯ್ ಗುರೂಜಿ, ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಇಳಿವಯಸ್ಸಿನಲ್ಲೂ ಓಡಾಡಿ ಕೆಲಸ ಮಾಡುತ್ತಿದ್ದಾರೆ. ನಮಗೆ ಆ ವಯಸ್ಸು ಬಂದರೆ ಓಡಾಡುವುದಕ್ಕೆ ಆಗುತ್ತೋ ಇಲ್ವೊ ಎಂದು ಹೇಳಿದ್ದಾರೆ.

3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದು ಸಿಎಂಗೆ ವಿನಯ್ ಗುರೂಜಿ ಸಲಹೆ ಕೊರೊನಾ 2ನೇ ಅಲೆ ಅಬ್ಬರ ಇನ್ನೂ ಮುಗಿದಿಲ್ಲ. ಅಷ್ಟರಲ್ಲಾಗಲೇ ಮೂರನೇ ಅಲೆ ಆತಂಕ ಎಲ್ಲೆಡೆ ಮನೆಮಾಡಿದೆ. ಮಹಾಮಾರಿಯ 2ನೇ ಹೊಡೆತದಿಂದ ತತ್ತರಿಸಿರೋ ಜನ ಇನ್ನೇನು ವೈರಸ್ ಕಪಿಮುಷ್ಠಿಯಿಂದ ಹೊರಬರಬೇಕು ಅನ್ನುವಷ್ಟರಲ್ಲಿ ಮತ್ತೊಂದು ಅಟ್ಯಾಕ್ ಕಟ್ಟಿಟ್ಟ ಬುತ್ತಿ ಅಂತಿದ್ದಾರೆ ತಜ್ಞರು. ಇನ್ನು ಕೆಲವೇ ತಿಂಗಳಲ್ಲಿ ಕೊರೊನಾ ಮತ್ತೊಂದು ದಾಳಿಗೂ ನಾವು ಸಜ್ಜಾಗಬೇಕಿದೆ. 3ನೇ ಅಲೆಗೆ ಸಜ್ಜಾಗುವಂತೆ ಸಿಎಂ ಬಿಎಸ್‌ವೈಗೆ ವಿನಯ್ ಗುರೂಜಿ ಸಲಹೆ ನೀಡಿದ್ದಾರೆ. ತಜ್ಞರು ಹೇಳಿದಂತೆ ಕೊರೊನಾ ಸೋಂಕು ಹರಡುತ್ತಿದೆ. ಹೀಗಾಗಿ 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಭೇಟಿ ವೇಳೆ ಸಲಹೆ ನೀಡಿದ್ದಾರೆ. ಹಾಗೂ ಅಕೇಶಿಯಾ ಗಿಡ ನೆಡುವುದಕ್ಕೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಎರಡು ತಿಂಗಳಲ್ಲೇ ಭಾರತಕ್ಕೆ ಕೊರೊನಾ 3ನೇ ಅಲೆ ಅಟ್ಯಾಕ್ ಭಾರತವು ಕೊರೊನಾದ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾದ ಮೂರನೇ ಅಲೆ ಬರಬಹುದು ಅಂತಾ ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಕೊರೊನಾದ ಮೂರನೇ ಅಲೆಯನ್ನು ತಡೆಯಲಾಗಲ್ಲ. ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನೆರಡು ತಿಂಗಳಲ್ಲೇ ಕೊರೊನಾದ ಮೂರನೇ ಅವತಾರ ದೇಶದಲ್ಲಿ ಮತ್ತೆ ಹಾಹಾಕರ ಸೃಷ್ಟಿಸಬಹುದು ಅಂತಾ ಗುಲೇರಿಯಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಅಪ್ಪಳಿಸಲಿದೆಯಾ ಕೊರೊನಾ 3ನೇ ಅಲೆ.. 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದು ಸಿಎಂಗೆ ವಿನಯ್ ಗುರೂಜಿ ಸಲಹೆ

National Flag ರಾಷ್ಟ್ರಧ್ವಜ ತಯಾರಕರಿಗೆ ನೆರವು ನೀಡುವಂತೆ ವಿನಯ್ ಗುರೂಜಿ ಮನವಿ!

Published On - 1:52 pm, Sat, 3 July 21