ಭಾರತಕ್ಕೆ ಅಪ್ಪಳಿಸಲಿದೆಯಾ ಕೊರೊನಾ 3ನೇ ಅಲೆ.. 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದು ಸಿಎಂಗೆ ವಿನಯ್ ಗುರೂಜಿ ಸಲಹೆ

ಭಾರತದಲ್ಲಿ ಕೊರೊನಾದ ಮೂರನೇ ಅಲೆ ಬರುತ್ತೆ ಎನ್ನುವ ಬಗ್ಗೆ ಆರೋಗ್ಯ ತಜ್ಞರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ, ಕೊರೊನಾದ ಮೂರನೇ ಅಲೆ ಯಾವಾಗ ಬರಬಹುದು ಎನ್ನುವ ಬಗ್ಗೆ ಮಾತ್ರ ಭಿನ್ನಾಭಿಪ್ರಾಯ ಇದೆ. ಕೆಲ ತಜ್ಞರು 2 ರಿಂದ ನಾಲ್ಕು ತಿಂಗಳಲ್ಲಿ ಕೊರೊನಾದ ಮೂರನೇ ಅಲೆ ಬರುತ್ತೆ ಎಂದು ಹೇಳಿದ್ದಾರೆ. ಈಗ ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಆರರಿಂದ 8 ವಾರಗಳಲ್ಲಿ ಕೊರೊನಾದ ಮೂರನೇ ಅಲೆ ಬರಬಹುದು ಎಂದಿದ್ದಾರೆ. ಅದರಂತೆ ವಿನಯ್ ಗುರೂಜಿ ಕೂಡ ಸಿಎಂ ಬಿಎಸ್‌ ಯಡಿಯೂರಪ್ಪರಿಗೆ ಸಲಹೆ ನೀಡಿದ್ದಾರೆ.

ಭಾರತಕ್ಕೆ ಅಪ್ಪಳಿಸಲಿದೆಯಾ ಕೊರೊನಾ 3ನೇ ಅಲೆ.. 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದು ಸಿಎಂಗೆ ವಿನಯ್ ಗುರೂಜಿ ಸಲಹೆ
ಸಂಗ್ರಹ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 20, 2021 | 1:17 PM

ಕೊರೊನಾ 2ನೇ ಅಲೆ ಅಬ್ಬರ ಇನ್ನೂ ಮುಗಿದಿಲ್ಲ. ಅಷ್ಟರಲ್ಲಾಗಲೇ ಮೂರನೇ ಅಲೆ ಆತಂಕ ಎಲ್ಲೆಡೆ ಮನೆಮಾಡಿದೆ. ಮಹಾಮಾರಿಯ 2ನೇ ಹೊಡೆತದಿಂದ ತತ್ತರಿಸಿರೋ ಜನ ಇನ್ನೇನು ವೈರಸ್ ಕಪಿಮುಷ್ಠಿಯಿಂದ ಹೊರಬರಬೇಕು ಅನ್ನುವಷ್ಟರಲ್ಲಿ ಮತ್ತೊಂದು ಅಟ್ಯಾಕ್ ಕಟ್ಟಿಟ್ಟ ಬುತ್ತಿ ಅಂತಿದ್ದಾರೆ ತಜ್ಞರು. ಇನ್ನು ಕೆಲವೇ ತಿಂಗಳಲ್ಲಿ ಕೊರೊನಾ ಮತ್ತೊಂದು ದಾಳಿಗೂ ನಾವು ಸಜ್ಜಾಗಬೇಕಿದೆ. 3ನೇ ಅಲೆಗೆ ಸಜ್ಜಾಗುವಂತೆ ಸಿಎಂ ಬಿಎಸ್‌ವೈಗೆ ವಿನಯ್ ಗುರೂಜಿ ಸಲಹೆ ನೀಡಿದ್ದಾರೆ. ತಜ್ಞರು ಹೇಳಿದಂತೆ ಕೊರೊನಾ ಸೋಂಕು ಹರಡುತ್ತಿದೆ. ಹೀಗಾಗಿ 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಭೇಟಿ ವೇಳೆ ಸಲಹೆ ನೀಡಿದ್ದಾರೆ. ಹಾಗೂ ಅಕೇಶಿಯಾ ಗಿಡ ನೆಡುವುದಕ್ಕೆ ರಾಜ್ಯದಲ್ಲಿ ಅವಕಾಶ ನೀಡಬಾರದು ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಎರಡು ತಿಂಗಳಲ್ಲೇ ಭಾರತಕ್ಕೆ ಕೊರೊನಾ 3ನೇ ಅಲೆ ಅಟ್ಯಾಕ್ ಭಾರತವು ಕೊರೊನಾದ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾದ ಮೂರನೇ ಅಲೆ ಬರಬಹುದು ಅಂತಾ ದೆಹಲಿಯ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಕೊರೊನಾದ ಮೂರನೇ ಅಲೆಯನ್ನು ತಡೆಯಲಾಗಲ್ಲ. ಮೂರನೇ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನೆರಡು ತಿಂಗಳಲ್ಲೇ ಕೊರೊನಾದ ಮೂರನೇ ಅವತಾರ ದೇಶದಲ್ಲಿ ಮತ್ತೆ ಹಾಹಾಕರ ಸೃಷ್ಟಿಸಬಹುದು ಅಂತಾ ಗುಲೇರಿಯಾ ಎಚ್ಚರಿಸಿದ್ದಾರೆ.

ಕೊರೊನಾ ವೈರಸ್ ರೂಪಾಂತರಗೊಳ್ಳಲು 3ಕ್ಕೂ ಹೆಚ್ಚು ತಿಂಗಳು ಸಮಯಾವಕಾಶ ತಗೊಳ್ಳುತ್ತಂತೆ. ಆದ್ರೆ ಮೂರನೇ ಅಲೆ ಎರಡೇ ತಿಂಗಳಲ್ಲಿ ಅಪ್ಪಳಿಸೋ ಸಾದ್ಯತೆ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಕೊರೊನಾ ಮೂರನೇ ಅಲೆ ಅಪ್ಪಳಿಸಲು ರಣದೀಪ್ ಗುಲೇರಿಯಾ ನೀಡೋ ಕಾರಣಗಳನ್ನು ನೋಡೋದಾದ್ರೆ.

3ನೇ ಅಲೆಗೆ ಕಾರಣ ದೇಶದಲ್ಲಿ ಜನರಿಗೆ ಕೊರೊನಾ ಲಸಿಕೆ ನೀಡಿಕೆಯೇ ಸವಾಲಾಗಿಬಿಟ್ಟಿದೆ. ಲಸಿಕೆ ಪಡೆಯದಿದ್ದರೆ ಜನರು ಮತ್ತೆ ಕೊರೊನಾಗೆ ತುತ್ತಾಗ್ಬಹುದು. ಜೊತೆಗೆ ಕೊರೊನಾ ಹೊಸ ರೂಪಾಂತರದ ಬಗ್ಗೆ ಅಧ್ಯಯನ ಆಗ್ಬೇಕಿದೆ. ಇನ್ನು ರಾಜ್ಯಗಳಲಲ್ಲಿ ಅನ್ಲಾಕ್ ಶುರುವಾಗ್ತಿದ್ದಂತೆ ನಿಯಮ ಉಲ್ಲಂಘನೆ ಹೆಚ್ಚಾಗ್ತಿದೆ. ಕೊವಿಡ್ ಮಾರ್ಗಸೂಚಿಗಳನ್ನು ಜನರು ಪಾಲಿಸುತ್ತಿಲ್ಲ. ಕೊರೊನಾ ಮೊದಲ ಹಾಗೂ 2ನೇ ಅಲೆಯಿಂದ ನಾವು ಪಾಠ ಕಲಿತಿಲ್ಲ. ಹೀಗಾಗಿ ಅನ್ಲಾಕ್ ಆಗ್ತಿದ್ದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ಹೆಚ್ಚಳವಾಗ್ತಿದೆ. ಈಗಲೂ ಕೊರೊನಾ ರೂಪಾಂತರ ಹೊಂದುತ್ತಿದ್ದು, ಎಚ್ಚರ ತಪ್ಪಿದ್ರೆ ರೂಪಾಂತರಿಯಿಂದ ಬಾಚಾವಾಗೋದು ಕಷ್ಟ ಎನ್ನಲಾಗಿದೆ. ಅಲ್ಲದೆ 2ನೇ ಅಲೆಗಿಂತಲೂ 3ನೇ ಅಲೆ ತುಂಬಾ ಡೇಂಜರಸ್ ಆಗಿದೆ.

ಭಾರತದಲ್ಲಿ ಕೊರೊನಾ ಲಸಿಕೆ ನೀಡಿಕೆಯೇ ಈಗ ದೊಡ್ಡ ಸವಾಲು. ಕೊರೊನಾದ ಹೊಸ ಅಲೆ ಸಾಮಾನ್ಯವಾಗಿ 3 ತಿಂಗಳ ಸಮಯ ತೆಗೆದುಕೊಳ್ಳುತ್ತೆ. ಆದರೆ, ಕಡಿಮೆ ಸಮಯವನ್ನು ತೆಗೆದುಕೊಳ್ಳಬಹುದು. ಹೀಗಾಗಿ ಹಾಟ್ ಸ್ಪಾಟ್ ಗಳಲ್ಲಿ ತೀವ್ರ ನಿಗಾ ವಹಿಸಬೇಕು ಅಂತಾ ಏಮ್ಸ್ ಆಸ್ಪತ್ರೆಯ ಮುಖ್ಯಸ್ಥ ರಣದೀಪ್ ಗುಲೇರಿಯಾ ಹೇಳಿದ್ದಾರೆ.

3ನೇ ಅಲೆ ರೂಪದಲ್ಲಿ ಅಪ್ಪಳಿಸುತ್ತಾ ಡೇಂಜರಸ್ ಡೆಲ್ಟಾ? ಇನ್ನು ಭಾರತದಲ್ಲಿ ಡೆಲ್ಟಾ ಪ್ಲಸ್ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದೇ ರೂಪಾಂತರಿ ಭಾರತದಲ್ಲಿ 3ನೇ ಅಲೆ ಎದ್ದೇಳಲು ಕಾರಣಬಹುದು ಎನ್ನಲಾಗಿದೆ. ಹೀಗಾಗಿ ಸದ್ಯ ಜಿನೋಮಿಕ್ ಸೀಕ್ವೆನ್ಸಿಂಗ್ ನಡೀತಿದ್ದು, ಹೊಸ ಪ್ರಬೇಧದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಒಂದು ವೇಳೆ ಡೆಲ್ಟಾ ಪ್ಲಸ್ ರೂಪಾಂತರಿ ಪತ್ತೆಯಾದ್ರೆ ದೇಶದಲ್ಲಿ ಮತ್ತೊಮ್ಮೆ ಕೊರೊನಾ ಸಾವಿನ ದಂಡಯಾತ್ರೆ ಶುರುವಾಗಬಹುದು. ಆದ್ರೆ ಕೊರೊನಾ ಮೂರನೇ ಅಲೆ ತಡೆಯೋ ಅಸ್ತ್ರ ಜನರ ಕೈಯಲ್ಲೇ ಇದ್ದು, ಇಷ್ಟು ದಿನ ಪಾಲಿಸಿಕೊಂಡು ಬಂದಿರೋ ನಿಯಮಗಳನ್ನೇ ಪಾಲಿಸಿದ್ರೆ ಜೀವ ಕಾಪಾಡಬಹುದು ಅಂತಾರೆ ಏಮ್ಸ್ನ ರಣದೀಪ್ ಗುಲೇರಿಯಾ.

ಇದನ್ನೂ ಓದಿ: ಯಾದಗಿರಿಯಲ್ಲಿ ಮೊಸಳೆ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿರುವ ಅಪರಿಚಿತರು