ಇರಾನಿ ಗ್ಯಾಂಗ್ ಹೆಡೆಮುರಿಗೆ ಕಟ್ಟಿದ ಪೊಲೀಸರಿಗೆ ಬೆಂಗಳೂರು ಪೊಲೀಸ್ ಆಯುಕ್ತರಿಂದ ಬಹುಮಾನ
ಕಾಮಾಕ್ಷಿ ಪಾಳ್ಯ ಪೊಲೀಸರೂ ಸಹ ಹಲವು ಪ್ರಕರಣಗಳನ್ನು ಭೇದಿಸಿ, 1 ಕೋಟಿ 46 ಲಕ್ಷ ರೂ.ಮೌಲ್ಯದ 26 ಟ್ರ್ಯಾಕ್ಟರ್, 5 ಕಾರು, 8 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಇವತ್ತು ಪಶ್ಚಿಮ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 1ಕೋಟಿ 97 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.
ವಿಜಯನಗರ ಉಪವಿಭಾಗ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ, ಮನೆಗಳ್ಳತನ ಸೇರಿ 27 ಪ್ರಕರಣಗಳನ್ನು ಭೇದಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಧಾರವಾಡದಿಂದ ಬಂದಿದ್ದ ಹಲವರು ಬೆಂಗಳೂರಿನಲ್ಲಿ ಸರಗಳ್ಳತನ ಮಾಡಿದ್ದಾರೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಲು ಧಾರವಾಡಕ್ಕೆ ಹೋಗಲಾಗಿತ್ತು.
ಆಗ ಇಡೀ ಗ್ರಾಮಸ್ಥರೆಲ್ಲ ಸೇರಿಕೊಂಡು, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು. ಒಬ್ಬರು ಮಹಿಳಾ ಪಿಎಸ್ಐ ಸೇರಿ ಮೂವರ ಮೇಲೆ ಹಲ್ಲೆ ನಡೆದಿತ್ತು. ಇದೀಗ ಆ ಆರೋಪಿಗಳಾದ ಸಲೀಂ ಇರಾನಿ, ಅಜಾದ್ ಇರಾನಿ, ಅವ್ನೂ ಇರಾನಿಯನ್ನು (Irani Gang) ಬಂಧಿಸಲಾಗಿದೆ ಎಂದು ಪಂತ್ ತಿಳಿಸಿದ್ದಾರೆ. ಹಾಗೇ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟಿಲ್ ನೇತೃತ್ವದ ತಂಡಕ್ಕೆ 50 ಸಾವಿರ ರೂ. ಬಹುಮಾನವನ್ನೂ ಘೋಷಿಸಿದ್ದಾರೆ.
ಹಾಗೇ ಕಾಮಾಕ್ಷಿ ಪಾಳ್ಯ ಪೊಲೀಸರೂ ಸಹ ಹಲವು ಪ್ರಕರಣಗಳನ್ನು ಭೇದಿಸಿ, 1 ಕೋಟಿ 46 ಲಕ್ಷ ರೂ.ಮೌಲ್ಯದ 26 ಟ್ರ್ಯಾಕ್ಟರ್, 5 ಕಾರು, 8 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಆನಂದ್, ಯಾಕೂಬ್, ಲಿಂಗಪ್ಪ, ಕೆ.ಲೋಕೇಶ್, ವಿ.ಲೋಕೇಶ್ನನ್ನು ಬಂಧಿಸಲಾಗಿದೆ. ಇದನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಕಮಲ್ಪಂತ್ 30 ಸಾವಿರ ರೂ.ಬಹುಮಾನ ಘೋಷಿಸಿದ್ದಾರೆ.
ರೂಪಾಂತರಿ ಕೊರೊನಾ: ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಒಪ್ಪದ ಸಂಪರ್ಕಿತರು.. ಅಪಾರ್ಟ್ಮೆಂಟ್ ಸೀಲ್ಡೌನ್!
Published On - 3:37 pm, Tue, 29 December 20