ವ್ಹೀಲಿಂಗ್​​ಗೆ ಕಡಿವಾಣ ಹಾಕಲು ಹೊಸ ಟಾಸ್ಕ್ ಫೋರ್ಸ್​ ರಚನೆ; ನಾಲ್ಕೇ ದಿನದಲ್ಲಿ 6 ಜನ ಅರೆಸ್ಟ್

|

Updated on: Jan 05, 2023 | 10:25 AM

Police Task Force Team: ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಸೇರಿ ಹಲವು ಸೋಷಿಯಲ್ ಮೀಡಿಯಾ ಅಪ್ಲಿಕೇಶನ್​ಗಳ ಮೇಲೆ ಸದಾ ಕಣ್ಣಿಡಲಿದೆ ಈ ಟೀಂ.

ವ್ಹೀಲಿಂಗ್​​ಗೆ ಕಡಿವಾಣ ಹಾಕಲು ಹೊಸ ಟಾಸ್ಕ್ ಫೋರ್ಸ್​ ರಚನೆ; ನಾಲ್ಕೇ ದಿನದಲ್ಲಿ 6 ಜನ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಹೆಚ್ಚಾಗುತ್ತಿರುವ ವ್ಹೀಲಿಂಗ್​​ಗೆ ಕಡಿವಾಣ ಹಾಕಲು ಹೊಸ ಟಾಸ್ಕ್ ಫೋರ್ಸ್​ ರಚನೆ ಮಾಡಲಾಗಿದೆ. ಜಂಟಿ ಪೊಲೀಸ್ ಆಯುಕ್ತ ಅನುಚೇತ್ ನೇತೃತ್ವದಲ್ಲಿ ಓರ್ವ ಎಸಿಪಿ, ಇನ್ಸ್​​ಪೆಕ್ಟರ್​​ ಸೇರಿ 10 ಜನರ ಟಾಸ್ಕ್​​​ಫೋರ್ಸ್ ರಚಿಸಲಾಗಿದ್ದು ಈ ತಂಡ ರಚನೆಯಾದ ನಾಲ್ಕೇ ದಿನದಲ್ಲಿ 6 ಜನನ್ನು ಬಂಧಿಸಲಾಗಿದೆ. ಟಾಸ್ಕ್​ಫೋರ್ಸ್ ಟೀಂ ರಾತ್ರಿ ವೇಳೆಯೂ ಫುಲ್​ ಅಲರ್ಟ್​​​ ಆಗಿದೆ.

ಬೆಂಗಳೂರಿನ ಪ್ರಮುಖ ರಸ್ತೆ, ಹೈವೆಗಳಲ್ಲಿ ಬೈಕ್​​ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಘೂ ಸಾಮಾಜಿಕ ಜಾಲತಾಣಗಳಲ್ಲಿ ವ್ಹೀಲಿಂಗ್ ವಿಡಿಯೋಗಳು ವೈರಲ್ ಆಗುತ್ತಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. 10 ಜನರಿರುವ ತಂಡವನ್ನು ರಚಿಸಿ ಬೇಟೆಗೆ ಇಳಿದಿದ್ದಾರೆ.

ಇದನ್ನೂ ಓದಿ: ನಿಮಗೂ ದಿಂಬಿನ ಕೆಳಗೆ ಮೊಬೈಲ್​ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ

ಹೊಸ ಟಾಸ್ಕ್ ಪೋರ್ಸ್ ಕಾರ್ಯ ವೈಖರಿ ಹೇಗಿರಲಿದೆ?

ವೀಲ್ಹಿಂಗ್ ಮಾಡೋರ ಮೇಲೆ ನಿಗಾ ಇಡಲು ಟಾಸ್ಕ್ ಪೋರ್ಸ್ ಟೀಂ ಕೆಲಸ ಮಾಡಲಿದೆ. ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಸೇರಿ ಹಲವು ಸೋಷಿಯಲ್ ಮೀಡಿಯಾ ಅಪ್ಲಿಕೇಶನ್​ಗಳ ಮೇಲೆ ಸದಾ ಕಣ್ಣಿಡಲಿದೆ ಈ ಟೀಂ. ವೀಲ್ಹಿಂಗ್ ಮಾಡಿ ಅಪ್ಲೋಡ್ ಮಾಡಿದ್ದೇ ತಡ ಟೀಂ ತನಿಖೆ ಚುರುಕು ಮಾಡಿ ಐಪಿ ಅಡ್ರಸ್ ಮೂಲಕ ವೀಲ್ಹಿಂಗ್ ಮಾಡುವವರನ್ನು ಕಂಡುಹಿಡಿಯಲಿದ್ದಾರೆ. ಬಳಿಕ ನೇರವಾಗಿ ಮನೆ ಬಾಗಿಲಿಗೆ ಬಂದು ಬೈಕ್ ಸಮೇತ ಅರೆಸ್ಟ್ ಮಾಡ್ತಾರೆ.

ಟಾಸ್ಕ್ ಪೋರ್ಸ್ ಟೀಂ ರಚನೆ ಆದ ನಾಲ್ಕೇ ದಿನದಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ರಾತ್ರಿ ವೇಳೆಯೂ ಈ ಟೀಮ್ ಹೆಚ್ಚಿನ ನಿಗಾ ಇಡಲಿದೆ. ರಾತ್ರಿ ವೇಳೆ ನೈಸ್​ ರಸ್ತೆ ಹಾಗೂ ಫ್ಲೈ ಓವರ್​ಗಳ ಬಳಿ ಈ ಟೀಮ್ ಹದ್ದಿನ ಕಣ್ಣಿಡಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:25 am, Thu, 5 January 23