ನಿಮಗೂ ದಿಂಬಿನ ಕೆಳಗೆ ಮೊಬೈಲ್​ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ

ಮೊಬೈಲ್​ಗೆ ಎಷ್ಟು ಅಡಿಕ್ಟ್​ ಆಗಿದ್ದೇವೆ ಎಂದರೆ ಮಲಗುವಾಗಲೂ ಅದನ್ನು ದೂರ ಇಡುವುದಿಲ್ಲ, ಕೆಲವರು ತಮ್ಮ ಕೈಯಲ್ಲಿ, ಇನ್ನೂ ಕೆಲವರು ದಿಂಬಿನ ಕೆಳಗೆ ಇಟ್ಟು ಮಲಗುತ್ತಾರೆ.

ನಿಮಗೂ ದಿಂಬಿನ ಕೆಳಗೆ ಮೊಬೈಲ್​ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ
ಮೊಬೈಲ್ ಬಳಕೆ
Follow us
ನಯನಾ ರಾಜೀವ್
|

Updated on: Jan 05, 2023 | 9:52 AM

ಮೊಬೈಲ್​ಗೆ ಎಷ್ಟು ಅಡಿಕ್ಟ್​ ಆಗಿದ್ದೇವೆ ಎಂದರೆ ಮಲಗುವಾಗಲೂ ಅದನ್ನು ದೂರ ಇಡುವುದಿಲ್ಲ, ಕೆಲವರು ತಮ್ಮ ಕೈಯಲ್ಲಿ, ಇನ್ನೂ ಕೆಲವರು ದಿಂಬಿನ ಕೆಳಗೆ ಇಟ್ಟು ಮಲಗುತ್ತಾರೆ. ಮಲಗುವ ಮುನ್ನ ಫೋನ್ ಬಳಸುವುದು ಹಾನಿಕಾರಕ ಎಂಬುದರಲ್ಲಿ ಸಂದೇಹವಿಲ್ಲ. ಇದು ಉತ್ತಮ ನಿದ್ರೆ ಬರದಂತೆ ತಡೆಯುತ್ತದೆ. ಮಲಗುವ ಸ್ವಲ್ಪ ಸಮಯದ ಮುನ್ನವೇ ಮೊಬೈಲ್​ ಅನ್ನು ದೂರ ಇಡಲೇಬೇಕು, ಆಗ ಮೆದುಳಿಗೆ ನಿದ್ರೆಯ ಸಂದೇಶ ರವಾನೆಯಾಗುತ್ತದೆ. ಮೊಬೈಲ್ ನೋಡುತ್ತಿದ್ದರೆ ಮೊಬೈಲ್ ಬೆಳಕು ನಿಮ್ಮ ಮೆದುಳನ್ನು ಜಾಗೃತರಾಗಿರುವಂತೆ ನೋಡಿಕೊಳ್ಳುತ್ತದೆ, ಇದರಿಂದ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ.

ನಿಮಗೆ ಮಧ್ಯೆರಾತ್ರಿ ಎಚ್ಚರವಾದರೆ ಒಂದೊಮ್ಮೆ ಮೊಬೈಲ್​ ಅನ್ನು ಹತ್ತಿರವಿಟ್ಟುಕೊಂಡು ಮಲಗಿದಾಗ ಮಧ್ಯೆ ಎಲ್ಲಾದರೂ ಎಚ್ಚರವಾದರೆ ತಕ್ಷಣವೇ ಮೊಬೈಲ್ ತೆರೆದು ನೋಡುವ ಅಭ್ಯಾಸ. ಅದೇ ಮೊಬೈಲ್ ದೂರ ಇದ್ದರೆ ಹಾಗೆಯೇ ಮತ್ತೆ ನಿದ್ರೆ ಬಂದುಬಿಡುತ್ತದೆ. ವಾಸ್ತವವಾಗಿ, ಹೆಚ್ಚಿನ ಜನರು ರಾತ್ರಿಯಿಡೀ ಹಲವಾರು ಬಾರಿ ಎಚ್ಚರಗೊಳ್ಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಮತ್ತೆ ಮಲಗಲು ಪ್ರಯತ್ನಿಸಿದಾಗ, ಫೋನ್ ನೋಡುತ್ತಾರೆ, ಫೋನ್ ಬೆಳಕು ನಿಮ್ಮ ಮೆದುಳು ಮತ್ತು ದೇಹವನ್ನು ನಿದ್ರೆಯಿಂದ ದೂರವಿಡುತ್ತದೆ, ಮೆದುಳು ಎಚ್ಚರವಾಗಿರುವಂತೆ ಮಾಡುತ್ತದೆ. ಇದರಿಂದ ನಿಮ್ಮ ನಿದ್ದೆ ಮಾಯವಾಗುತ್ತದೆ.

ಆರೋಗ್ಯ ಸಮಸ್ಯೆಗಳೂ ಇವೆ ಆಂಟೆನಾಗಳ ಜಾಲದ ಮೂಲಕ ರೇಡಿಯೋ ತರಂಗಗಳನ್ನು ರವಾನಿಸುವ ಮೂಲಕ ಸ್ಮಾರ್ಟ್‌ಫೋನ್‌ಗಳು ಸಂವಹನವನ್ನು ಸುಲಭಗೊಳಿಸುತ್ತವೆ. ಈ ತರಂಗಗಳನ್ನು ರೇಡಿಯೋ ತರಂಗಗಳು ಎಂದೂ ಕರೆಯುತ್ತಾರೆ, ವಾಸ್ತವವಾಗಿ ವಿದ್ಯುತ್ಕಾಂತೀಯ ಕ್ಷೇತ್ರವಾಗಿದೆ.

NTP ಸ್ಮಾರ್ಟ್‌ಫೋನ್ ಹತ್ತಿರ ಇಡುವ ಬಗ್ಗೆ ಅಧ್ಯಯನ ಮಾಡಿದೆ. US ನ್ಯಾಷನಲ್ ಟಾಕ್ಸಿಕಾಲಜಿ ಪ್ರೋಗ್ರಾಂ (NTP) 2018 ಮತ್ತು ಇತ್ತೀಚಿನ ಅಧ್ಯಯನದ ಫಲಿತಾಂಶಗಳನ್ನು ಪ್ರಕಟಿಸಿದೆ. ಗಂಡು ಇಲಿಗಳಲ್ಲಿ ಅಸಹಜ ಹೃದಯದ ಗೆಡ್ಡೆಗಳ ಅಪಾಯವನ್ನು ಅವರು ಕಂಡುಕೊಂಡರು, ಆದರೆ ಹೆಣ್ಣು ಇಲಿಗಳಲ್ಲಿ ಇಲ್ಲ. ಇದು ತಲೆನೋವು, ಸ್ನಾಯು ನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ