Road Safety: ಹೆಣ್ಣುಮಕ್ಕಳು ರಾತ್ರಿಯಲ್ಲಿ ಸ್ಕೂಟಿ-ಕಾರು ಓಡಿಸುವಾಗ ಈ ವಿಷಯಗಳನ್ನು ಸದಾ ನೆನಪಿನಲ್ಲಿಡಿ
ರಾತ್ರಿಯಾಯಿತು ಬೇಗ ಮನೆಗೆ ಹೋಗಬೇಕೆನ್ನುವ ಆತುರ ಬೇಡ, ನೀವೊಬ್ಬರೇ ಇದ್ದೀರಿ ಎಂದು ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಲೇಬೇಡಿ.
ರಾತ್ರಿಯಾಯಿತು ಬೇಗ ಮನೆಗೆ ಹೋಗಬೇಕೆನ್ನುವ ಆತುರ ಬೇಡ, ನೀವೊಬ್ಬರೇ ಇದ್ದೀರಿ ಎಂದು ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಲೇಬೇಡಿ. ರಾತ್ರಿ ವೇಳೆ ವಾಹನ ಚಲಾಯಿಸುವ ಹೆಣ್ಣುಮಕ್ಕಳಿಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಅದು ಹುಡುಗರಾಗಿರಲಿ ಅಥವಾ ಹುಡುಗಿಯರಾಗಿರಲಿ ನಿಯಮಗಳು ಒಂದೇ ಆದರೆ ಆದರೆ ಇಂದು ನಾವು ಇಲ್ಲಿ ಹೆಣ್ಣುಮಕ್ಕಳ ವಾಹನ ಚಾಲನೆ ಹಾಗೂ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದೇವೆ. ಮನೆಗೆ ತಲುಪಲು ಎಂದಿಗೂ ಆತುರಪಡಬೇಡಿ.
ವಾಹನದ ವೇಗವನ್ನು ಎಂದಿಗೂ ಹೆಚ್ಚಿಸಬೇಡಿ. ರಾತ್ರಿಯ ಸಮಯದಲ್ಲಿ ರಸ್ತೆ ಸಂಪೂರ್ಣ ಖಾಲಿಯಾಗಿದ್ದರೆ, ಜನರು ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಇದರಿಂದ ನಾವು ಬೇಗ ಮನೆಗೆ ತಲುಪಬಹುದು ಎಂದುಕೊಂಡಿರುತ್ತಾರೆ ಅಪ್ಪಿತಪ್ಪಿಯೂ ಇಂತಹ ತಪ್ಪು ಮಾಡಬೇಡಿ.
ವೇಗಕ್ಕೆ ಗಮನ ಕೊಡಿ ತಡರಾತ್ರಿ ಚಾಲನೆ ಮಾಡುವಾಗ ವೇಗದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ ಸಂಚಾರ ನಿಯಮದ ಬಗ್ಗೆ ಅಷ್ಟೇ ಜಾಗ್ರತೆ ಇರಲಿ. ರಸ್ತೆ ಖಾಲಿ ಇದೆ ಎಂದು ವೇಗದ ಚಾಲನೆ ಬೇಡ.
ವಾಹನ ಓವರ್ಟೇಕ್ ಮಾಡುತ್ತಿದ್ದರೆ ಹೀಗೆ ಮಾಡಿ ಹುಡುಗಿಯರೇ ನೀವು ಕಾರು ಅಥವಾ ಸ್ಕೂಟಿ ಓಡಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ, ನೀವು ಕನ್ನಡಿಯನ್ನು ಸದಾ ನೋಡುತ್ತಿರಿ. ಯಾವುದೇ ವಾಹನವು ನಿಮ್ಮನ್ನು ಹಿಂದಿಕ್ಕುವುದಿಲ್ಲ ಅಥವಾ ಹಿಂಬಾಲಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ವಾಹನವು ನಿಮ್ಮನ್ನು ನಿರಂತರವಾಗಿ ನಿಮ್ಮ ವಾಹನದ ಹಿಂದೆ ಬರುತ್ತಿದ್ದರೆ ಸಮಯ ವ್ಯರ್ಥ ಮಾಡದೆ PCR ಗೆ ಕರೆ ಮಾಡಿ. ಇಲ್ಲವೇ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ.
ಚಾಲನೆ ಮಾಡುವಾಗ ನಿಂದನೀಯ ಪದಗಳನ್ನು ಬಳಸಬೇಡಿ ನೀವು ಚಾಲನೆ ಮಾಡುತ್ತಿದ್ದೀರಿ ಮತ್ತು ರಸ್ತೆಯಲ್ಲಿ ಯಾರೋ ಒಬ್ಬರು ಏನಾದರೂ ಹೇಳಿದರು ಎಂದರೆ ನೀವು ಕೆಟ್ಟ ಶಬ್ದಗಳನ್ನು ಬಳಸಬೇಡಿ. ಆ ಗಾಡಿನ ನಂಬರ್ ಅನ್ನು ನೋಟ್ ಮಾಡಿಕೊಂಡಿರಿ. ಯಾವುದೇ ಕಾರಣಕ್ಕೂ ಗಾಡಿ ನಿಲ್ಲಿಸಿ ವಾದಕ್ಕಿಳಿಯಬೇಡಿ.
ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡಬೇಡಿ ಹುಡುಗಿಯರು ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಿರುವುದು ಹಲವು ಬಾರಿ ಕಂಡು ಬಂದಿದೆ. ಆದ್ದರಿಂದ ಇದನ್ನು ಮಾಡಬೇಡಿ. ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡುವುದನ್ನು ತಪ್ಪಿಸಿ.
ತಡರಾತ್ರಿ ವಾಹನ ಚಾಲನೆ ಮಾಡುವಾಗ ಕನ್ನಡಿಯ ಮೇಲೆ ಸದಾ ಗಮನವಿರಲಿ ಅದರಲ್ಲೂ ಹುಡುಗಿಯರು ವಾಹನ ಚಲಾಯಿಸುವಾಗ ಕನ್ನಡಿಯತ್ತ ಗಮನ ಹರಿಸಬೇಕು. ಫೋನ್‌ನಲ್ಲಿ ಮಾತನಾಡುವಾಗ ನಿಮ್ಮ ಗಮನ ಬೇರೆಡೆಗೆ ಹೋಗುತ್ತಿದ್ದರೆ ಅಪಘಾತದ ಅಪಾಯ ಹೆಚ್ಚಿರುತ್ತದೆ.
ತಡರಾತ್ರಿ ದಾರಿಯಲ್ಲಿ ಯಾರೊಂದಿಗೂ ಜಗಳವಾಡಬೇಡಿ ನೀವು ಚಾಲನೆ ಮಾಡುತ್ತಿದ್ದೀರಿ ಮತ್ತು ಇನ್ನೊಂದು ವಾಹನವು ನಿಮಗೆ ಡಿಕ್ಕಿ ಹೊಡೆದಿದೆ ಎಂದು ಭಾವಿಸೋಣ. ಅಥವಾ ಯಾರಾದರೂ ನಿಮ್ಮೊಂದಿಗೆ ಏನಾದರೂ ವಾದಿಸಲು ಪ್ರಯತ್ನಿಸುತ್ತಿದ್ದಾರೆ ಎಂದಾದರೆ ಯಾವಾಗಲೂ ಚರ್ಚೆಯನ್ನು ನಿರ್ಲಕ್ಷಿಸಲು ಪ್ರಯತ್ನಿಸಿ. ಏಕೆಂದರೆ ಚರ್ಚೆಯು ಜಗಳಕ್ಕೆ ತಿರುಗಿದಾಗ ಮತ್ತು ನಂತರ ಅದು ನಿಮಗೆ ತೊಂದರೆಗಳನ್ನು ಉಂಟುಮಾಡಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ