TV9 Network Road to Safety Summit: ರಸ್ತೆ ಸುರಕ್ಷತೆ ಕುರಿತ ಕಾರ್ಯಕ್ರಮದಲ್ಲಿ ಸಚಿವ ನಿತಿನ್ ಗಡ್ಕರಿ ಭಾಗಿ

ಟಿವಿ9 ನೆಟ್​ವರ್ಕ್​ ಡಿಸೆಂಬರ್ 19 ರಂದು ಆಯೋಜಿಸಿರುವ ‘TV9 Network Road to Safety Summit' ನಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಪಾಲ್ಗೊಳ್ಳಲಿದ್ದಾರೆ.

TV9 Network Road to Safety Summit: ರಸ್ತೆ ಸುರಕ್ಷತೆ ಕುರಿತ ಕಾರ್ಯಕ್ರಮದಲ್ಲಿ ಸಚಿವ ನಿತಿನ್ ಗಡ್ಕರಿ ಭಾಗಿ
Tv9 Network Road to Safety Summit
Follow us
TV9 Web
| Updated By: ನಯನಾ ರಾಜೀವ್

Updated on: Dec 17, 2022 | 10:44 AM

ನವದೆಹಲಿ, ಡಿಸೆಂಬರ್ 17, 2022: ಟಿವಿ9 ನೆಟ್​ವರ್ಕ್​ ಡಿಸೆಂಬರ್ 19 ರಂದು ಆಯೋಜಿಸಿರುವ ‘TV9 Network Road to Safety Summit’ ನಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಪಾಲ್ಗೊಳ್ಳಲಿದ್ದಾರೆ. TV9 ನೆಟ್‌ವರ್ಕ್ ಭಾರತದ ನಂ. 1 ನ್ಯೂಸ್ ನೆಟ್‌ವರ್ಕ್ ಆಗಿದ್ದು ರಸ್ತೆ ಸಾರಿಗೆ ವಲಯದಲ್ಲಿ ವಿವಿಧ ಸಂಸ್ಥೆಗಳ ಜತೆ ಕೆಲಸ ಮಾಡಿದೆ ಮತ್ತು ಸುರಕ್ಷಾ ಬಂಧನ್, ಹೈವೇ ಹೀರೋಸ್, ಟ್ರಾನ್ಸ್​ಪೋರ್ಟ್​ ಪ್ರಶಸ್ತಿಗಳನ್ನು ಗೆದ್ದಿದೆ.

ರಸ್ತೆ ಸಾರಿಗೆ ಉದ್ಯಮದ ಮೇಲೆ ಕೇಂದ್ರೀಕರಿಸಿರುವ TV9 ನೆಟ್‌ವರ್ಕ್ ಈಗ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ವಿಶೇಷವೆಂದರೆ ಇಂದು ದೇಶದಲ್ಲಿ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ದೇಶದ ರಸ್ತೆ ಜಾಲವು ಬಹುದೂರದವರೆಗೆ ಹರಡಿದ್ದು, ಲಕ್ಷಾಂತರ ಭಾರತೀಯರಿಗೆ ಸರಿಸಾಟಿಯಿಲ್ಲದ ಚಲನಶೀಲತೆಯನ್ನು ಒದಗಿಸುತ್ತಿದೆ, ಇದು ಶ್ಲಾಘನೀಯವಾಗಿದೆ.

ಟಿವಿ9 ನೆಟ್‌ವರ್ಕ್‌ನ ಡಿಜಿಟಲ್ ಮತ್ತು ಬ್ರಾಡ್‌ಕಾಸ್ಟ್‌ನ ಚೀಫ್ ಗ್ರೋಥ್ ಅಧಿಕಾರಿ ರಕ್ತಿಮ್ ದಾಸ್ ಮಾತನಾಡಿ, ಟಿವಿ9 ನೆಟ್‌ವರ್ಕ್ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಬೆಳಕಿಗೆ ತರುವುದರಲ್ಲಿ ಮುಂಚೂಣಿಯಲ್ಲಿದೆ, ಹಾಗೆಯೇ ನಮ್ಮ ರಸ್ತೆಗಳನ್ನು ಸುರಕ್ಷಿತವಾಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಈ ವಿಚಾರವನ್ನು ಮುಖ್ಯವಾಹಿನಿಗೆ ತರುವುದು ಮತ್ತು ಜನರಲ್ಲಿ ಅರಿವು ಮೂಡಿಸುವುದು ಜವಾಬ್ದಾರಿಯುತ ಮಾಧ್ಯಮ ಸಂಸ್ಥೆಯಾಗಿ ನಮ್ಮ ಕರ್ತವ್ಯ ಎಂದು ನಾವು ಭಾವಿಸಿದ್ದೇವೆ. ಕಾಂಟಿನೆಂಟಲ್ ಟೈರ್ಸ್ ಪ್ರಸ್ತುತಪಡಿಸಿದ ರೋಡ್ ಟು ಸೇಫ್ಟಿ ಶೃಂಗಸಭೆಯು ಮೊದಲ ಹೆಜ್ಜೆ ಎಂದೇ ಹೇಳಬಹುದು.

ಈ ಸಮ್ಮಿತ್ ವಾಹನ ಚಾಲಕರು ಮತ್ತು ಸವಾರರು ಜವಾಬ್ದಾರಿಯುತ ನಾಗರಿಕರಾಗಿ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲು ಉತ್ತೇಜಿಸುವ ಪ್ರಯತ್ನವಾಗಿದೆ ಎಂದು ಹೇಳಿದರು. ರಸ್ತೆ ಸುರಕ್ಷತೆಯನ್ನು ನಮ್ಮ ಪ್ರಾಥಮಿಕ ಕರ್ತವ್ಯವನ್ನಾಗಿ ಮಾಡಲು ನಾವು ಪ್ರತಿಯೊಬ್ಬ ವ್ಯಕ್ತಿಯ ಡಿಎನ್‌ಎಯಲ್ಲಿ ಅದನ್ನು ಅಳವಡಿಸಲು ಪ್ರಯತ್ನಿಸುತ್ತೇವೆ ಎಂದರು.

ಕಾಂಟಿನೆಂಟಲ್ ಟೈರ್ಸ್ ಇಂಡಿಯಾದ ಎಂಡಿ, ಬಿಎ ಟೈರ್ಸ್ ಎಪಿಎಸಿ, ಸೆಂಟ್ರಲ್ ರೀಜನ್ ಹೆಡ್ ಸಮೀರ್ ಗುಪ್ತಾ ಮಾತನಾಡಿ, ವರ್ಷಗಳಲ್ಲಿ ನಾವು ಸುರಕ್ಷತೆ ಮತ್ತು ಸೌಕರ್ಯದ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ಕಂಡುಕೊಂಡಿದ್ದೇವೆ. ಕಳೆದ ವರ್ಷ ನಾವು ನಮ್ಮ 150 ನೇ ವಾರ್ಷಿಕೋತ್ಸವವನ್ನು ಭವಿಷ್ಯವನ್ನು ಕಾಪಾಡುವ ನಮ್ಮ ಬದ್ಧತೆಯೊಂದಿಗೆ ಆಚರಿಸಿದ್ದೇವೆ.

ವಿಷನ್ ಝೀರೋ: ಶೂನ್ಯ ಸಾವುನೋವುಗಳು ಎನ್ನುವ ಎನ್ನುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಟೈರ್​ಗಳಲ್ಲಿ ಹೊಸ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ಶೂನ್ಯ ಸಾವು, ಶೂನ್ಯ ಅಪಘಾತ, ಶೂನ್ಯ ಗಾಯ ಸೇರಿದಂತೆ ರಸ್ತೆ ಸುರಕ್ಷತೆ ಕುರಿತು ನಾವು ಇಡುತ್ತಿರುವ ಹೆಜ್ಜೆಗಳಲ್ಲಿ ಇದು ಕೂಡ ಒಂದು ಎಂದು ಹೇಳಿದರು.

ಈ ಸಮ್ಮಿತ್​ನಲ್ಲಿ ಪ್ಯಾನಲ್ ಚರ್ಚೆಗಳು ನಡೆಯುತ್ತವೆ, ಅಲ್ಲಿ ಉದ್ಯಮದ ಅನುಭವಿಗಳು ಭಾಗಿಯಾಗಲಿದ್ದು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಮಾರುತಿ ಸುಜುಕಿಯ ಹಿರಿಯ ಕಾರ್ಯನಿರ್ವಾಹಕ ಶಶಾಂಕ್ ಶ್ರೀವಾಸ್ತವ , ಭಾರತ ಸಾರಿಗೆ ನಿಗಮದ ಅಧ್ಯಕ್ಷ ವಿನೀತ್ ಅಗರ್ವಾಲ್, ರಸ್ತೆ ಸುರಕ್ಷತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರೋಹಿತ್ ಬಲೂಜಾ, ವೋಲ್ವೋ ಐಷರ್ ವಾಣಿಜ್ಯ ವಾಹನಗಳ ಎಂಡಿ ಮತ್ತು ಸಿಇಒ ವಿನೋದ್ ಅಗರ್ವಾಲ್ – ನಮ್ಮ ರಸ್ತೆಗಳ ಸುರಕ್ಷತೆ ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ.

ಇದಲ್ಲದೆ ಸಂಸದ, ನಟ ರವಿ ಕಿಶನ್ ಶುಕ್ಲಾ, ದೆಹಲಿ ಪೊಲೀಸ್ ವಿಶೇಷ ಟ್ರಾಫಿಕ್ ಕಮಿಷನರ್ ಸುರೀಂದರ್ ಸಿಂಗ್ ಯಾದವ್ ಮತ್ತು ಒಟಿಟಿ ಸ್ಟಾರ್ ಅಭಿಲಾಷ್ ಥಪ್ಲಿಯಾಲ್ ಕೂಡ ರಸ್ತೆ ಸುರಕ್ಷತೆಯ ಉಪಕ್ರಮಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

ಭಾರತದ ಹೆಲ್ಮೆಟ್ ಮ್ಯಾನ್ ಎಂದು ಕರೆಯಲ್ಪಡುವ ರಾಘವೇಂದ್ರ ಕುಮಾರ್ ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುರಕ್ಷತಾ ಯೋಧರು, ರಸ್ತೆ ಗುಂಡಿಗಳನ್ನು ತುಂಬಲು ಮುಂದಾದ ಮನೋಜ್ ವಾಧ್ವಾ, ಗಾಜಿಯಾಬಾದ್‌ನ ಟ್ರಾಫಿಕ್ ನಾಯಕಿ ಡೋರಿಸ್ ಫ್ರಾನ್ಸಿಸ್ ಮತ್ತು ಚಂದ್ರಶೇಖರ್ ನಾರಾಯಣ ಮೋಹಿತೆ ಅವರನ್ನು ಸಾರಿಗೆ ಸಚಿವ ನಿತಿನ್ ಗಡ್ಕರಿ ಶೃಂಗಸಭೆಯಲ್ಲಿ ಸನ್ಮಾನಿಸಲಿದ್ದಾರೆ.

ಕಾಂಟಿನೆಂಟಲ್‌ನಿಂದ ಪ್ರಸ್ತುತಪಡಿಸಲಾಗುತ್ತಿರುವ TV9 ನೆಟ್‌ವರ್ಕ್ ರಸ್ತೆ ಸುರಕ್ಷತಾ ಶೃಂಗಸಭೆಯ ಈ ಆವೃತ್ತಿಯು TV9 ನೆಟ್‌ವರ್ಕ್‌ನ ರಸ್ತೆ ಸಾರಿಗೆ ಉದ್ಯಮದೊಂದಿಗೆ ನಡೆಯುತ್ತಿರುವ ಯೋಜನೆಯ ಒಂದು ಭಾಗವಾಗಿದೆ. TV9 ನೆಟ್‌ವರ್ಕ್ ಜೂನ್ 2022 ರಲ್ಲಿ ಲೀಡರ್ಸ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಅವಾರ್ಡ್ಸ್ ಅನ್ನು ಪ್ರಾರಂಭಿಸಿತು.

ಇದು ವಲಯದ ಉದ್ಯಮಿಗಳನ್ನು ಗುರುತಿಸಿತು ಮತ್ತು ಆಗಸ್ಟ್ 2022 ರಲ್ಲಿ ಸುರಕ್ಷಾ ಬಂಧನದಲ್ಲಿ ದೇಶದ 10,000 ಕ್ಕೂ ಹೆಚ್ಚು ಟ್ರಕ್ ಡ್ರೈವರ್‌ಗಳಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸಲಾಗಿದೆ. ಈ ಕಾರ್ಯಕ್ರಮವು ಡಿಸೆಂಬರ್ 19 ರಂದು ಸೋಮವಾರ ಸಂಜೆ 7 ಗಂಟೆಗೆ ನವದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.

10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
10 ಸ್ಪರ್ಧಿಗಳ ಮೇಲೆ ನಾಮಿನೇಷನ್ ತೂಗುಗತ್ತಿ; ಗೇಟ್​ಪಾಸ್ ಯಾರಿಗೆ?
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ಶನಿ ವ್ರತದ ಹಿಂದಿನ ರಹಸ್ಯ ಹಾಗೂ ಫಲಗಳ ವಿವರ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ವೃಶ್ಚಿಕ ರಾಶಿಗೆ ಸೂರ್ಯ ಪ್ರವೇಶ, ಗಜಕೇಸರಿ ಯೋಗ, 12 ರಾಶಿಗಳ ಫಲಾಫಲ ಇಲ್ಲಿದೆ
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಕುರುಬ ಸಮುದಾಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಮತಯಾಚನೆ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಶೃಂಗಾರದ ಹೊಂಗೆ ಮರ: ಭವ್ಯಾ, ತ್ರಿವಿಕ್ರಮ್ ಡ್ಯಾನ್ಸ್ ನೋಡಿ ನಾಚಿದ ಮನೆ ಮಂದಿ
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಬ್ರ್ಯಾಂಡ್ ಬೆಂಗಳೂರು ಅಂದರೇನು ಅಂತ ಜನಕ್ಕೆ ಈಗ ಅರ್ಥವಾಗುತ್ತಿದೆ!
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಇಂದಿನಿಂದ ಶಬರಿಮಲೆ ಮಂಡಲಪೂಜೆ ಪ್ರಾರಂಭ; ದರ್ಶನಕ್ಕೆ ಜನಸಾಗರ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ಮಾಜಿ ಪ್ರಧಾನಿ ಒಬ್ಬ ಡಿಸಿಎಂ ಬಗ್ಗೆ ರೌಡಿ ಅಂತೆಲ್ಲ ಮಾತಾಡೋದು ಸರಿಯಲ್ಲ:ಶಾಸಕ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ
ದೇವರ ವಿಗ್ರಹ ವಿರೂಪಗೊಳಿಸಿ ವಿಕೃತಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ