AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯೊಂದಿಗೆ ಜಗಳವಾಡಿ ಕೋಪದಲ್ಲಿ 2 ವರ್ಷದ ಮಗುವನ್ನು ಬಾಲ್ಕನಿಯಿಂದ ಎಸೆದ ಪಾಪಿ ತಂದೆ

ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾಧೆಯನ್ನು ನೀವು ಕೇಳಿರಬಹುದು, ಹಾಗೆಯೇ ಈ ಗಂಡ-ಹೆಂಡಿರ ಜಗಳದಲ್ಲಿ ಮಗುವಿನ ಪ್ರಾಣಕ್ಕೆ ಅಪಾಯ ಬಂದೊದಗಿದೆ.

ಪತ್ನಿಯೊಂದಿಗೆ ಜಗಳವಾಡಿ ಕೋಪದಲ್ಲಿ 2 ವರ್ಷದ ಮಗುವನ್ನು ಬಾಲ್ಕನಿಯಿಂದ ಎಸೆದ ಪಾಪಿ ತಂದೆ
PoliceImage Credit source: NDTV
Follow us
TV9 Web
| Updated By: ನಯನಾ ರಾಜೀವ್

Updated on: Dec 17, 2022 | 12:34 PM

ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾಧೆಯನ್ನು ನೀವು ಕೇಳಿರಬಹುದು, ಹಾಗೆಯೇ ಈ ಗಂಡ-ಹೆಂಡಿರ ಜಗಳದಲ್ಲಿ ಮಗುವಿನ ಪ್ರಾಣಕ್ಕೆ ಅಪಾಯ ಬಂದೊದಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡಿ ಬಳಿಕ 3 ಅಂತಸ್ತಿನ ಎತ್ತರದ ಬಾಲ್ಕನಿಯಿಂದ ಎರಡು ವರ್ಷದ ಮಗುವನ್ನು ಎಸೆದು ಬಳಿಕ ತಾನೂ ಜಿಗಿದಿದ್ದಾನೆ.

ಗಾಯಗೊಂಡಿರುವ ತಂದೆ ಮಗನನ್ನು ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್​ ಸೈನ್ಸ್​ಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ನವದೆಹಲಿಯ ಕಲ್ಕಾಜಿಯ ಕೊಳಗೇರಿಯಲ್ಲಿ ಘಟನೆ ನಡೆದಿದೆ. ಮಾನ್​ಸಿಂಗ್ ಹಾಗೂ ಆತನ ಪತ್ನಿ ಪೂಜಾ ಕಳೆದ ಕೆಲವು ತಿಂಗಳುಗಳಿಂದ ಜಗಳವಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: 8 ತಿಂಗಳ ಮಗು ನುಂಗಿದ್ದ ಬಾಟಲ್‌ ಮುಚ್ಚಳವನ್ನು ಯಶಸ್ವಿಯಾಗಿ ಹೊರತೆಗೆದ ಬೆಂಗಳೂರಿನ ವೈದ್ಯರು

ಪೂಜಾ ತನ್ನ ಮನೆಯಿಂದ ಹೊರಟು ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಕಾಜಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದಳು. ನಿನ್ನೆ ರಾತ್ರಿ ಆತ ಪೂಜಾಳನ್ನು ಭೇಟಿಯಾಗಿದ್ದ, ಜಗಳವಾಡಿದ್ದ, ಕೋಪದ ಭರದಲ್ಲಿ ಅವನು ತನ್ನ ಮಗನನ್ನು ಬಾಲ್ಕನಿಯಿಂದ ಕೆಳಗೆ ಎಸೆದು ಬಳಿಕ ತಾನೂ ಕೂಡ ಹಾರಿದ್ದನು. ವ್ಯಕ್ತಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ