ಮಗು ಬೇಕೆಂದವಳ ಕತೆ ಮುಗಿಸಿದ ಪಾತಕ ಪತಿ, ಪ್ರೀತಿಸಿ ಮದುವೆಯಾಗಿದ್ದವಳ ಜೊತೆ ಮನಸು ಮುರಿದುಕೊಂಡಿದ್ದ!

ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಆನಂದ್ ಹಾಸನದ ವಲ್ಲಾಭಾಯಿ ರಸ್ತೆಯ ಮನಮೆಯಲ್ಲಿ ವಾಸವಿದ್ದ. 2 ವರ್ಷಗಳ ಹಿಂದೆ ಮದುವೆ ಆಗಬೇಕು ಅಂತಿದ್ದವನಿಗೆ ಮದುವೆ ಬ್ರೋಕರ್ ಮೂಲಕ ಮೂಲತಃ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಗ್ರಾಮವೊಂದರ ಡಿಂಪಲ್ ಎಂಬಾಕೆಯ ಪ್ರಪೋಸಲ್ ಸಿಕ್ಕಿದೆ.

ಮಗು ಬೇಕೆಂದವಳ ಕತೆ ಮುಗಿಸಿದ ಪಾತಕ ಪತಿ, ಪ್ರೀತಿಸಿ ಮದುವೆಯಾಗಿದ್ದವಳ ಜೊತೆ ಮನಸು ಮುರಿದುಕೊಂಡಿದ್ದ!
ಮಗು ಬೇಕೆಂದವಳ ಕತೆ ಮುಗಿಸಿದ ಪಾತಕ ಪತಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 16, 2022 | 5:11 PM

ಅದು ಡಿಸೆಂಬರ್ 3ರ ಶನಿವಾರ ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ಮುದ್ದನಹಳ್ಳಿ ಗ್ರಾಮದ ಬಳಿ ಆಟೋದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅದೇನನ್ನೋ ಹಳ್ಳದತ್ತ ಬಿಸಾಡುತ್ತಿರೋದನ್ನ ಸ್ಥಳೀಯರು ಗಮನಿಸಿದ್ದಾರೆ. ಏನಾಯ್ತು ಏನೋ? ಎಂದು ಹತ್ತಿರ ಹೋಗಿ ನೋಡುವಷ್ಟರಲ್ಲಿ ಆಟೋ ಏರಿದ್ದ ಆತ (Husband) ಎಸ್ಕೇಪ್ ಆಗಿದ್ದ. ಕೂಡಲೆ ಹೊಂಡದತ್ತ ಹೋದ ಜನರು ಅಲ್ಲಿ ಹೊಂಡದ ಬದಿಯೇ ಮಹಿಳೆಯೊಬ್ಬಳ (wife) ಮೃತದೇಹ ಕಂಡಿದ್ದಾರೆ. ಕೂಡಲೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಮಾಹಿತಿ ಬರುತ್ತಲೆ ಸ್ಥಳಕ್ಕೆ ದೌಡಾಯಿಸಿ ಬಂದ ಚನ್ನರಾಯಪಟ್ಟಣ (Channarayapatna) ಗ್ರಾಮಾಂತರ ಠಾಣೆಯ ಇನ್ಟಪೆಕ್ಟರ್ ರೇಖಾಬಾಯಿ ಮತ್ತು ತಂಡ ಮೃತದೇಹವನ್ನು (murder) ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ.

ಬಳಿಕ, ಮೃತದೇಹ ಯಾರದ್ದು ಎಂದು ಮೊದಲು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ನೀಡಿದ ಸುಳಿವಿನ ಆಧಾರದಲ್ಲಿ ಆಟೋ ನಂಬರ್ ಪಡೆದು ಆಟೋ ಮಾಲೀಕ ಯಾರು, ಆತ ಬಿಸಾಡಿ ಹೋದ ಮೃತದೇಹ ಯಾರದ್ದು ಎನ್ನೋದನ್ನ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಕೆಎ 46 4701 ನಂಬರಿನ ಆಟೋ ಹಾಸನದ ವಲ್ಲಭಾಯಿ ರಸ್ತೆಯ ಆನಂದ್ ಎಂಬುವವಿಗೆ ಸೇರಿದ್ದು ಎನ್ನೋದು ಗೊತ್ತಾಗಿದೆ. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಹಾಸನಕ್ಕೆ ಬಂದು ವಲ್ಲಾಭಾಯಿ ರಸ್ತೆಯ ಎರಡನೇ ಕ್ರಾಸ್ ನಲ್ಲಿರೋ ಆನಂದ್ ಮನೆಗೆ ಬಂದು ಆನಂದ್ ನನ್ನ ವಿಚಾರ ಮಾಡೋಕೆ ಮುಂದಾಗಿದ್ದಾರೆ.

ಆದ್ರೆ ಅಷ್ಟೊತ್ತಿಗಾಗಲೆ ಆನಂದ್ ಮನೆ ಬಿಟ್ಟು ಒಂದು ದಿನ ಆಗಿದೆ ಎನ್ನೋ ವಿಚಾರ ಗೊತ್ತಾಗಿದೆ. ಸರಿ ಅಲ್ಲಿಗೆ ಅಲ್ಲಿ ಮೃತದೇಹ ಬಿಸಾಡಿದ್ದು ಆನಂದ್ ಹಾಗೂ ಆಟೋ ಕೂಡ ಆನಂದನಿಗೆ ಸೇರಿದ್ದು ಅನ್ನೋದು ಗೊತ್ತಾಗಿದೆ. ಆದ್ರೆ ಅಲ್ಲಿದ್ದ ಮೃತದೇಹ ಯಾರದ್ದು ಎನ್ನೋದನ್ನ ಖಾತ್ರಿ ಮಾಡಿಕೊಳ್ಳಲು ಪೊಲೀಸರು ಆನಂದನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆನಂದ್ ಗೆ ಮದುವೆಯಾಗಿತ್ತಾ, ಮದುವೆಯಾಗಿದ್ರೆ ಆತನ ಪತ್ನಿ ಎಲ್ಲಿದ್ದಾರೆ ಎನ್ನೋದನ್ನ ವಿಚಾರ ಮಾಡಿದಾಗಲೇ ಕೊಲೆ ರಹಸ್ಯ ಬಯಲಾಗಿ ಹೋಗಿತ್ತು.

ಪ್ರೀತಿಸಿ ಮದುವೆಯಾದವಳನ್ನೆ ಕೊಂದು ಮುಗಿಸಿದ್ದ ದುರುಳ:

ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಆನಂದ್ ಹಾಸನದ ವಲ್ಲಾಭಾಯಿ ರಸ್ತೆಯ ತನ್ನ ಮನೆಯಲ್ಲಿ ವಾಸ ಮಾಡಿಕೊಂಡಿದ್ದ. ಎರಡು ವರ್ಷಗಳ ಹಿಂದೆ ಮದುವೆ ಆಗಬೇಕು ಅಂತಾ ಹುಡುಗಿ ಹುಡುಕೋಕೆ ಶುರು ಮಾಡಿದ್ದಾಗ ಮದುವೆ ಬ್ರೋಕರ್ ಒಬ್ಬರ ಮೂಲಕ ಮೂಲತಃ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಸಮೀಪದ ಗ್ರಾಮವೊಂದರ ಡಿಂಪಲ್ (25) ಎಂಬಾಕೆಯ ಪ್ರಪೋಸಲ್ ಸಿಕ್ಕಿದೆ. ಆಕೆಯ ಮಾಹಿತಿ ಹಿಡಿದು ಅವಳಿಗೆ ಫೋನ್ ಮಾಡಿ ಆಕೆಯನ್ನ ಮಾತನಾಡಿಸಿದ್ದ ಆನಂದ್ ತನ್ನ ಬಗ್ಗೆಯೂ ಹೇಳಿಕೊಂಡಿದ್ದ.

ಇಬ್ಬರೂ ಫೋನ್ ನಲ್ಲಿ ಮಾತನಾಡುತ್ತಲೆ ಪರಿಚಯವಾಗಿ, ಸ್ನೇಹವಾಗಿತ್ತು. ಸ್ನೇಹ ಪ್ರೀತಿಯಾಗಿ ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಿದ್ದರೆ, ಡಿಂಪಲ್ ಪೋಷಕರು ಹೇಳೋ ಪ್ರಕಾರ ಡಿಂಪಲ್ ನರ್ಸಿಂಗ್ ಓದೋದಾಗಿ ಹಾಸನದಲ್ಲಿದ್ದವಳು. ತಮಗೇ ಗೊತ್ತಿಲ್ಲದಂತೆ ಆನಂದ್ ಎಂಬಾತನ ಮದುವೆಯಾಗಿದ್ದಳಂತೆ. ಮನೆಯರವರಿಗೆ ವಿಚಾರವನ್ನೇ ತಿಳಿಸದೆ ಮದುವೆ ಆಗಿದ್ದ ಡಿಂಪಲ್ ಹಾಸನದಲ್ಲಿ ಆನಂದ್ ಜೊತೆಗೆ ಸಂಸಾರ ಶುರುಮಾಡಿದ್ದಳು.

ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಒಂದು ಮುದ್ದಾದ ಮಗು ಕೂಡ ಆಗಿ ಇಬ್ಬರು ಖುಷಿಯಾಗಿದ್ದರು. ಆದ್ರೆ ಅದೇನಾಯ್ತೋ ಏನೋ ಗೊತ್ತಿಲ್ಲ ಸಣ್ಣ ಸಣ್ಣ ವಿಚಾರಕ್ಕೆ ಜಗಳ ಮಾಡಿಕೊಳ್ತಿದ್ದ ಈ ಜೋಡಿ ಕಡೆಗೆ ಒಂದು ದಿನ ಇಬ್ಬರೂ ದೂರ ದೂರ ಆಗೋ ಹಂತಕ್ಕೆ ಹೋಗಿದೆ. ಗಂಡ ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಹೆಂಡತಿ – ಹೆಂಡತಿ ತನ್ನ ಜೊತೆ ಹೊಂದಾಣಿಕೆ ಆಗ್ತಿಲ್ಲ ಎಂದು ಗಂಡ ಇದೇ ವಿಚಾರ ಇಬ್ಬರ ನಡುವೆ ಬಿರುಕು ಸೃಷ್ಟಿಮಾಡಿದೆ. ಕಡೆಗೊಂದು ದಿನ ತನ್ನ ಮಗು ತನಗಿರಲಿ ಎಂದು ಆನಂದ್ ಮಗುವನ್ನ ತೆಗೆದುಕೊಂಡು ಈಕೆಯನ್ನ ಬಿಟ್ಟು ಹೊರಟಿದ್ದ. ಮಗುವನ್ನ ತನ್ನ ಸಂಬಂಧಿಗಳ ಮನೆಯಲ್ಲಿಟ್ಟು ಡಿಂಪಲ್ ಳಿಂದ ದೂರವಾಗಿದ್ದ.

ಆದ್ರೆ ಮಗು ತನಗೆ ಬೇಕು ಅಂತಾ ಹಠಕ್ಕೆ ಬಿದ್ದಿದ್ದ ಡಿಂಪಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಡಿಸೆಂಬರ್ 3ರಂದು ಗಂಡ ಹೆಂಡತಿ ಇಬ್ಬರನ್ನೂ ಕರೆಸಿಕೊಂಡಿದ್ದ ಹಾಸನ ಮಹಿಳಾ ಠಾಣೆ ಪೊಲೀಸರು ಇಬ್ಬರಿಗೂ ಬುದ್ದಿ ಹೇಳಿದ್ದರು. ಪ್ರೀತಿಸಿ ಮದುವೆಯಾಗಿದ್ದೀರಾ… ಚೆನ್ನಾಗಿ ಹೊಂದಾಣಿಕೆಯಿಂದ ಜೀವನ ಮಾಡಿ ಎಂದು ತಿಳಿಯ ಹೇಳಿದ್ದರು. ಆಗಲಿ ಯೋಚನೆ ಮಾಡ್ತೀವಿ ಎಂದು ಒಪ್ಪಿಕೊಂಡ ಇಬ್ಬರೂ ಅಲ್ಲಿಂದ ಆಚೆ ಬಂದಿದ್ದರು.

ಹೊರಗೆ ಬಂದ ಡಿಂಪಲ್ ಳನ್ನ ತನ್ನ ಆಟೋಗೆ ಹತ್ತೋಕೆ ಹೇಳಿದ ಆನಂದ್ ನಿನಗೆ ಒಳ್ಳೇ ಊಟ ಕೊಡಿಸ್ತಿನಿ ಎಂದು ಚನ್ನರಾಯಪಟ್ಟಣದತ್ತ ಕರೆದೊಯ್ದಿದ್ದಾನೆ. ದಾರಿ ನಡುವೆ ಆಕೆಯನ್ನ ಕೆಳಗಿಳಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಕೊಂದು ಮೃತದೇಹವನ್ನ ರಸ್ತೆ ಬದಿ ಬಿಸಾಡಿ ಎಸ್ಕೇಪ್ ಆಗಿದ್ದಾನೆ. ಕೊಲೆ ದಾಖಲಿಸಿಕೊಂಡು ತನಿಖೆ ಮಾಡಿದ್ದ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಬೆಂಗಳೂರು, ಮೈಸೂರು, ಮಂಗಳೂರು ಅಂತಾ ಓಡಾಡಿಕೊಂಡಿದ್ದ ಪಾತಕ ಪತಿಯನ್ನ ಕೊನೆಗೆ ಬಂಧಿಸಿದ್ದಾರೆ.

ಕಬಾಬ್ ಬಿರಿಯಾನಿ ಆಸೆ ತೋರಿಸಿ ಪತ್ನಿಯನ್ನ ಕೊಂದನಾ ದುರುಳ:

ಮಗು ಬೇಕು, ಗಂಡ ತನ್ನ ಜೊತೆಗಿಲ್ಲದಿದ್ದರೂ ಪರ್ವಾಗಿಲ್ಲ ತನ್ನ ಮಗು ತನಗೇ ಬೇಕು ಎಂದು ಪೊಲೀಸ್ ಠಾಣೆ ಮೊರೆ ಹೋಗಿದ್ದ ಡಿಂಪಲ್ ಕಾನೂನಿನ ಮೂಲಕವೇ ಮಗುವನ್ನ ಪಡೆಯೋ ಹಠತೊಟ್ಟಿದ್ದಳು, ಆದ್ರೆ ವಿಚಾರಣೆ ಮಾಡಿದ್ದ ಪೊಲೀಸರು ಇಬ್ಬರಿಗೂ ಬುದ್ದಿ ಹೇಳಿ ಕಳಿಸಿದ್ದರು, ಇವಳು ಹೇಗಾದರೂ ಸರಿ ಕಾನೂನು ಹೋರಾಟ ಮಾಡಿ ಮಗು ಪಡೀತಾಳೆ ಎಂದು ಖಾತ್ರಿ ಮಾಡಿಕೊಂಡ ಪತಿ ಆನಂದ್ ಆಕೆಯನ್ನ ಮುಗಿಸೋಕೆ ಯೋಚನೆ ಮಾಡಿಕೊಂಡಿದ್ದ.

ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಗಿಸಿ ಆಚೆ ಬಂದ ಬಳಿಕ ಡಿಂಪಲ್ ಳನ್ನ ತನ್ನದೇ ಆಟೋಕೆ ಹತ್ತಿಸಿಕೊಂಡಿದ್ದ. ನಿನಗೆ ಕಬಾಬ್ ಕೊಡಿಸ್ತೀನಿ, ಒಳ್ಳೇ ಊಟ ಮಾಡಿಸ್ತೀನಿ ಬಾ ಎಂದು ಕರೆದೊಯ್ದಿದ್ದ, ಚೆನ್ನಾಗಿ ಮಾತನಾಡುತ್ತಲೆ ಅವಳನ್ನ ಹಾಸನದ ರಿಂಗ್ ರಸ್ತೆಗೆ ಕರೆದೊಯ್ದು ಅಲ್ಲೇ ಕಬಾಬ್ ತಿನ್ನಿಸಿದ್ದ.

ಅಲ್ಲಿಂದ ಮತ್ತೆ ಆಟೋ ಹತ್ತಿಸಿಕೊಂಡು ಬೇರೊಂದು ಕಡೆ ಊಟ ಮಾಡೋಣ ಬಾ ಎಂದು ಹೊರಟಿದ್ದ, ಹೀಗೆ ಹೋದವನು ರಿಂಗ್ ರಸ್ತೆ ಮೂಲಕ ಚನ್ನರಾಯಪಟ್ಟಣದ ಕಡೆಗೆ ಆಟೋ ತಿರುಗಿಸಿದ್ದ, ಚನ್ನರಾಯಟ್ಟಣಕ್ಕೆ ಯಾಕೆ ಹೋಗ್ತಿಯಾ ನಾನು ಊರಿಗೆ ಹೋಗಬೇಕು ಎಂದಾಗ ಚನ್ನರಾಯಪಟ್ಟಣದಲ್ಲಿ ಒಳ್ಳೇ ಬಿರಿಯಾನಿ ಸಿಗುತ್ತೆ, ಅಲ್ಲಿ ನಿನಗೆ ಬಿರಿಯಾನಿ ಕೊಡಿಸಿ ಅಲ್ಲಿಂದಲೇ ಬಸ್ ಹತ್ತಿಸ್ತಿನಿ ಬಾ ಎಂದು ಹೇಳಿ ನಂಬಿಸಿದ್ದ, ಸರಿ ಆಯ್ತು ಎಂದು ಅವನ ಜೊತೆ ಹೊರಟವಳನ್ನ ದಾರಿ ಮಧ್ಯೆ ಹಾಸನದಿಂಧ 25 ಕಿಲೋಮೀಟರ್ ದೂರ ಹೋಗುತ್ತಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮುದ್ದನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕಬ್ಬಿಣದ ರಾಡ್ ನಿಂದ ಹಲ್ಲೆಮಾಡಿ ಕೊಂದಿದ್ದ.

ತಾಳಿಕಟ್ಟಿದ ಮಡದಿಯನ್ನು ಬಡಿದು ಕೊಂದು ಆಟೋಕೆ ಮೃತದೇಹ ತುಂಬಿಕೊಂಡು ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಬಳಿಯ ಹೊಂಡವೊಂದರ ಸಮೀಪ ಮೃತದೇಹ ಬಿಸಾಡಿದ್ದಾನೆ. ಈ ವೇಳೆ ಜನರು ನೋಡಿದ್ದರಿಂದ ಆತುರಾತುರವಾಗಿ ಅಲ್ಲಿಂದ ಆಟೋ ಏರಿ ಎಸ್ಕೇಪ್ ಆಗಿದ್ದ. ಆಟೋವನ್ನ ಚನ್ನರಾಯಪಟ್ಟಣದಲ್ಲೇ ನಿಲ್ಲಿಸಿ ಅಲ್ಲಿಂದ ಬಸ್ ಏರಿ ತಲೆ ಮರೆಸಿಕೊಂಡಿದ್ದ.

ಕೊಲೆ ಕೇಸ್ ದಾಖಲು ಮಾಡಿಕೊಂಡಿದ್ದ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ತನಿಖೆ ಶುರು ಮಾಡಿಕೊಂಡಿದ್ದರು. ಕೊಲೆಯಾದವಳು ಡಿಂಪಲ್ ಕೊಲೆ ಮಾಡಿರುವುದು ಪತಿ ಆನಂದ್ ಅನ್ನೋದು ಖಾತ್ರಿಯಾದಾಗ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರೀತಿಸಿ ಮದುವೆಯಾಗಿ ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡಿರು ದೂರವಾಗಿದ್ದರೂ, ಪತಿ-ಪತ್ನಿ ತಮ್ಮ ಮಗು ತನಗೆ ಬೇಕು ಅನ್ನೋ ವಿಚಾರಕ್ಕೆ ಜಗಳ ಮಾಡಿಕೊಂಡು ಕಡೆಗೆ ಪತ್ನಿಯನ್ನೇ ಹತ್ಯೆಗೈದ ಪಾತಕ ಪತಿ ಈಗ ಪೊಲೀಸರಿಗೆ ತಗ್ಲಾಕಿಕೊಂಡಿದ್ದಾನೆ.

ವರದಿ: ಕೆ.ಬಿ. ಮಂಜುನಾಥ್, ಟಿವಿ 9, ಹಾಸನ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ