AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಲಿಫೋರ್ನಿಯದ ಡುಡ್ಲೀ ಹೆಸರಿನ ವ್ಯಕ್ತಿ ತುಂಬು ಗರ್ಭಿಣಿಯಾಗಿದ್ದ ಒಡಹುಟ್ಟಿದ ತಂಗಿ ಮತ್ತು ಭ್ರೂಣವನ್ನು ತಿವಿದು ಕೊಂದ ಅರೋಪದಲ್ಲಿ ಅರೆಸ್ಟ್ ಆಗಿದ್ದಾನೆ

ಓಣಿಯ ರಸ್ತೆಯಲ್ಲಿ ಸುಟ್ಟು ಕರಕಲಾಗಿರುವ ಮಹಿಳೆಯ ದೇಹದ ಬಿದ್ದಿರುವ ಬಗ್ಗೆ ಡಿಸೆಂಬರ್ 13 ಅಂದರೆ ಮಂಗಳವಾರದಂದು ಪೊಲೀಸರ ಗಮನಕ್ಕೆ ತರಲಾಗಿದೆ. ಸ್ಥಳದಲ್ಲಿ ಲಭ್ಯವಾದ ಸಾಕ್ಷಿಯನ್ನು ಆಧರಿಸಿ ಪೊಲೀಸರು ಡುಡ್ಲೀಯನ್ನು ಬಂಧಿಸಿದ್ದಾರೆ.

ಕ್ಯಾಲಿಫೋರ್ನಿಯದ ಡುಡ್ಲೀ ಹೆಸರಿನ ವ್ಯಕ್ತಿ ತುಂಬು ಗರ್ಭಿಣಿಯಾಗಿದ್ದ ಒಡಹುಟ್ಟಿದ ತಂಗಿ ಮತ್ತು ಭ್ರೂಣವನ್ನು ತಿವಿದು ಕೊಂದ ಅರೋಪದಲ್ಲಿ ಅರೆಸ್ಟ್ ಆಗಿದ್ದಾನೆ
ಎನ್-ಕಿಯಾ ರೆಬೆಕ್ಕಾ ಲೋಗನ್, ಕೊಲೆಯಾದ ತುಂಬು ಗರ್ಭಿಣಿ
TV9 Web
| Edited By: |

Updated on: Dec 17, 2022 | 8:08 AM

Share

ಅಮೆರಿಕ ಕ್ಯಾಲಿಫೋರ್ನಿಯಾದ ಫ್ರೆಸ್ನೋ ಎಂಬಲ್ಲಿ 26-ವರ್ಷ-ವಯಸ್ಸಿನ ಗರ್ಭಿಣಿ ಮಹಿಳೆಯನ್ನು ಕೊಂದು ಮೃತದೇಹಕ್ಕೆ ಬೆಂಕಿಹಚ್ಚಿದ ಅರೋಪದಲ್ಲಿ ಪೊಲೀಸರು ಆಕೆಯ ಒಟಹುಟ್ಟಿದ ಅಣ್ಣನನ್ನು ಬಂಧಿಸಿದ್ದಾರೆ. ಎನ್-ಕಿಯಾ ರೆಬೆಕ್ಕಾ ಲೋಗನ್ (N-Kiya Rebecca Logan) ಹೆಸರಿನ ಮಹಿಳೆಯನ್ನು ಕೊಂದ ಅರೋಪದಲ್ಲಿ 41-ವರ್ಷ-ವಯಸ್ಸಿನ ಆರನ್ ಜಮಾಲ್ ದುಡ್ಲೀಯನ್ನು (Aaron Jamal Dudley) ಬಂಧಿಸಲಾಗಿದೆ ಎಂದು ಫ್ರೆಸ್ನೊ ಪೊಲೀಸರು ಹೇಳಿದ್ದಾರೆ. ಬುಧವಾರದಂದು ಡಿಸ್ಟ್ರಿಕ್ಟ್ ಅಟಾರ್ನಿ ಲಿಸಾ ಸ್ಮಿಟ್ ಕ್ಯಾಂಪ್ ಜೊತೆ ಜಂಟಿ ಪತ್ರಿಕಾ ಗೋಷ್ಟಿ ನಡೆಸಿದ್ದ ಫ್ರೆಸ್ನೋ ನಗರದ ಪೊಲೀಸ್ ಮುಖ್ಯಸ್ಥ ಪಾಕೊ ಬಲ್ದೆರಾಮ (Paco Baldrerama) ಪ್ರಕರಣದ ವಿವರಗಳನ್ನು ನೀಡಿದ್ದಾರೆ. ಡುಡ್ಲೀ ತನ್ನ ತಂಗಿಯನ್ನು ಕೊಂದ ಬಳಿಕ ಪಕ್ಕದ ಓಣಿಗೆ ಅವಳ ದೇಹವನ್ನು ತೆಗೆದುಕೊಂಡು ಹೋಗಿ ಕೊಳ್ಳಿಯಿಟ್ಟಿದ್ದಾನೆ ಎಂದು ಬಲ್ದೆರಾಮ ಹೇಳಿದ್ದಾರೆ. ಕೊಲೆಮಾಡಲು ಅವನು ಹರಿತವಾದ ಆಯುಧವನ್ನು ಬಳಸಿದ್ದಾನೆ ಎಂದು ಪೊಲೀಸ್ ಮುಖ್ಯಸ್ಥ ಹೇಳಿದ್ದಾರೆ.

ಎಲ್ಲ ಅಪರಾಧಿಗಳ ಸಹಜ ಪ್ರವೃತ್ತಿಯಂತೆ ಡುಡ್ಲೀ ಪೊಲೀಸರನ್ನು ಕಂಡಾಕ್ಷಣ ಪರಾರಿಯಾಗುವ ಪ್ರಯತ್ನ ಮಾಡಿದ ಎಂದು ಬಲ್ದೆರಾಮ ಹೇಳಿದ್ದಾರೆ.

ಮಂಗಳವಾರ ಪೊಲೀಸರಿಗೆ ಮಾಹಿತಿ 

ಓಣಿಯ ರಸ್ತೆಯಲ್ಲಿ ಸುಟ್ಟು ಕರಕಲಾಗಿರುವ ಮಹಿಳೆಯ ದೇಹದ ಬಿದ್ದಿರುವ ಬಗ್ಗೆ ಡಿಸೆಂಬರ್ 13 ಅಂದರೆ ಮಂಗಳವಾರದಂದು ಪೊಲೀಸರ ಗಮನಕ್ಕೆ ತರಲಾಗಿದೆ. ಸ್ಥಳದಲ್ಲಿ ಲಭ್ಯವಾದ ಸಾಕ್ಷಿಯನ್ನು ಆಧರಿಸಿ ಪೊಲೀಸರು ಡುಡ್ಲೀಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:  ಸೆನ್ಸೇಷನಲ್ ಕ್ರೈಮ್ ಕತೆಗಳು: ಅಮೆರಿಕದ ಪೊಲೀಸರಿಗೆ ಸವಾಲಾಗಿ ಕಾಡಿದ ‘ಬಾಯ್ ಇನ್ ದಿ ಬಾಕ್ಸ್’ ಪ್ರಕರಣ 65 ವರ್ಷಗಳ ನಂತರವೂ ಇತ್ಯರ್ಥಗೊಂಡಿಲ್ಲ!

ಅದಲ್ಲದೆ, ದಾರಿಹೋಕನೊಬ್ಬ ಶವದ ಬಳಿ ಡುಡ್ಲೀ ನಿಂತಿರುವ ದೃಶ್ಯವನ್ನು ತನ್ನ ಫೋನಲ್ಲಿ ಕ್ಲಿಕ್ಕಿಸಿ ಅದನ್ನು ಪೊಲೀಸರಿಗೆ ನೀಡಿದ್ದಾನೆ. ಆ ಸ್ಥಳದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲೂ ಡುಡ್ಲೀ ಭಾರದ ಕಸದ ಚೀಲವನ್ನು ಎಳೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಆ ಕಸದ ಚೀಲದಲ್ಲೇ ಲೋಗನ್ ದೇಹವಿತ್ತೆಂದು ಪೊಲೀಸರು ಶಂಕಿಸಿದ್ದಾರೆ.

Aaron Jamal Dudley, Accused

ಆರನ್ ಜಮಾಲ್ ಡುಡ್ಲೀ. ಆರೋಪಿ

ಅವನ ಮನಸ್ಥಿತಿ ಅರ್ಥವಾಗದು!

‘ಒಡಹುಟ್ಟಿದ ತಂಗಿಯನ್ನು ನಿರ್ದಯತೆಯಿಂದ ಹಲವಾರು ಬಾರಿ ಇರಿದು ಕೊಂದು ಸಾಯಿಸಿ ಅವಳ ದೇಹವನ್ನು ಸುಟ್ಟ ಅವನು ಎಂಥ ರಾಕ್ಷಸ ಸ್ವರೂಪಿಯಾಗಿದ್ದ ಮತ್ತು ಅವಳ ಬಗ್ಗೆ ಅದೆಷ್ಟು ದ್ವೇಷವಿಟ್ಟುಕೊಂಡಿದ್ದ ಅನ್ನೋದನ್ನು ಗ್ರಹಿಸಲು ಕಷ್ಟವಾಗುತ್ತಿದೆ,’ ಎಂದು ಬಲ್ದೆರಾಮ ಹೇಳಿದ್ದಾರೆ.

ಅರೋಪಿಯ ಕೊಲೆ ಉದ್ದೇಶ ಏನಾಗಿತ್ತು ಅಂತ ಪೊಲೀಸರು ಬಹಿರಂಗಪಡಿಸಿಲ್ಲ ಅದರೆ ಅವರ ಮನೆಗೆ ಜುಲೈ 28, 2021 ರಂದು ಒಂದು ಕರೆ ಮಾಡಲಾಗಿತ್ತಂತೆ. ಆಗ ಲೋಗನ್ ತನ್ನ ಸುರಕ್ಷತೆಯ ಬಗ್ಗೆ ಪೊಲೀಸರಲ್ಲಿ ಆತಂಕ ವ್ಯಕ್ತಪಡಿಸಿದ್ದಳು.

ಕಡ್ಡಾಯ ಮಾನಸಿಕ ಆರೋಗ್ಯ ಪರಿವೀಕ್ಷಣೆ

ಈ ಘಟನೆಯ ಬಳಿಕ ಡುಡ್ಲೀಯಿಂದ ಬೇರೆಯವರಿಗೆ ಅಥವಾ ಖುದ್ದು ಅವನಿಗೆ ಅಪಾಯವಿರುವುದನ್ನು ಮನಗಂಡಿರುವ ಪೊಲೀಸರು 72-ಗಂಟೆಗಳ ಅವಧಿಗೆ ಅವನನ್ನು ಕಡ್ಡಾಯ ಮಾನಸಿಕ ಆರೋಗ್ಯ ಪರಿವೀಕ್ಷಣೆಯಲ್ಲಿರಿಸಿದ್ದಾರೆ. ಅವನು ವಿಚಾರಣೆ ಎದುರಿಸಲು ಶಕ್ತನಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:  ಸೆನ್ಸೇಷನಲ್ ಕ್ರೈಮ್ ಕತೆಗಳು: ಕೊಲೆಯಾದ ಮಹಿಳೆಯೇ ಪ್ರೇತಾತ್ಮವಾಗಿ ಹಂತಕನನ್ನು ಹಿಡಿದುಕೊಟ್ಟ ನಂಬಲಸದಳ ಕತೆಯಿದು!

‘ಭೀಕರವಾಗಿ ಹತ್ಯೆಗೈದ ಬಳಿಕ ಶವಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯವನ್ನು ಅಳಿಸಿ ಹಾಕುವಷ್ಟು ಕ್ಷಮತೆಯನ್ನು ಡುಡ್ಲೀ ಪ್ರದರ್ಶಿಸಿದ್ದಾನೆ. ಅವನನ್ನು ಬಂಧಿಸಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಅವನು ಮಾಡಿದ್ದಾನೆ. ತಾನೇನು ಮಾಡುತ್ತಿದ್ದೇನೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು, ಅವನು ಮೂರ್ಖನೇನೂ ಅಲ್ಲ,’ ಎಂದು ಬಲ್ದೆರಾಮ ಹೇಳಿದ್ದಾರೆ.

ತುಂಬು ಗರ್ಭಿಣಿ 

ಹತ್ಯೆಯಾಗುವಾಗ ಲೋಗನ್ ತುಂಬು ಗರ್ಭಿಣಿಯಾಗಿದ್ದಳು (36 ವಾರ), ಆದರೆ ಆರೋಪಿಯು ಅವಳ ಹೊಟ್ಟೆಯ ಮೇಲೂ ಮನಬಂದಂತೆ ತಿವಿದ ಕಾರಣ ಅವಳ ಗರ್ಭಕೋಶ ಕೂಡ ಛಿದ್ರಗೊಂಡಿದ್ದು ಸ್ಕ್ಯಾನಿಂಗ್ ನಲ್ಲಿ ಗೊತ್ತಾಗಿದೆ. ಅವಳ ಅರೆಬೆಂದ ದೇಹದ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ತನ್ನ ಮಗುವಿಗೆ ಆಕೆ ‘ನೋಹ’ ಅಂತ ನಾಮಕರಣ ಮಾಡಲು ನಿಶ್ಚಯಿಸಿದ್ದಳು.

ಕ್ಯಾಲಿಫೋರ್ನಿಯಾದ ಕಾನೂನು ಪರಿಣಿತರ ಪ್ರಕಾರ ಡುಡ್ಲೀ ಎರಡು ಹಂತದ ಕೊಲೆ ಚಾರ್ಜ್​ಗಳನ್ನುಎದುರಿಸಲಿದ್ದಾನೆ. ಚಾರ್ಜ್​ಗಳು ಸಾಬೀತಾದರೆ ಅವನಿಗೆ ಮರಣದಂಡನೆಯ ಶಿಕ್ಷೆಯಾಗಬಹುದು ಇಲ್ಲವೇ ಪರೋಲ್ ರಹಿತ ಜೀವಾವಧಿ ಶಿಕ್ಷೆಗೆ ಗುರಿಯಾಗಬಹುದು.

‘ಭ್ರೂಣದ ಬೆಳವಣಿಗೆ 7-8 ವಾರಗಳಿಗಿಂತ ಅಧಿಕವಾಗಿದ್ದರೆ ಮತ್ತು ಒಂದು ಮೂರನೇ ಪಾರ್ಟಿ ಉದ್ದೇಶಪೂರ್ವಕವಾಗಿ ಅದರ ಹತ್ಯೆಗೈದಿದ್ದರೆ ಅದನ್ನು ಕೊಲೆಯೆಂದೇ ಪರಿಗಣಿಸಲಾಗುತ್ತದೆ,’ ಎಂದು ಸ್ಮಿಟ್ ಕ್ಯಾಂಪ್ ಹೇಳಿದ್ದಾರೆ.

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್