ಸೆನ್ಸೇಷನಲ್ ಕ್ರೈಮ್ ಕತೆಗಳು: ಕೊಲೆಯಾದ ಮಹಿಳೆಯೇ ಪ್ರೇತಾತ್ಮವಾಗಿ ಹಂತಕನನ್ನು ಹಿಡಿದುಕೊಟ್ಟ ನಂಬಲಸದಳ ಕತೆಯಿದು!

ವಿಸ್ಮಯಕಾರಿ ಹಾಗೂ ಭಯ ಮೂಡಿಸುತ್ತಿದ್ದ ಕನಸುಗಳ ಬಗ್ಗೆ ಚುವಾವ ತನ್ನ ಗಂಡನಿಗೆ ಹೇಳಲಾರಂಭಿಸಿದಳು. ಹಾಗೆಯೇ, ಕನಸಲ್ಲಿ ಬರುತ್ತಿದ್ದ ಬಾಸಾಳ ಪ್ರೇತಾತ್ಮದ ಮೇಲೆ ಕ್ರಮೇಣ ಹಿಡಿತ ಸಾಧಿಸಿ ಅದನ್ನು ತನ್ನ ನಿಯಂತ್ರಣಕ್ಕೆ ಕೂಡ ತಂದುಕೊಂಡಳು.

ಸೆನ್ಸೇಷನಲ್ ಕ್ರೈಮ್ ಕತೆಗಳು: ಕೊಲೆಯಾದ ಮಹಿಳೆಯೇ ಪ್ರೇತಾತ್ಮವಾಗಿ ಹಂತಕನನ್ನು ಹಿಡಿದುಕೊಟ್ಟ ನಂಬಲಸದಳ ಕತೆಯಿದು!
ತೆರೆಸಿಟಾ ಬಾಸಾ ಮತ್ತು ಹಂತಕ ಆಲನ್ ಶೋವರಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 13, 2022 | 7:18 AM

ಸೆನ್ಸೇಷನಲ್  ಕ್ರೈಮ್ ಕತೆಗಳ ಸರಣಿಯಲ್ಲಿ ನಿನ್ನೆ ನಾವು ನಿಮಗೆ ಎರಡು ಬಗೆಹರಿಯದ ಪ್ರಕರಣಗಳ ಬಗ್ಗೆ ಹೇಳಿದ್ದೆವು. ಇವತ್ತಿನ ಕಥೆ ಭಿನ್ನವಾಗಿದೆ ಮತ್ತು ನಂಬಲು ಅಸಾಧ್ಯವೆನಿಸುವಂಥದ್ದಾಗಿದೆ. ಯಾಕೆ ಗೊತ್ತ್ತಾ? ಈ ಕತೆಯಲ್ಲಿ ಕೊಲೆಯಾದ ಮಹಿಳೆಯ ಪ್ರೇತಾತ್ಮವೇ ಹಂತಕನ ಸುಳಿವು ನೀಡಿ ಅವನಿಗೆ ಶಿಕ್ಷೆಯಾಗುವ ಹಾಗೆ ಮಾಡಿತ್ತು. ನಾವು ತಮಾಷೆ ಮಾಡ್ತಿಲ್ಲ ಮಾರಾಯ್ರೇ, ಇದು ಅಕ್ಷರಶಃ ಸತ್ಯ. ಅಮೆರಿಕಾದ ಚಿಕ್ಯಾಗೊ ನಗರದಲ್ಲಿ ತೆರೆಸಿಟಾ ಬಾಸಾ ಹೆಸರಿನ ಉಸಿರಾಟ ಚಿಕಿತ್ಸಕಿ ಕೊಲೆ ನಡೆಯುತ್ತದೆ. ಇದು ಸುಮರು 45 ವರ್ಷಗಳ ಹಿಂದೆ ಅಂದರೆ 1977 ರಲ್ಲಿ ನಡೆದ ಘಟನೆ. ಬಾಸಾಳ ದೇಹ ಅವಳ ಮನೆಯಲ್ಲಿ ಪತ್ತೆಯಾದಾಗ ಎದೆಯಲ್ಲಿ ಕಟುಕರು ಬಳಸುವ ಕತ್ತಿ ನೆಟ್ಟಿತ್ತು ಮತ್ತು ಶವ ಬಿದ್ದುಕೊಂಡಿದ್ದ ಹಾಸಿಗೆ ಹೊತ್ತಿ ಉರಿಯುತಿತ್ತು.

ನೆರೆಹೊರೆಯವ ಮೂಲಕ ವಿಷಯ ಗೊತ್ತಾದ ಮೇಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಸಾಳ ಆಭರಣಗಳು ನಾಪತ್ತೆಯಾಗುರುವುದನ್ನು ಕಂಡುಕೊಂಡರು. ಅಲ್ಲಿಗೆ ಅದು ಮರ್ಡರ್ ಫಾರ್ ಗೇನ್ ಅನ್ನೋದು ಅವರಿಗೆ ಮನವರಿಕೆಯಾಯಿತು. ಆದರೆ ಕೊಲೆಗಾರ ಮಾತ್ರ ಯಾವುದೇ ಸುಳಿವನ್ನು ಬಿಟ್ಟಿರಲಿಲ್ಲ. ಪೊಲೀಸರು ಸುಳಿವುಗಳಿಗಾಗಿ ಹಗಲಿರುಳು ತಡಕಾಡಿದರೂ ಲಾಭವಾಗಲಿಲ್ಲ.

ಅವರ ಪ್ರತಿ ಹುಡುಕಾಟ, ತರ್ಕ ಫಲ ನೀಡದೆ ಹೋಯಿತು. ಆದರೆ ಬಾಸಾಳ ಸಹೋದ್ಯೋಗಿ ರೆಮಿ ಚುವಾ ಅನಿರೀಕ್ಷಿತವಾಗಿ ಸುಳಿವು ಮತ್ತು ಮಾಹಿತಿಯ ಮೂಲವಾಗಿ ಪೊಲೀಸರಿಗೆ ಲಭ್ಯವಾದಳು.

ಚುವಾ ಕೆಲಸ ಮಾಡುವಾಗ ಬಾಸಾಳ ಇಮೇಜುಗಳು ಅವಳ ಮುಂದೆ ಬಂದಂತಾಗುತಿತ್ತು ಮತ್ತು ಕನಸಿನಲ್ಲೂ ಅವಳು ಬರುತ್ತಿದ್ದಳಂತೆ. ಕನಸಲ್ಲಿ ಅವಳು ಮತ್ತು ಬಾಸಾ ಕೆಲಸ ಮಾಡುತ್ತಿದ್ದ ಕಚೇರಿಯ ಲಾಕರ್ ರೂಮು ಪದೇಪದೆ ಬರುತ್ತಿತ್ತು. ಆ ರೂಮಲ್ಲಿ ಬಾಸಾ ಹಿಂದೆ ಒಬ್ಬ ವ್ಯಕ್ತಿ ನಿಂತಿದ್ದು ಅವಳಿಗೆ ಕಾಣಿಸುತಿತ್ತು. ಆ ಕನಸು ಅವಳಿಗೆ ಪದೇಪದೆ ಬರಲಾರಂಭಿಸಿತ್ತು.

ವಿಸ್ಮಯಕಾರಿ ಹಾಗೂ ಭಯ ಮೂಡಿಸುತ್ತಿದ್ದ ಕನಸುಗಳ ಬಗ್ಗೆ ಚುವಾವ ತನ್ನ ಗಂಡನಿಗೆ ಹೇಳಲಾರಂಭಿಸಿದಳು. ಹಾಗೆಯೇ, ಕನಸಲ್ಲಿ ಬರುತ್ತಿದ್ದ ಬಾಸಾಳ ಪ್ರೇತಾತ್ಮದ ಮೇಲೆ ಕ್ರಮೇಣ ಹಿಡಿತ ಸಾಧಿಸಿ ಅದನ್ನು ತನ್ನ ನಿಯಂತ್ರಣಕ್ಕೆ ಕೂಡ ತಂದುಕೊಂಡಳು. ಇದೆಲ್ಲ ಅವಳ ಕನಸಿನಲ್ಲೇ ನಡೆಯುತಿತ್ತು.

ಪ್ರೇತಾತ್ಮ ಜೊತೆ ಮಾತಾಡಿ ಸಂಗ್ರಹಿಸಿದ ಮಾಹಿತಿಯನ್ನೆಲ್ಲ ಚುವಾ ತನ್ನ ಗಂಡನಿಗೆ ತಿಳಿಸಿದಳು. ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆಲನ್ ಶೋವರೀ ಹೆಸರಿನ ಹಿರಿಯ ವ್ಯಕ್ತಿಯೊಬ್ಬ, ಬಾಸಾಳ ಮನೆಗೆ ಟಿವಿ ರಿಪೇರಿ ಮಾಡಲು ಹೋದವನು ಅವಳ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ಕಟುಕರ ಬಳಸುವ ಚಾಕುವಿನಿಂದ ತಿವಿದು ಕೊಂದಿದ್ದ. ಹತ್ಯೆ ನಡೆಸಿದ ಬಳಿಕ ಸಾಕ್ಷ್ಯ ನಾಶಪಡಿಸಲು ಅವಳ ಹಾಸಿಗೆಗೆ ಬೆಂಕಿ ಹಚ್ಚಿದ್ದ. ಅವಳ ಮನೆಯಿಂದ ಹೊರಡುವ ಮೊದಲು ಬಾಸಾಳ ಚಿನ್ನಾಭರಣಗಳು ಮತ್ತು ಮನೆಯಲ್ಲಿದ್ದ ನಗದನ್ನು ಕದ್ದೊಯ್ದಿದ್ದ.

ಇದೆಲ್ಲವನ್ನು ಚುವಾಳ ಕನಸಲ್ಲಿ ಬಾಸಾಲ ಆತ್ಮ ತಿಳಿಸಿತು! ಅಷ್ಟು ಮಾತ್ರವಲ್ಲ, ತನ್ನ ಆಭರಣಗಳು ಶೋವರೀ ಪ್ರೇಯಸಿಯ ಬಳಿಯಲ್ಲಿವೆ, ಅವಳು ತನ್ನ ಯಾವ ಆಭರಣ ಧರಿಸಿದ್ದಾಳೆ ಮತ್ತು ಯಾವ ಆಭರಣಗಳನ್ನು ಬಚ್ಚಿಟ್ಟಿದ್ದಾಳೆ ಅಂತಲೂ ಆತ್ಮ ತಿಳಿಸಿತು. ಎಲ್ಲ ಮಾಹಿತಿಯನ್ನು ಪೊಲೀಸರಿಗೆ ಆದಷ್ಟು ಬೇಗ ತಿಳಿಸುವಂತೆ ಚುವಾಳ ಗಂಡ ಹೇಳಿದ.

ಪೊಲೀಸರು ಚುವಾ ಹೇಳಿದ್ದನ್ನು ಮೊದಲಿಗೆ ನಂಬಲಿಲ್ಲ. ಬಾಸಾಳ ಕಸಿನ್ ಒಬ್ಬಳು ಶೋರಿಯ ಪ್ರೇಯಸಿ ಧರಿಸಿದ್ದ ಆಭರಣ ಬಾಸಾಳವೇ ಅನ್ನೋದನ್ನು ಖಚಿತಪಡಿಸಿದಳು. ಪೋಲಿಸರು ವಿಚಾರಣೆ ನಡೆಸಿ ಶೋವರಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿತು. ಸಾಕ್ಷ್ಯಾಧಾರಗಳು ಬಲವಾಗಿಲ್ಲ ಎನ್ನುವ ಕಾರಣಕ್ಕೆ ಶೋರಿಗೆ ಕೇವಲ 14- ವರ್ಷ ಸೆರೆವಾಸದ ಶಿಕ್ಷೆ ಆಯಿತು.

ಅಂದಹಾಗೆ, ಬಾಸಾಳ ಪ್ರೇತಾತ್ಮವೇ ಅತ್ಯಾಚಾರಿ ಹಂತಕನನ್ನು ಹಿಡಿದುಕೊಟ್ಟಿತೇ? ಪ್ರಾಯಶಃ ಚುವಾಗೆ ಬಾಸಾಳ ಕೊಲೆಯ ಬಗ್ಗೆ ಒಂದಷ್ಟು ಸುಳಿವಿತ್ತು. ಅದನ್ನೇ ಅವಳು ಪ್ರೇತಾತ್ಮದ ಕತೆ ಕಟ್ಟಿರಬಹುದು. ಆದರೆ ಅ ಪ್ರಕರಣವನ್ನು ಬಗೆಹರಿಸುವುದು ಹೇಗೆ ಸಾಧ್ಯವಾಯಿತು ಅನ್ನೋದು ಮಾತ್ರ ಪೊಲೀಸರಿಗೆ ಗೊತ್ತಾಗಲೇ ಇಲ್ಲ.

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ