Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್ ಕಸಿದು ಪರಾರಿಯಾದ ಕಳ್ಳನೊಂದಿಗೆ ಸಿನಿಮೀಯ ರೀತಿಯಲ್ಲಿ ಸಂಘರ್ಷಕ್ಕೆ ಇಳಿದ ಡೆಲಿವರಿ ಬಾಯ್: ಚಾಕು ಇರಿತ, ಆರೋಪಿ ಅರೆಸ್ಟ್

ಯುವತಿಯ ಮೊಬೈಲ್ ಕಳ್ಳತನವಾಗುತ್ತಿದ್ದಂತೆ ಯುವತಿಯ ಸಹಾಯಕ್ಕೆ ಬಂದ ಡೆಲಿವರಿ ಬಾಯ್ ಸೂರ್ಯ ಆಕೆಯ ಬಳಿ ಹೋಗಿ ಎಸ್ಕೇಪ್ ಆಕ್ತಿದ್ದ ರಾಬರ್ಸ್ ಪತ್ತೆಗಾಗಿ ಆಕೆಯ ಮೊಬೈಲ್ ನಂಬರನ್ನು ತನ್ನ ಸ್ನೇಹಿತ ಮೊಬೈಲ್ ಮೂಲಕ Find my device ಆ್ಯಪ್ ಬಳಸಿ ಲೊಕೇಷನ್ ಪತ್ತೆ ಹಚ್ಚಿ ಚೇಸ್ ಮಾಡಿದ್ದಾನೆ.

ಮೊಬೈಲ್ ಕಸಿದು ಪರಾರಿಯಾದ ಕಳ್ಳನೊಂದಿಗೆ ಸಿನಿಮೀಯ ರೀತಿಯಲ್ಲಿ ಸಂಘರ್ಷಕ್ಕೆ ಇಳಿದ ಡೆಲಿವರಿ ಬಾಯ್: ಚಾಕು ಇರಿತ, ಆರೋಪಿ ಅರೆಸ್ಟ್
ಮೊಬೈಲ್ ಕಸಿದು ಪರಾರಿಯಾದ ಕಳ್ಳನೊಂದಿಗೆ ಸಿನಿಮೀಯ ರೀತಿಯಲ್ಲಿ ಸಂಘರ್ಷಕ್ಕೆ ಇಳಿದ ಡೆಲಿವರಿ ಬಾಯ್
Follow us
TV9 Web
| Updated By: ಆಯೇಷಾ ಬಾನು

Updated on:Nov 13, 2022 | 8:52 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ರಾಬರ್ಸ್ ಅಟ್ಟಹಾಸ ಮಿತಿ ಮೀರಿದೆ. ಜಯನಗರದಲ್ಲಿ ಯುವತಿ ಮೊಬೈಲ್ ಕಸಿದು, ಡೆಲಿವರಿ ಬಾಯ್​ಗೆ ಇರಿದು ಎಸ್ಕೇಪ್ ಆಗಿದ್ದವನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಅಂಥೋಣಿ ಡಿಸಿಲ್ವಾ ಅಲಿಯಾಸ್ ಟೋನಿ ಬಂಧಿತ ಆರೋಪಿ. ಮೊಬೈಲ್ ಪತ್ತೆಗಾಗಿ ಡೆಲಿವರಿ ಬಾಯ್ ಹರಸಾಹಸಪಟ್ಟಿದ್ದು ಈ ಮೊಬೈಲ್ ಕಳ್ಳತನ ಪ್ರಕರಣ ಸಿನಿಮೀಯ ರೀತಿಯಲ್ಲಿ ರೋಚಕವಾಗಿದೆ.

ಯುವತಿ ಸಹಾಯಕ್ಕೆ ಧಾವಿಸಿ ಬೆನ್ನಟ್ಟಿದ್ದ ಡೆಲಿವರಿ ಬಾಯ್ ಮೇಲೆ ಅಟ್ಯಾಕ್

ಆರೋಪಿ ಟೋನಿ ಜಯನಗರದ 2 ಬ್ಲಾಕ್ ಮುಖ್ಯ ರಸ್ತೆಯಲ್ಲಿ ಯುವತಿಯಿಂದ ಮೊಬೈಲ್ ಕಸಿದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಡೆಲಿವರಿ ಬಾಯ್ ಸೂರ್ಯ, ಯುವತಿಯ ಸಹಾಯಕ್ಕೆ ಮುಂದಾಗಿದ್ದು ಟೋನಿಯನ್ನು ಬೆನ್ನಟ್ಟಿದ್ದಾನೆ. ಆಗ ಆರೋಪಿ ಟೋನಿ ನಡು ರಸ್ತೆಯಲ್ಲೇ ಚಾಕುವಿನಿಂದ ಅಟ್ಟಾಡಿಸಿ ಡೆಲಿವರಿ ಬಾಯ್ ಮುಖಕ್ಕೆ ಸ್ಕ್ರಾಚ್ ಮಾಡಿ ಕೊಲೆ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾನೆ. ಟೋನಿ ಹಾಗೂ ಸೂರ್ಯನ ನಡುವೆ ನಡೆದ ಕಾಳಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಷ್ಟೆಲ್ಲ ಆದ ಬಳಿಕ ಘಟನೆ ಸಂಬಂಧ ಸಿದ್ದಾಪುರ ಮತ್ತು ಕಲಾಸಿಪಾಳ್ಯ ಠಾಣೆಗಳಲ್ಲಿ‌ ಕೇಸ್ ದಾಖಲಾಗಿದೆ. ದೂರು ಆಧರಿಸಿ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೊಬೈಲ್ ಎಲ್ಲಿದೆ ಎಂದು ಆ್ಯಪ್ ಮೂಲಕ ಲೋಕೇಷನ್ ಪತ್ತೆ

ಇನ್ನು ಡೆಲಿವರಿ ಬಾಯ್ ಸೂರ್ಯ ಯುವತಿಗೆ ಸಹಾಯ ಮಾಡಲು ತೆಗೆದುಕೊಂಡ ರಿಸ್ಕ್ ರೋಚಕ. ಮೊದಲಿಗೆ ಯುವತಿಯ ಮೊಬೈಲ್ ಕಳ್ಳತನವಾಗುತ್ತಿದ್ದಂತೆ ಯುವತಿಯ ಸಹಾಯಕ್ಕೆ ಬಂದ ಡೆಲಿವರಿ ಬಾಯ್ ಸೂರ್ಯ ಆಕೆಯ ಬಳಿ ಹೋಗಿ ಎಸ್ಕೇಪ್ ಆಕ್ತಿದ್ದ ರಾಬರ್ಸ್ ಪತ್ತೆಗಾಗಿ ಆಕೆಯ ಮೊಬೈಲ್ ನಂಬರನ್ನು ತನ್ನ ಸ್ನೇಹಿತ ಮೊಬೈಲ್ ಮೂಲಕ Find my device ಆ್ಯಪ್ ಬಳಸಿ ಲೊಕೇಷನ್ ಪತ್ತೆ ಹಚ್ಚಿ ಚೇಸ್ ಮಾಡಿದ್ದಾನೆ. ಕಲಾಸಿಪಾಳ್ಯ ಮಾರ್ಗವಾಗಿ ಬೈಕ್ ಮೂಲಕ ಸುಧಾಮನಗರ ಸಮೀಪಕ್ಕೆ ಆರೋಪಿ ಟೋನಿ ಎಂಟ್ರಿಕೊಟ್ಟಿರುವುದು ಪತ್ತೆಯಾಗಿದೆ. ಮೊಬೈಲ್ ಎಲ್ಲಿದೆ ಎಂದು ಆ್ಯಪ್ ಮೂಲಕ ಲೊಕೇಷನ್ ಹುಡುಕಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ತೆರಳಿ ಮೊಬೈಲ್ ಲೊಕೇಷನ್ ಇರುವ ಸ್ಥಳಕ್ಕೆ ಎಂಟ್ರಿಕೊಟ್ಟು ರಾಬರ್ಸ್ ಬಳಿ ಕಸಿದ ಮೊಬೈಲ್ ವಾಪಸ್ಸು ನೀಡುವಂತೆ ಕೇಳಿದ್ದಾನೆ.

ಈ ವೇಳೆ ಡನ್ಜೋ ಡೆಲಿವರಿ ಬಾಯ್ ಗೆ ಜೀವ ಬೆದರಿಕೆವೊಡ್ಡಿ ವಾಪಾಸ್ ಹೋಗುವಂತೆ ಅವಾಜ್ ಹಾಕಲಾಗಿದೆ. ಈ ವೇಳೆ ತನ್ನ ಪ್ರಾಣ ಲೆಕ್ಕಿಸದೆ ಮೊಬೈಲ್ ರಾಬರ್ಸ್ ನಿಂದ ಮೊಬೈಲ್ ಕಸಿಯಲು ಡೆಲಿವರಿ ಬಾಯ್ ಸೂರ್ಯ ಯತ್ನಿಸಿದ್ದಾನೆ. ಆಗ ಸೂರ್ಯಗೆ ಹಲ್ಲೆ ಮಾಡಿ ಮುಖಕ್ಕೆ ಚಾಕು ಹಾಕಿ ಮೊಬೈಲ್ ಕಳ್ಳ ಎಸ್ಕೇಪ್ ಆಗಿದ್ದಾನೆ. ಹಲ್ಲೆ ಬಳಿಕ ಡೆಲಿವರಿ ಬಾಯ್ ಸೂರ್ಯನಿಗೆ ಯುವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಸೂರ್ಯ ಕಲಾಸಿಪಾಳ್ಯ ಠಾಣೆಗೆ ಹೋಗಿ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಿದ್ದಾನೆ. ಮೊಬೈಲ್ ಕಳ್ಳತನ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಇದೀಗ ಆರೋಪಿ ಅಂಥೋಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆಯೇ ಆರೋಪಿ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 2 ಕೊಲೆ ಯತ್ನ, 4 ಮೊಬೈಲ್ ‌ಕಳವು, ಹಲ್ಲೆ ಪ್ರಕರಣಗಳು ದಾಖಲಾಗಿವೆ.

ಮೋಜಿನ ಜೀವನಕ್ಕೆ ಕಳ್ಳತನ

ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲೇ ಹೊಟ್ಟೆ ಪಾಡಿಗಾಗಿ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತ ತನ್ನ ಮೋಜಿನ ಜೀವನಕ್ಕಾಗಿ ಸರ ಕಳ್ಳತನಕ್ಕೆ ಇಳಿದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಗಿರಿನಗರ ಸೇರಿದಂತೆ ಮೂರು ಕಡೆ ಸರಗಳ್ಳತನ ಕೃತ್ಯ ಎಸಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಮೂಲತಃ ಕೊಪ್ಪಳದವನಾದ ಸುರೇಶ್, ಫುಡ್ ಡೆಲವರಿ ಭಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಆದ್ರೆ ಮೋಜಿನ ಜೀವನಕ್ಕೆ ಆ ಸಂಬಳ ಸರಿ ಹೋಗದ ಕಾರಣ ಸರಗಳ್ಳತನಕ್ಕೆ ಇಳಿದಿದ್ದಾನೆ. ಕಳ್ಳತನ ಬಳಿಕ ಕೊಪ್ಪಳಕ್ಕೆ ಹೋಗಿ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಸಿಸಿಟಿವಿ ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಕಳ್ಳನ ಅಸಲಿ ಕಹಾನಿ ಗೊತ್ತಾಗಿದೆ. ಇನ್ನು ಆರೋಪಿ ಸುರೇಶ್ ಇದೇ ಮಾದರಿ ಹಲವು ಕೃತ್ಯ ಎಸಗಿರೊದು ಬಯಲಿಗೆ ಬಂದಿದೆ. ಅಲ್ಲದೆ ಬಂಧಿತನೊಂದಿಗೆ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಕೂಡ ಸಾಥ್ ನೀಡುತ್ತಿದ್ದದ್ದು ಪತ್ತೆಯಾಗಿದೆ.

Published On - 8:52 am, Sun, 13 November 22