Chikkaballapur: ನೀಲಗಿರಿ ಮರದಲ್ಲಿ ಅನುಮಾನಸ್ಪದವಾಗಿ ಶವ ಪತ್ತೆ -ಕೊಲೆಯೊ, ಆತ್ಮಹತ್ಯೆಯೊ ಅನ್ನೊ ಅನುಮಾನ

ಮೃತ ವ್ಯಕ್ತಿ ಬಸವರಾಜ್ ಮೃದು ಸ್ವಾಭಾವದವನಾಗಿದ್ದು, ಯಾರೊಂದಿಗೂ ಜಗಳ ದ್ವೇಷ ಅಸೂಯೆ ಹೊಂದಿಲ್ಲವಂತೆ. ಆದ್ರೂ... ಏಕೆ ತಿರ್ನಹಳ್ಳಿ ಗ್ರಾಮದ ಬಳಿ ನೀಲಗಿರಿ ಮರದ ಬಳಿ ಹೋದ? ತಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೊ... ಅಥವಾ ಯಾರಾದರೂ ಕೊಲೆ ಮಾಡಿ ಶವಕ್ಕೆ ನೇಣು ಬಿಗಿದಿದ್ದಾರೊ...

Chikkaballapur: ನೀಲಗಿರಿ ಮರದಲ್ಲಿ ಅನುಮಾನಸ್ಪದವಾಗಿ ಶವ ಪತ್ತೆ -ಕೊಲೆಯೊ, ಆತ್ಮಹತ್ಯೆಯೊ ಅನ್ನೊ ಅನುಮಾನ
ನೀಲಗಿರಿ ಮರದಲ್ಲಿ ಅನುಮಾನಸ್ಪದವಾಗಿ ಶವ ಪತ್ತೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 16, 2022 | 11:04 AM

ಮದುವೆಯಾಗಿ, ಹೆಂಡತಿ ಹಾಗೂ ಇಬ್ಬರು ಮುದ್ದಾದ ಮಕ್ಕಳು ಇದ್ರೂ… ವ್ಯಕ್ತಿಯೊರ್ವ ಶವವಾಗಿ ಪತ್ತೆಯಾಗಿದ್ದಾನೆ. ನೀಲಗಿರಿ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು (death), ಹಲವು ಮಾನುಮಾನಗಳಿಗೆ ಕಾರಣವಾಗಿದೆ. ವ್ಯಕ್ತಿಯ ಸಾವು ಕೊಲೆಯೊ… ಇಲ್ಲ ಆತ್ಮಹತ್ಯೆಯೊ… ಅನ್ನೊ ಅನುಮಾನ ಮೂಡಿದೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ ಈ ವರದಿ ನೋಡಿ! ನೀಲಗಿರಿ ಮರವೊಂದರಲ್ಲಿ ಹತ್ತಿ ನೇಣಿಗೆ ಶರಣಾದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ (man) ಶವ ಪತ್ತೆಯಾಗಿರುವುದು ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ತಿರ್ನಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ. ನಿನ್ನೆ ಗುರುವಾರ ಬೆಳಗ್ಗೆ ಗ್ರಾಮದ ಜನ ಬಹಿರ್ದೆಸೆಗೆ ಹೋಗಿದ್ದಾಗ ನೀಲಗಿರಿ ಮರದಲ್ಲಿ ಶವ (hanging) ಜೋತಾಡುತ್ತಿರುವುದುನ್ನು ಗಮನಿಸಿ ನಂದಿಗಿರಧಾಮ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ರು. ಮೃತ ವ್ಯಕ್ತಿಯ (dead body) ಮೈಮೇಲೆ ಶರ್ಟ್ ಇರಲಿಲ್ಲ, ಪ್ಯಾಂಟ್ ಇದ್ದು, ಅದು ಹರಿದ ಸ್ಥಿತಿಯಲ್ಲಿ ಇತ್ತು.

ಸ್ಥಳಕ್ಕೆ ಬಂದ ನಂದಿಗಿರಿಧಾಮ ಠಾಣೆ ಪೊಲೀಸರು ಸ್ಥಳಕ್ಕೆ ಪರಿಶೀಲನೆ ನಡೆಸಿದ್ರೆ… ಮೃತನ ಗುರುತು ಪತ್ತೆಯಾಗಿರಲಿಲ್ಲ. ಆದ್ರೆ ಮೃತನ ಪ್ಯಾಂಟ್ ಶರ್ಟನಲ್ಲಿ ಎ.ಟಿ.ಎಂ ಕಾರ್ಡ ಇದ್ದು ಅದನ್ನು ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲು ನಿವಾಸಿ 42 ವರ್ಷದ ಕೆ.ಬಸವರಾಜ್ ಎಂದು ಗುರುತು ಪತ್ತೆಯಾಗಿದೆ.

Also Read: ಪ್ರೀತಿಸಿದ ಹುಡುಗಿಯ ಬೈಕ್ ಸುಟ್ಟು ಹಾಕಿದ ಪಾಗಲ್ ಪ್ರೇಮಿ

ಮೃತ ಬಸವರಾಜ್, ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ, ಮೃತನಿಗೆ ಮದುವೆಯಾಗಿದ್ದು ಪತ್ನಿ ಮೀನಾ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನಿನ್ನೆ ಬೆಳಿಗ್ಗೆ ಶರ್ಟ ಧರಿಸದೆ ಪತ್ನಿಯ ದುಪ್ಪಟ್ಟನ್ನು ಕತ್ತಲ್ಲಿ ಹಾಕಿಕೊಂಡು, ಮನೆಯಿಂದ ಹೊರ ಹೋದವನು ವಾಪಸ್ ಮನೆಗೆ ಬಂದಿಲ್ಲ. ಪತ್ನಿ ಹಾಗೂ ಸಂಬಂಧಿಗಳು ಬಸವರಾಜ್ ನನ್ನು ಹುಡುಕುತ್ತಿರುವಾಗಲೇ… ಸಾಯಂಕಾಲ ಪೊಲೀಸರು ಹೇಳಿದ ಸುದ್ದಿ ಕೇಳಿ ಮೃತನ ಪತ್ನಿ ಮೀನಾ ದುಃಖತಪ್ತಳಾಗಿದ್ದಾರೆ.

ಮತ್ತೊಂದೆಡೆ ಮೃತ ವ್ಯಕ್ತಿ ಬಸವರಾಜ್ ತುಂಬಾ ಮೃದು ಸ್ವಾಭಾವದವನಾಗಿದ್ದು, ಯಾರೊಂದಿಗೂ ಜಗಳ ದ್ವೇಷ ಅಸೂಯೆ ಹೊಂದಿಲ್ಲವಂತೆ. ಆದ್ರೂ… ಏಕೆ ತಿರ್ನಹಳ್ಳಿ ಗ್ರಾಮದ ಬಳಿ ನೀಲಗಿರಿ ಮರದ ಬಳಿ ಹೋದ? ತಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೊ… ಅಥವಾ ಯಾರಾದರೂ ಕೊಲೆ ಮಾಡಿ ಶವಕ್ಕೆ ನೇಣು ಬಿಗಿದಿದ್ದಾರೊ… ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.

ವರದಿ: ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:03 am, Fri, 16 December 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ