Sign In

By signing in or creating an account, you agree with Associated Broadcasting Company's Terms & Conditions and Privacy Policy.

New Year 2023: ಹೊಸ ವರ್ಷದ ಆರೋಗ್ಯಕರ ಆರಂಭಕ್ಕಾಗಿ ರಾಗಿ ಅಂಬಲಿ ಸವಿಯಿರಿ

ರಾಗಿ ಅಂಬಲಿಯು ಗಂಜಿ ತರಹದ ಆರೋಗ್ಯಕರ ಭಕ್ಷ್ಯವಾಗಿದೆ. ಇದನ್ನು ರಾಗಿ ಧಾನ್ಯದಿಂದ ತಯಾರಿಸಲಾಗುತ್ತದೆ. ಇದು ಕರ್ನಾಟಕದ ಅಡುಗೆ ಮನೆಗಳಲ್ಲಿ ಯಾವಾಗಲೂ ಇರುವಂತಹ ಭಕ್ಷ್ಯವಾಗಿದೆ.

New Year 2023: ಹೊಸ ವರ್ಷದ ಆರೋಗ್ಯಕರ ಆರಂಭಕ್ಕಾಗಿ ರಾಗಿ ಅಂಬಲಿ ಸವಿಯಿರಿ
ರಾಗಿ ಅಂಬಲಿ Image Credit source: Karnataka Tourism
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 04, 2023 | 3:58 PM

2023 ರ ಹೊಸ ವರ್ಷ(New Year 2023) ದ ಪ್ರಾರಂಭದಲ್ಲಿ ನೀವು ಆರೋಗ್ಯ(Health)ದ ದೃಷ್ಟಿಯಿಂದ ಪರಿಪೂರ್ಣವಾಗಿರಬೇಕೆಂದು ಬಯಸುತ್ತೀರಿ. ಇಲ್ಲಿ ನೀವು ಆರೋಗ್ಯಕರ ಉಪಹಾರದ ಪಾಕ ವಿಧಾನವನ್ನು ತಿಳಿಸಲಾಗಿದೆ. ಇದು ನಿಮಗೆ ಆರೋಗ್ಯಕರ ದಿನವನ್ನು ಪ್ರಾರಂಭ ಮಾಡಲು ಸಹಾಯ ಮಾಡುತ್ತದೆ. ಈ ಆಹಾರವನ್ನು ರಾಗಿ ಅಂಬಲಿ ಎಂದು ಕರೆಯಲಾಗುತ್ತದೆ. ಇದು ಗಂಜಿ ತರಹದ ಒಂದು ಭಕ್ಷ್ಯವಾಗಿದೆ. ಇದನ್ನು ರಾಗಿ ಕಾಳಿನಿಂದ ತಯಾರಿಸಲಾಗುತ್ತದೆ. ಇದನ್ನು ಕರ್ನಾಟಕದ ಪಾಕ ವಿಧಾನ ಅಂತಾನೇ ಹೇಳಬಹುದು. ಇದನ್ನು ತಯಾರಿಸುವುದು ಸುಲಭವಾಗಿದೆ ಮತ್ತು ಅಷ್ಟೇ ಆರೋಗ್ಯಕರವಾಗಿದೆ.

ರಾಗಿ ಮಾಲ್ಟ್ ಆರೋಗ್ಯಕರ ಪಾಕ ವಿಧಾನ:

ಮೊದಲೇ ಹೇಳಿದಂತೆ ಇದನ್ನು ರಾಗಿಯಿಂದ ಮಾಡಲಾಗುತ್ತದೆ. ರಾಗಿಯು ಅತ್ಯಧಿಕ ಪೋಷಕಾಂಶಗಳಿಂದ ತುಂಬಿದ ಸ್ಥಳೀಯ ಧಾನ್ಯವಾಗಿದೆ. ಆರೋಗ್ಯ ತಜ್ಞರು ಹೇಳುವಂತೆ ರಾಗಿಯು ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿದೆ.

ರಾಗಿ ಮಾಲ್ಟ್ ತೂಕ ನಷ್ಟಕ್ಕೆ ಉತ್ತಮವೇ?

ರಾಗಿಯಲ್ಲಿರುವ ಹೆಚ್ಚಿನ ಪ್ರಮಾಣದ ಆಹಾರದ ನಾರಿನಾಂಶವು ಹೊಟ್ಟೆಯನ್ನು ಧೀರ್ಘಕಾಲದವರೆಗೆ ತುಂಬಿರುವಂತೆ ಸಹಾಯ ಮಾಡುತ್ತದೆ.ಜೊತೆಗೆ ಅನಗತ್ಯ ಕಡುಬಯಕೆಗಳನ್ನು ತಡೆಯುತ್ತದೆ. ಇದು ಕಡಿಮೆ ಹಸಿವು ಮತ್ತು ತೂಕ ನಷ್ಟಕ್ಕೂ ಕಾರಣವಾಗುತ್ತದೆ ಎಂದು ಬೆಂಗಳೂರಿನ ಆಹಾರ ತಜ್ಞ ಅಂಜೂ ಸೂದ್ ಹೇಳಿದ್ದಾರೆ. ಇದಲ್ಲದೆ ರಾಗಿಯು ಇನ್ಸುಲಿನ್‌ನ್ನು ಸಕ್ರಿಯಾಗೊಳಿಸುವ ಮೂಲಕ ದೇಹದಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದಿನವಿಡೀ ಹೊಟ್ಟೆ ತುಂಬಿರುವಂತೆ ಮಾಡಲು ಇದನ್ನು ಬೆಳಗ್ಗೆ ಸೇವಿಸುವುದು ಉತ್ತಮ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಮೃದುವಾದ ಪುಟ್ಟು

ರಾಗಿ ಅಂಬಲಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಈ ಖಾದ್ಯವನ್ನು ತಯಾರಿಸಲು ರಾಗಿ ಹಿಟ್ಟು, ಈರುಳ್ಳಿ, ಉಪ್ಪು, ಮೊಸರು, ನೀರು ಮತ್ತು ಕೊತ್ತಂಬರಿ ಸೊಪ್ಪು ಬೇಕಾಗುತ್ತದೆ. ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿಯನ್ನು ಸೇರಿಸದಿದ್ದರೂ ನಡೆಯುತ್ತದೆ.

ರಾಗಿ ಅಂಬಲಿ ಮಾಡುವ ವಿಧಾನ:

ಮೊದಲಿಗೆ ಒಣ ರಾಗಿ ಹಿಟ್ಟನ್ನು ಹುರಿದು ನಂತರ ಸ್ವಲ್ಪ ನೀರು ಹಾಗೂ ಉಪ್ಪು ಸೇರಿಸಿ ಕುದಿಸಿ. ಹಿಟ್ಟು ಉಂಡೆಗಟ್ಟದಂತೆ ಚೆನ್ನಾಗಿ ಮಿಶ್ರಣ ಮಾಡುತ್ತಾ ಇರಿ. ನಂತರ ನಯವಾದ ಪೇಸ್ಟ್ ರೂಪಕ್ಕೆ ಹಿಟ್ಟು ತಿರುಗಿದ ಮೇಲೆ ಗ್ಯಾಸ್ ಆಫ್ ಮಾಡಿ ನಂತರ ಲೋಟದಲ್ಲಿ ರಾಗಿ ಅಂಬಲಿ ಹಾಕಿ ಅದಕ್ಕೆ ಈರುಳ್ಳಿ ಮತ್ತು ಮೊಸರು ಹಾಕಿ ಮಿಶ್ರಣ ಮಾಡಿ. ಕೊನೆಗೆ ಹೊತ್ತಂಬರಿ ಸೊಪ್ಪು ಅಲಂಕರಿಸಿ ಸರ್ವ್ ಮಾಡಿ.ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕದಿದ್ದರೂ ಪರವಾಗಿಲ್ಲ. ಸಕ್ಕರೆ ಹಾಕಿ ಸಿಹಿ ಅಂಬಲಿ ಕೂಡಾ ಮಾಡಿ ಕುಡಿಯಬಹುದು. ಈ ಖಾದ್ಯವನ್ನು ಮನೆಯಲ್ಲಿಯೇ ತಯಾರಿಸಿ ಮತ್ತು ಆರೋಗ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 3:58 pm, Wed, 4 January 23