National Bird Day 2023: ಅಳಿವಿನಂಚಿರುವ ಪಕ್ಷಿಗಳ ಬಗ್ಗೆ ಜಾಗೃತಿ ವಹಿಸುವುದು ಅಗತ್ಯ

ಅಳಿವಿನಂಚಿರುವ ಪಕ್ಷಿಗಳನ್ನು ಉಳಿಸುವ ನಿಟ್ಟಿನಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರಣದಿಂದ ರಾಷ್ಟ್ರೀಯ ಪಕ್ಷಿ ದಿನವನ್ನು ಪ್ರತಿ ವರ್ಷ ಜನವರಿ 5 ರಂದು ಆಚರಿಸಲಾಗುತ್ತದೆ.

National Bird Day 2023: ಅಳಿವಿನಂಚಿರುವ ಪಕ್ಷಿಗಳ ಬಗ್ಗೆ ಜಾಗೃತಿ ವಹಿಸುವುದು ಅಗತ್ಯ
ರಾಷ್ಟ್ರೀಯ ಪಕ್ಷಿ ದಿನImage Credit source: Pinterest
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Jan 05, 2023 | 11:33 AM

ದೇವರು ರುಜು ಮಾಡಿದನು ರಸವಶನಾಗುತ ಕವಿ ಅದ ನೋಡಿದನು ಎಂಬ ಸಾಲುಗಳು ಅದೆಷ್ಟೋ ಸಲ ನಿಜವೆನಿಸುತ್ತದೆ. ಹಸಿರನ್ನು ಹೊತ್ತ ಪರಿಸರ ಹಕ್ಕಿಗಳ ಚಿಲಿಪಿಲಿ ಕಲರವ, ಜುಳು ಜುಳು ಹರಿಯುವ ನದಿಗಳು ಇವೆಲ್ಲವ ನೋಡಿದಾಗ ದೇವರು ಸೃಷ್ಟಿ ಎಷ್ಟೊಂದು ಅದ್ಭುತ ಎಂದೆನಿಸುತ್ತದೆ. ಆದರೆ ಇಂದು ನಗರಗಳನ್ನು ಕೇಂದ್ರೀಕರಿಸಿದ ಅಭಿವೃದ್ಧಿಯಿಂದಾಗಿ ಈ ಸುಂದರ ಸೃಷ್ಟಿ ನಶಿಸಿಹೋಗುತ್ತಿದೆ. ಸಾಕಷ್ಟು ವಿಭಿನ್ನ ಪ್ರಭೇದಗಳ ಪ್ರಾಣಿ ಪಕ್ಷಿಗಳು ಅಳಿವಿನಂಚಿರುವುದನ್ನು ಕಾಣಬಹುದು. ಆದ್ದರಿಂದ ಅಳಿವಿನಂಚಿರುವ ಪಕ್ಷಿಗಳನ್ನು ಉಳಿಸುವ ನಿಟ್ಟಿನಿಂದ ಜನರಲ್ಲಿ ಜಾಗೃತಿ ಮೂಡಿಸುವ ಕಾರಣದಿಂದ ರಾಷ್ಟ್ರೀಯ ಪಕ್ಷಿ ದಿನ(National Bird Day 2023) ವನ್ನು ಪ್ರತಿ ವರ್ಷ ಜನವರಿ 5 ರಂದು ಆಚರಿಸಲಾಗುತ್ತದೆ.

ಅದರ ಜೊತೆಗೆ ಪಕ್ಷಿಗಳ ಸೌಂದರ್ಯ ಮತ್ತು ಅವುಗಳ ಪಕ್ಷಿಗಳ ಕಲರವವನ್ನು ಪ್ರಶಂಸಿಸಲು ಜನರು ತಮ್ಮ ದಿನದಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ರಾಷ್ಟ್ರೀಯ ಪಕ್ಷಿ ದಿನವು ಪಕ್ಷಿ ದಿನಾಚರಣೆಯಂತೆಯೇ ಅಲ್ಲ. ಪಕ್ಷಿ ದಿನವನ್ನು ಮೇ 4 ರಂದು ಆಚರಿಸಲಾಗುತ್ತದೆ, ಇದನ್ನು 19 ನೇ ಶತಮಾನದಿಂದ ಆಚರಿಸಲಾಗುತ್ತದೆ ಮತ್ತು ಪರಿಸರಕ್ಕೆ ಪಕ್ಷಿಗಳು ಎಷ್ಟು ಮುಖ್ಯ ಎಂದು ಅರಿವು ಮೂಡಿಸುವ ದಿನವಾಗಿದೆ.

ಇದನ್ನೂ ಓದಿ: ನೀವೂ ಬಳಸಿದ ಪ್ಲಾಸ್ಟಿಕ್ ಬಾಟಲ್​​ಗಳನ್ನು ಬಿಸಾಡದಿರಿ ಮರು ಬಳಕೆ ಮಾಡಿ

ರಾಷ್ಟ್ರೀಯ ಪಕ್ಷಿ ದಿನದ ಇತಿಹಾಸ:

ಈ ದಿನವನ್ನು 2002 ರಲ್ಲಿ ಬಾರ್ನ್ ಫ್ರೀ ಯು ಎಸ್ ಎ ಮತ್ತು ಏವಿಯನ್ ವೆಲ್ಫೇರ್ ಒಕ್ಕೂಟದಿಂದ ಆಚರಿಸಲಾಯಿತು. ಇದು ಅಮೆರಿಕಾದಲ್ಲಿ ಪಕ್ಷಿಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಕಂಡು ಹಿಡಿದು ಸಮಸ್ಯೆಗೆ ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿತ್ತು. ಇಲ್ಲಿ ಪಕ್ಷಿಗಳನ್ನು ಎಣಿಕೆ ಮಾಡುವ ಒಂದು ರೀತಿಯ ಸಮೀಕ್ಷೆಯನ್ನು ನಡೆಸಲಾಗುತ್ತದೆ.

ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸುವುದು ಹೇಗೆ?

ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಿಸಲು ಹಲವು ಮಾರ್ಗಗಳಿವೆ. ಆದರೆ ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಿರಬಾರದು ಅಷ್ಟೇ. ನಿಮ್ಮ ಪರಿಸರದಲ್ಲಿ ಕಂಡು ಬರುವ ಪಕ್ಷಿಗಳಿಗೆ ಪ್ರತಿದಿನ ಒಂದಿಷ್ಟು ಧಾನ್ಯಗಳನ್ನು ಹಾಗೂ ನೀರನ್ನು ಒಂದು ಚಿಕ್ಕ ಪಾತ್ರೆಯಲ್ಲಿ ನೀಡಿ. ಪರಿಸರದಲ್ಲಿ ಸಾಕಷ್ಟು ವಿವಿಧ ಪ್ರಬೇಧಗಳ ಪಕ್ಷಿಗಳಿವೆ. ಅದರ ಬಗ್ಗೆ ಕೆಲವೊಂದಿಷ್ಟು ಸಂಶೋಧನೆ ಮಾಡಿ ತಿಳಿದುಕೊಳ್ಳಿ. ಇದರ ಜೊತೆಗೆ ಸ್ಥಳೀಯ ಉದ್ಯಾನವನ, ಪಕ್ಷಿಧಾಮಕ್ಕೆ ಭೇಟಿ ನೀಡಿ ಮತ್ತು ನಿಮ್ಮಿಂದ ಆಗುವಷ್ಟು ದೇಣಿಗೆಯನ್ನು ನೀಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ