Bangalore Rain: ಬೆಂಗಳೂರಿನ ಅಲ್ಲಲ್ಲಿ ಮಳೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಹಂಚಿಕೊಂಡ ನಗರವಾಸಿಗಳು

ಬೆಂಗಳೂರು ನಗರದಾದ್ಯಂತ ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಈ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಸ್ಥಿತಿ ಮರುಕಳಿಸುವ ಚಿಂತೆಯಲ್ಲಿ ನಗರವಾಸಿಗಳಿದ್ದಾರೆ.

Bangalore Rain: ಬೆಂಗಳೂರಿನ ಅಲ್ಲಲ್ಲಿ ಮಳೆ, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋ ಹಂಚಿಕೊಂಡ ನಗರವಾಸಿಗಳು
ಬೆಂಗಳೂರು ಮಳೆ
Updated By: Rakesh Nayak Manchi

Updated on: Oct 14, 2022 | 7:46 AM

ಬೆಂಗಳೂರು: ಕರ್ನಾಟಕದಲ್ಲಿ ಇನ್ನೆರಡು ದಿನ ಭಾರೀ ಮಳೆ (Karnataka Rain) ಮುಂದುವರೆಯುವ ನಿರೀಕ್ಷೆಯಿದ್ದು, ನಿನ್ನೆ ರಾತ್ರಿಯೂ ಬೆಂಗಳೂರು ಸೇರಿದಂತೆ ಅಲ್ಲಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಇಂದು ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿಗಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕೆಲವು ರಸ್ತೆಗಳಲ್ಲಿ ನೀರು ತುಂಬಿಕೊಂಡಿವೆ. ಕೆಲವೊಂದು ಕಡೆಗಳಲ್ಲಿ ಮಳೆ ಸುರಿಯುತ್ತಿರುವಾಗ ಫೋಟೋಗಳನ್ನು ತೆಗೆಯುವ ಮೂಲಕ ಕೆಲವೊಂದು ದೃಶ್ಯಾವಳಿಗಳನ್ನು ಸೆರೆ ಹಿಡಿದಿದ್ದಾರೆ.

ಬೆಂಗಳೂರು ಮಳೆಯ ಬಗ್ಗೆ ಟ್ವೀಟ್ ಮಾಡಿದ ನೆಟ್ಟಿಗರೊಬ್ಬರು “ನಾವು ಸೆಪ್ಟೆಂಬರ್ ನಲ್ಲಿ ಈ ಮಳೆಯನ್ನು ತಪ್ಪಿಸಿಕೊಂಡಿದ್ದೇವೆ, ಬೆಂಗಳೂರಿನಲ್ಲಿ ಇಂದು ರಾತ್ರಿ ಪ್ರತೀಕಾರದೊಂದಿಗೆ ಹಿಂತಿರುಗುತ್ತಿದೆ, ರಸ್ತೆಗಳಲ್ಲಿ ಜಾಗರೂಕರಾಗಿರಿ” ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ಟ್ವೀಟ್ ಮಾಡಿ “ದೇವರೇ ನಾನು ಈ ನಗರವನ್ನು ದ್ವೇಷಿಸುತ್ತೇನೆ. ಕಳೆದ 2 ಗಂಟೆಗಳಿಂದ ವಿದ್ಯುತ್ ಇಲ್ಲ” ಎಂದಿದ್ದಾರೆ. ಬೆಂಗಳೂರು ನಿವಾಸಿಗಳು ಮಳೆಯ ಸಂದರ್ಭದಲ್ಲಿ ಚಿತ್ರೀಕರಿಸಿದ ವಿಡಿಯೋ ಹಾಗೂ ತೆಗೆದುಕೊಂಡ ಕೆಲವೊಂದು ಫೋಟೋಗಳು ಹೀಗಿವೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 am, Fri, 14 October 22