ಹೆಸರು ಬದಲಾಯಿಸಿದ್ದು, ಹೊಸ ಹೆಸರಿಟ್ಟಿದ್ದಷ್ಟೇ ಮಾತ್ರವಲ್ಲ, ಹೊಸದಾಗಿ ಮೈಸೂರಿಗೆ ಬಂದ ಟ್ರೈನ್ಗಳೆಷ್ಟು ಗೊತ್ತೇ?
ಮೈಸೂರು ಹಾಗೂ ಬೆಂಗಳೂರು ನಡುವೆ ಹೊಸದಾಗಿ ಎಷ್ಟು ರೈಲುಗಳು ಸಂಚರಿಸುತ್ತವೆ ಎನ್ನುವ ಮಾಹಿತಿ ಇಲ್ಲಿದೆ.
ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ರಾಜಧಾನಿ ಮೈಸೂರು ನಡುವೆ ದಿನ ನಿತ್ಯ ಸಾಕಷ್ಟು ಜನರು ಪ್ರಯಾಣಿಸುತ್ತಾರೆ. ಕೆಲವರು ಬಸ್ ಮೂಲಕ ಪ್ರಯಾಣಿಸುತ್ತಿದ್ದರೆ, ಇನ್ನೂ ಕೆಲವರು ರೈಲ್ವೇಯನ್ನು ಅವಲಂಬಿಸಿದ್ದಾರೆ.
ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಎಕ್ಸ್‌ಪ್ರೆಸ್ ಎಂದು ನಾಮಕರಣ: ಶುಕ್ರವಾರದ ಶುಭ ಸುದ್ದಿ ಎಂದ ಪ್ರತಾಪ್ ಸಿಂಹ
ಬೆಂಗಳೂರು ಹಾಗೂ ಮೈಸೂರು ನಡುವಿನ ಎಕ್ಸ್‌ಪ್ರೆಸ್ ಹೈವೇ ಮಾಡುವುದಕ್ಕೆ ಸಂಸದ ಪ್ರತಾಪ್ ಸಿಂಹ ಸಾಕಷ್ಟು ಶ್ರಮಿಸಿದ್ದಾರೆ. ಹಾಗೇ ಮೈಸೂರಿಗೆ ಬಹಳಷ್ಟು ರೈಲುಗಳನ್ನು ಸಹ ತಂದಿದ್ದಾರೆ. ಹಾಗಾದ್ರೆ, ಮೈಸೂರು ಹಾಗೂ ಬೆಂಗಳೂರು ನಡುವೆ ಹೊಸದಾಗಿ ಎಷ್ಟು ರೈಲುಗಳು ಸಂಚರಿಸುತ್ತವೆ? ಎನ್ನುವ ಮಾಹಿತಿ ಇಲ್ಲಿದೆ.
ಹೆಸರು ಬದಲಾಯಿಸಿದ್ದು, ಹೊಸ ಹೆಸರಿಟ್ಟಿದ್ದಷ್ಟೇ ಅಲ್ಲ, ಹೊಸದಾಗಿ ತಂದ ಟ್ರೈನ್ ಗಳೆಷ್ಟು ಗೊತ್ತೇ?! pic.twitter.com/o9VC4GUcwO
— Pratap Simha (@mepratap) October 13, 2022
ಪ್ರತಾಪ್ ಸಿಂಹ ತಂದಿರುವ ರೈಲುಗಳು
1 ಮೈಸೂರು-ವಾರಾಣಸಿ ರೈಲನ್ನು ( ವಾರಕ್ಕೊಮ್ಮೆ) ದಿನಾಂಕ 25-12-2014ರಲ್ಲಿ ಚಾಲನೆ ನೀಡಲಾಗಿದೆ.
2.ಮೈಸೂರು-ಹುಬ್ಬಳ್ಳಿ-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್(ಪ್ರತಿ ದಿನ) ದಿನಾಂಕ 23-5-2017ರಲ್ಲಿ ತರಲಾಗಿದೆ.
3. ಮೈಸೂರು-ಉದಯ್ ಪುರ್( ಪ್ರೀಮಿಯರ್ ವೀಕ್ಲಿ ಎಕ್ಸ್‌ಪ್ರೆಸ್) 19-2-2018.
4.ಬೆಂಗಳೂರು-ಮೈಸೂರು ಮೆಮು ರೈಲು(ಪ್ರತಿನಿತ್ಯ) 19-2-2018
5.ರಾಮನಗರ-ಮೈಸೂರು ಮೆಮು ರೈಲು(ಪ್ರತಿ ನಿತ್ಯ) 23-12-2018)
6.ಚೆನ್ನೈ-ಬೆಂಗಳೂರು-ಮೈಸೂರು(ಡೈಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್) 15-1-2019)
7.ಕಾಚಿಗುಡ(ಹೈದರಾಬಾದ್)-ಬೆಂಗಳೂರು-ಮೈಸೂರು(ಡೈಲಿ ಎಕ್ಸ್‌ಪ್ರೆಸ್) 3-3-2019)
8. ಕೋಚುವೇಲಿ(ತಿರುವನಂತಪುರ)- ಬೆಂಗಳೂರು-ಮೈಸೂರು(ಡೈಲಿ ಎಕ್ಸ್‌ಪ್ರೆಸ್) 29-92-2019)
9. ಬೆಂಗಳೂರು-ಮೈಸೂರು- ಮಂಗಳೂರು(ವಾರದ 6 ದಿನಗಳು) (25-8-2022)
ಇನ್ನು ಮೈಸೂರಿನ ರೈಲಿಗೆ ಇಡಲಾಗಿದ್ದ ಟಿಪ್ಪುಸುಲ್ತಾನ್ ಹೆಸರನ್ನು ತೆಗೆದುಹಾಕಿ ರೈಲ್ವೇ ಇಲಾಖೆ ಅದಕ್ಕೆ ಒಡೆಯರ್ ಎಂದು ಹೊಸ ಹೆಸರು ನಾಮಕರಣ ಮಾಡಿದೆ. ಇದಕ್ಕೆ ಪ್ರಮುಖವಾಗಿ ಮೈಸೂರು ಸಂಸದ ಶ್ರಮವಿದೆ.
ಟಿಪ್ಪು ಎಕ್ಸ್‌ಪ್ರೆಸ್ (Tippu Express) ರೈಲಿನ ಹೆಸರು ಬದಲಾವಣೆ ಮಾಡಿಯೇ ತೀರುತ್ತೇನೆ ಎಂದು ಹೇಳಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾಡಿಯೇ ತೀರಿದ್ದಾರೆ.
ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಹೊಸ ಹೆಸರು ಮರುನಾಮಕರಣ ಮಾಡಿಸುವಲ್ಲ ಪ್ರತಾಪ್ ಸಿಂಹ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ವಿರೋಧ ಪಕ್ಷ ನಾಯಕರಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ನಾನು ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
Published On - 10:54 pm, Thu, 13 October 22