ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಉಗ್ರರು ಮಾಡಿದ ಖರ್ಚು 4,500 – 5 ಸಾವಿರ!

| Updated By: ವಿವೇಕ ಬಿರಾದಾರ

Updated on: Mar 30, 2024 | 10:08 AM

ಮಾರ್ಚ್​ 01 ರಂದು ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿತ್ತು. ಪ್ರಕರಣದ ತನಿಖೆಯನ್ನು ಎನ್​​ಐಎ ನಡೆಸುತ್ತಿದ್ದು, ಓರ್ವನನ್ನು ಬಂಧಿಸಿದೆ. ಕೆಫೆಯಲ್ಲಿ ಸ್ಫೋಟಿಸಲು ಬಳಸಲಾದ ಬಾಂಬ್​ ಅನ್ನು​ ತಯಾರಿಸಲು ಶಂಕಿತ ಉಗ್ರರು 4500 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ.

ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಉಗ್ರರು ಮಾಡಿದ ಖರ್ಚು 4,500 - 5 ಸಾವಿರ!
ರಾಮೇಶ್ವರಂ ಕೆಫೆ
Follow us on

ಬೆಂಗಳೂರು, ಮಾರ್ಚ್​ 30: ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಿಸಲು ಬಳಸಲಾದ (Rameshwaram Cafe Bomb Blast) ಬಾಂಬ್​ ಅನ್ನು​ ತಯಾರಿಸಲು ಶಂಕಿತ ಉಗ್ರರು 4500 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಪೋಲಿಸ್​ (Police) ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ. ಬಾಂಬ್ ತಯಾರಿಸಲು​ ಶಂಕಿತ ಉಗ್ರರು ಸುಮಾರು ಎರಡು ತಿಂಗಳು ಸಮಯ ತೆಗೆದುಕೊಂಡಿದ್ದರು. ಬಾಂಬ್​ ತಯಾರಿಸಲು ಬೇಕಾದ ಕಚ್ಚಾವಸ್ತುಗಳನ್ನು ಕೆಲವನ್ನು ಆನ್ ಲೈನ್‌ ಮೂಲಕ ಮತ್ತು ಇನ್ನು ಕೆಲವುಗಳನ್ನು ಅಂಗಡಿಯಲ್ಲಿ ಖರೀದಿಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಡೆಟೋನೇಟರ್, ಟೈಮರ್, ಬ್ಯಾಟರಿ ಹಾಗೂ ರಂಜಕವನ್ನು ಆನ್ ಲೈನ್ ಮೂಲಕ ಖರೀದಿ ಮಾಡಿದ್ದಾರೆ. ಉಳಿದಂತೆ ನಟ್, ಬೋಲ್ಟ್, ಕೆಲ ವೈಯರ್​ಗಳನ್ನು ಅಂಗಡಿಯಲ್ಲಿ ಖರೀದಿ ಮಾಡಿದ್ದಾರೆ. ಈ ಸಾಮಾಗ್ರಿಗಳನ್ನು ಬಂಧಿತ ಆರೋಪಿ ಮುಜಾಮಿಲ್ ಶರೀಫ್ ಖರೀದಿಸಿ, ಬಾಂಬ್​ ತಯಾರಿಸುತ್ತಿದ್ದ ಶಂಕಿತ ಅಬ್ದುಲ್​ ಮತೀನ್ ತಾಹ ಮತ್ತು ಮುಸಾವೀರ್ ನೀಡುತ್ತಿದ್ದನು ಎಂಬ ಶಂಕೆ ವ್ಯಕ್ತವಾಗಿದೆ.

ಯಾವ ಯಾವ ವಸ್ತುಗೆ ಎಷ್ಟು ರೂಪಾಯಿ…?

ಡೆಟೊರೇನಟರ್: 1300-1500

ಬ್ಯಾಟರಿ: 400-500

ಟೈಮರ್: 500-700

ರಂಜಕ: 200-300

ನಟ್, ಬೋಲ್ಟ್: 300-500

ವೈಯರ್​ಗಳು: 200-300

ಸ್ಪೋಟಕ್ಕೆ ಬಳಸಿದ್ದ ಬ್ಯಾಗ್: 400-500 ರೂಪಾಯಿಯನ್ನು ಶಂಕಿತ ಉಗ್ರ ನೀಡಿದ್ದಾನೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್: ಮತ್ತಿಬ್ಬರ ಫೋಟೋ ಬಿಡುಗಡೆ ಮಾಡಿದ NIA, ಸುಳಿವು ಕೊಟ್ಟವರಿಗೆ ಬಂಪರ್ ಬಹುಮಾನ

ಬೆಂಗಳೂರು ಸಮೀಪವೇ ಐಇಡಿ ಬಾಂಬ್ ತಯಾರಿ

ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬೆಂಗಳೂರು ಹೊರವಲಯದಲ್ಲಿ ಶಂಕಿತ ಉಗ್ರರು ಐಇಡಿಯನ್ನು ಸಿದ್ಧಪಡಿಸಿರುವ ಶಂಕೆ ವ್ಯಕ್ತವಾಗಿದೆ. ಮತೀನ್ ಹಾಗೂ ಮುಸಾವೀರ್ ಜೊತೆ ಮುಜಾಮಿಲ್ ಶರೀಫ್ ನಿರಂತರ ಸಂಪರ್ಕದಲ್ಲಿದ್ದನು. ಈತನ ಮೂಲಕವೇ ಅಗತ್ಯ ವಸ್ತುಗಳನ್ನು ತರಿಸಿಕೊಂಡಿದ್ದರು. ಸ್ಫೋಟದ ಸಂಚಿನ ಟಾರ್ಗೆಟ್ ಬಳಿಕ ಬೆಂಗಳೂರು ಸಮೀಪವೇ ಐಇಡಿ ಬಾಂಬ್ ತಯಾರಿ ಮಾಡಲಾಗಿದೆ ಎನ್ನುವ ವಿಚಾರ ಎನ್​ಐಎಗೆ ಮಾಹಿತಿ ತಿಳಿದುಬಂದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿತ್ತು. ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯನ್ನು ಮಾರ್ಚ್ 3 ರಂದು ಕೈಗೆತ್ತಿಕೊಂಡಿದ್ದ ಎನ್‌ಐಎ, ಸ್ಫೋಟವನ್ನು ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್‌ನನ್ನು ಮೊದಲು ಗುರುತಿಸಿತ್ತು. ಮತ್ತೊಬ್ಬ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಇಬ್ಬರೂ ಪರಾರಿಯಾಗಿದ್ದಾರೆ.

ಮೂವರು ಪ್ರಮುಖ ಆರೋಪಿಗಳ ಮನೆಗಳು ಹಾಗೂ ಇತರ ಶಂಕಿತರ ಮನೆಗಳು ಮತ್ತು ಅಂಗಡಿಗಳ ಮೇಲೆ ಎನ್​ಐಎ ದಾಳಿ ನಡೆಸಿತ್ತು. ದಾಳಿ ವೇಳೆ ನಗದು ಸಹಿತ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಶಂಕಿತರ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ.

ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್‌ಫೀಲ್ಡ್, ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟಗೊಂಡಿತ್ತು. ಸ್ಫೋಟದಲ್ಲಿ ಹಲವಾರು ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿ ಗಾಯಗೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:28 am, Sat, 30 March 24