ವೈಟ್​ ಬೋರ್ಡ್​​ ಟ್ರಾವೆಲ್ಸ್​​ ಮಾಲೀಕರಿಗೆ ಸಾರಿಗೆ ಇಲಾಖೆ ಶಾಕ್​: ಐಷಾರಾಮಿ 25 ಕಾರುಗಳು ಸೀಜ್​

| Updated By: ಗಂಗಾಧರ​ ಬ. ಸಾಬೋಜಿ

Updated on: Dec 18, 2024 | 3:09 PM

ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಕೈಗೊಂಡ ದಾಳಿಯಲ್ಲಿ 25 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ ಮೂಲಕ ಐಷಾರಾಮಿ ಕಾರುಗಳನ್ನು ಸೆಲೆಬ್ರಿಟಿಗಳಿಗೆ ಬಾಡಿಗೆಗೆ ನೀಡುತ್ತಿದ್ದ ಟ್ರಾವೆಲ್ಸ್ ಮಾಲೀಕರಿಗೆ ಶಾಕ್​ ನೀಡಲಾಗಿದೆ. 50 ಲಕ್ಷ ರೂ ದಂಡವನ್ನು ವಸೂಲಿ ಮಾಡಲಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಾರ್ಯಚರಣೆ ಮಾಡಲಾಗಿದೆ.

ವೈಟ್​ ಬೋರ್ಡ್​​ ಟ್ರಾವೆಲ್ಸ್​​ ಮಾಲೀಕರಿಗೆ ಸಾರಿಗೆ ಇಲಾಖೆ ಶಾಕ್​: ಐಷಾರಾಮಿ 25 ಕಾರುಗಳು ಸೀಜ್​
ವೈಟ್​ ಬೋರ್ಡ್​​ ಟ್ರಾವೆಲ್ಸ್​​ ಮಾಲೀಕರಿಗೆ ಸಾರಿಗೆ ಇಲಾಖೆ ಶಾಕ್​: ಐಷಾರಾಮಿ 25 ಕಾರುಗಳು ಸೀಜ್​
Follow us on

ಬೆಂಗಳೂರು, ಡಿಸೆಂಬರ್​ 18: ಟ್ರಾವೆಲ್ಸ್ ಮಾಲೀಕರು ಐಷಾರಾಮಿ ವೈಟ್ ಬೋರ್ಡ್ ಕಾರುಗಳನ್ನು (White board cars) ಸೆಲೆಬ್ರಿಟಿಗಳಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಇದರಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. ಹಾಗಾಗಿ ಸಾರಿಗೆ ಇಲಾಖೆ ಆ ಕಾರುಗಳನ್ನು ಸೀಜ್ ಮಾಡುವ ಮೂಲಕ ಟ್ರಾವೆಲ್ಸ್ ಮಾಲೀಕರಿಗೆ ಶಾಕ್​ ನೀಡಿದೆ.

ನಗರದಲ್ಲಿ ಇಂದು ಸಾರಿಗೆ ಇಲಾಖೆ ಬೃಹತ್​ ಕಾರ್ಯಾಚರಣೆ ಮಾಡುವ ಮೂಲಕ, ಜಾಗ್ವಾರ್, ಬಿಎಂಡಬ್ಲೂ, ರೇಂಜ್ ರೋವರ್, ಸೇರಿದಂತೆ ಕೋಟ್ಯಂತರ ರೂ. ಬೆಲೆಬಾಳುವ 25 ಐಷಾರಾಮಿ ಕಾರುಗಳನ್ನು ಆರ್​ಡಿಓ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜೊತೆಗೆ 50 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ಎಲ್ಲೆಲ್ಲಿ ಕಾರ್ಯಾಚರಣೆ?

ಯಶವಂತಪುರ, ರಾಜಾಜಿ ನಗರ, ಮತ್ತಿಕೆರೆ, ಪೀಣ್ಯ, ಮಲ್ಲೇಶ್ವರಂ ಸೇರಿದಂತೆ ಅಕ್ಕಪಕ್ಕದ ಏರಿಯಾಗಳಲ್ಲಿ ಪ್ರತಿ ತಂಡದಲ್ಲೂ ಸಾರಿಗೆ ಇಲಾಖೆಯ ಇನ್ಸ್‌ಪೆಕ್ಟರ್​​​ ಒಳಗೊಂಡಂತೆ ಒಟ್ಟು 9 ತಂಡಗಳಿಂದ ಕಾರ್ಯಾಚರಣೆ ಮಾಡಲಾಗಿದೆ.

ಇದನ್ನೂ ಓದಿ: ನಿಯಮ ಉಲ್ಲಂಘಿಸುವ ಮಾಲೀಕರಿಗೆ ಆರ್​​ಟಿಒ ಶಾಕ್: ಔಡಿ, ಹುಂಡೈ ಸೇರಿ 50 ಕಾರು ಸೀಜ್, 25 ಲಕ್ಷ ರೂ. ವಸೂಲಿ

ಟ್ರಾವೆಲ್ಸ್ ಮಾಲೀಕರು ಔಡಿ, ಬಿಎಂಡಬ್ಲೂ, ಬೆನ್ಜ್, ವೋಲ್ವೋ ಸೇರಿದಂತೆ ಸಾಕಷ್ಟು ಐಷಾರಾಮಿ ವೈಟ್ ಬೋರ್ಡ್ ಕಾರುಗಳನ್ನು ಸೆಲೆಬ್ರಿಟಿಗಳಿಗೆ ಯೆಲ್ಲೋ ಬೋರ್ಡ್ ರೀತಿಯಲ್ಲಿ ಬಾಡಿಗೆಗೆ ನೀಡುತ್ತಿದ್ದಾರೆ. ನಿಯಮದ ಪ್ರಕಾರ ವೈಟ್ ಬೋರ್ಡ್ ಕಾರು ಇರುವುದು ಸ್ವಂತ ಬಳಕೆಗೆ. ಆದರೆ, ವೈಟ್ ಬೋರ್ಡ್ ಐಷಾರಾಮಿ ಕಾರುಗಳನ್ನು ದೊಡ್ಡ ಸಿನಿಮಾ ನಟರು ಸೇರಿದಂತೆ ಸೆಲೆಬ್ರಿಟಿಗಳಿಗೆ ಬಾಡಿಗೆ ನೀಡಲು ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. ಹಾಗಾಗಿ ಇಂದು ಆ ಕಾರುಗಳನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ವಾಹನ ಮಾಲೀಕರಿಗೆ ಬಿಗ್ ರಿಲೀಫ್: ಹೆಚ್​ಎಸ್​ಆರ್​ಪಿ ಅಳವಡಿಸದ ವಾಹನ ಮಾಲೀಕರ ಮೇಲೆ ಸದ್ಯಕ್ಕಿಲ್ಲ ಕ್ರಮ

ಇನ್ನು ಈ ವೇಳೆ ತೆರಿಗೆ ಕಟ್ಟದ, ವೈಟ್ ಬೋರ್ಡ್​​ನಲ್ಲಿ ಬೇರೆ ಬೇರೆ ರಾಜ್ಯದ ವಾಹನಗಳು ಅನಧಿಕೃತವಾಗಿ ಬೆಂಗಳೂರಿನಲ್ಲಿ ಸಂಚಾರ ‌ಮಾಡುತ್ತಿರುವ ಮತ್ತು ಟ್ರಾವೆಲ್ಸ್ ನಡೆಸುತ್ತಿರುವ ವೈಟ್ ಬೋರ್ಡ್ ಕಾರುಗಳನ್ನು ಸೀಜ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.