AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್ ಇನ್ವೆಸ್ಟ್​ಮೆಂಟ್ ಮಾಡುವ ಮುನ್ನ ಎಚ್ಚರ ಎಚ್ಚರ..ಬೆಂಗಳೂರಿನಲ್ಲಿ ನಕಲಿ ಗ್ಯಾಂಗ್​ ಪತ್ತೆ

ಬಂಡಲ್ ಗಟ್ಟಲೇ ಬ್ಯಾಂಕ್ ಪಾಸ್ ಬುಕ್​ಗಳು, ರಾಶಿಗಟ್ಟಲೇ ಚೆಕ್ ಬುಕ್ ಗಳು. ಎಟಿಎಂ ಕಾರ್ಡ್​ಗಳು, ಅಷ್ಟಲ್ಲದೇ ನೂರಾರು ಸಿಮ್ ಕಾರ್ಡ್ ಗಳು, ರಬ್ಬರ್ ಸ್ಟ್ಯಾಂಪ್ ಗಳನ್ನು ಇಟ್ಟುಕೊಂಡು ಸೈಬರ್ ಖದೀಮರು ಅಮಾಯಕ ಜನರನ್ನ ವಂಚಿಸುತ್ತಿದ್ದರು. ಇಂತ ದೊಡ್ಡ ಜಾಲವನ್ನ ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಪೊಲೀಸರು ಬೇಧಿಸಿದ್ದು, 10 ಆರೋಪಿಗಳನ್ನ ಬಂಧಿಸಿದ್ದಾರೆ. ಅಷ್ಟಕ್ಕೂ ಈ ಖದೀಮರು ಅದೇಗೆ ವಂಚನೆ ಮಾಡುತ್ತಿದ್ದರು ಎನ್ನುವುದು ಇಲ್ಲಿದೆ ನೋಡಿ.

ಆನ್​ಲೈನ್ ಇನ್ವೆಸ್ಟ್​ಮೆಂಟ್ ಮಾಡುವ ಮುನ್ನ ಎಚ್ಚರ ಎಚ್ಚರ..ಬೆಂಗಳೂರಿನಲ್ಲಿ ನಕಲಿ ಗ್ಯಾಂಗ್​ ಪತ್ತೆ
Online Investment
ರಮೇಶ್ ಬಿ. ಜವಳಗೇರಾ
|

Updated on: Dec 17, 2024 | 9:35 PM

Share

ಬೆಂಗಳೂರು, (ಡಿಸೆಂಬರ್ 17): ನಿಮಗೆ ಸೋಷಿಯಲ್ ಮೀಡಿಯಾದಲ್ಲಿ ಇನ್ವೆಸ್ಟ್ ಮೆಂಟ್ ಆ್ಯಡ್ ಬರ್ತಿದ್ರೆ ಹುಷಾರಾಗಿರಿ. ಯಾಕೆಂದ್ರೆ ಇಲ್ಲೋಂದು ಟೀಂ ಫೇಕ್ ಆ್ಯಡ್ ಗಳನ್ನ ಕೊಟ್ಟು ಅಮಾಯಕರಿಗೆ ಲಕ್ಷಾಂತರ ರೂ. ಟೋಪಿ ಹಾಕಿತ್ತು. ಬೆಂಗಳೂರಿನವರೇ ಆದ ಆರೋಪಿಗಳು ಬೆಂಗಳೂರಿನ ವ್ಯಕ್ತಿಗೆ 88 ಲಕ್ಷ ರೂ. ವಂಚಿಸಿ ಸೈಬರ್ ಪೊಲೀಸರು ಬಲೆಗೆ ಬಿದ್ದಿದ್ದಾರೆ. ಶ್ರೀನಿವಾಸ್ ರೆಡ್ಡಿ, ಆಕಾಶ್, ಪ್ರಕಾಶ್, ಸುನೀಲ್ ಕುಮಾರ್, ಸಾಯಿ ಪ್ರಜ್ವಲ್, ರವಿಶಂಕರ್, ಮಧುಸೂಧನ್ ರೆಡ್ಡಿ, ಸುರೇಶ್, ಕಿಶೋರ್ ಕುಮಾರ್, ಓಬಲ್ ರೆಡ್ಡಿ ಬಂಧಿತ ಆರೋಪಿಗಳು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವ್ಯಕ್ತಿಗೆ 88 ಲಕ್ಷ ರೂ. ವಂಚನೆ ಮಾಡಿದ್ದ ಸೈಬರ್ ಕದೀಮರು ನಂತರ ಫೋನ್ ಸ್ವಿಚ್ಡ್ ಆಫ್ ಮಾಡಿ ನಾಪತ್ತೆ ಆಗುತ್ತಿದ್ದರು. ತನಿಖೆ ಕೈಗೊಂಡ ಪೊಲೀಸರು ಹಣ ವರ್ಗಾವಣೆ ಮಾಡಿದ್ದ ವಿವಿಧ ಖಾತೆಗಳ ಖಾತೆದಾರರ ಮಾಹಿತಿ ಸಂಗ್ರಹ ಮಾಡಿದಾಗ ಅದು ಯಶವಂತಪುರದಲ್ಲಿದ್ದ 10 ಆರೋಪಿಗಳಿಗೆ ಸಂಬಂಧಪಟ್ಟಿದ್ದು ಎಂದು ಗೊತ್ತಾಗಿದೆ. ಕೂಡಲೇ ಕಾರ್ಯಚರಣೆಗಿಳಿದ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಸೈಬರ್​ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು

ಬಳಿಕ ಆರೋಪಿಗಳಿಗೆ ಸಂಬಂಧಪಟ್ಟ ತ್ಯಾಗರಾಜ‌ನಗರ, ಸದಾಶಿವನಗರದ ಕಚೇರಿಗಳ ಮೇಲೆ ದಾಳಿ‌ ಮಾಡಿದಾಗ 51 ಮೊಬೈಲ್ಸ್, 2 ಲ್ಯಾಪ್ ಟಾಪ್, 2 CPU, 108 ಪಾಸ್ ಬುಕ್ ಗಳು ಮತ್ತು ಚೆಕ್ ಬುಕ್ ಗಳು, 480 ಸಿಮ್ ಕಾರ್ಡ್ ಗಳು, 27 ಎಟಿಎಂ ಕಾರ್ಡ್ ಗಳು, 42 ರಬ್ಬರ್ ಸ್ಟಾಂಪ್, 103 ಉದ್ಯಮ್ ಮತ್ತು ಜಿಎಸ್ ಟಿ ದಾಖಲೆಗಳು, 230 ಕರೆಂಟ್ ಅಕೌಂಟ್ ದಾಖಲಾತಿಗಳು ಸಿಕ್ಕಿವೆ.

ಹೇಗೆ ಮೋಸ ಮಾಡುತ್ತಿದ್ರು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಇನ್ವೆಸ್ಟ್​ಮೆಂಟ್ ಬಗ್ಗೆ ಜಾಹೀರಾತು ನೀಡುತ್ತಿದ್ದರು. ಮಾರ್ಕೆಂಟಿಂಗ್ ಲಿಂಕ್ ಕ್ಲಿಕ್ ಮಾಡಿದವರು ವಾಟ್ಸ್​ಪ್ ಗ್ರೂಪ್ ಸೇರುತ್ತಿದ್ದರು. ಬಳಿಕ Brandy Speed ಆ್ಯಪ್ ಇನ್ಸ್ಟಾಲ್ ಮಾಡಲು ಪುಸಲಾಯಿಸುತ್ತಿದ್ದರು. ಆ್ಯಪ್ ಇನ್ಸ್ಟಾಲ್ ಮಾಡಿದವರಿಗೆ ಹಣ ಡಬಲ್ ಮಾಡಿಕೊಡುವ ಆಮೀಷವೊಡ್ಡುತ್ತಿದ್ದರು. ಕಳ್ಳರ ಮಾತು ನಂಬಿ ಸಾರ್ವಜನಿಕರು ವಿವಿಧ ಖಾತೆಗಳಿಗೆ ಹಣ ಹಾಕುತ್ತಿದ್ದರು. ಬಳಿಕ ಹಾಕಿರೋ ಹಣವಾಗಲಿ ಲಾಭದ ಹಣವಾಗಲಿ ವಾಪಸ್ ಬರುತ್ತಿರಲಿಲ್ಲ. ಇದರಿಂದ ಮೋಸ ಹೋಗಿದ್ದೇವೆ ಎಂದು ಜನರಿಗೆ ಅರಿವಾಗುತ್ತಿತ್ತು.

ಇನ್ನೂ ಈ 10 ಆರೋಪಿಗಳಲ್ಲಿ ಕೆಲವರು ಅಕೌಂಟ್ ಹೋಲ್ಡರ್ ಆಗಿದ್ರೆ, ಇನ್ನು ಕೆಲವರು ಏಜೆಂಟ್ ಗಳಾಗಿದ್ದಾರೆ. ಇವರೆಲ್ಲ ದುಬೈನಲ್ಲಿ ಕೂತು ಸೈಬರ್ ವಂಚನೆ ಜಾಲ ಆಪರೇಟ್ ಮಾಡೋ ಕಿಂಗ್ ಪಿನ್ ಗಳಿಗೆ ಸಹಾಯ ಮಾಡ್ತಿದ್ರು ಅನ್ನೋ ವಿಚಾರವೂ ಗೊತ್ತಾಗಿದ್ದು, ದುಬೈನಲ್ಲಿರೋ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಸದ್ಯ ಆರೋಪಿಗಳ ಅಕೌಂಟ್ ಗಳಿಗೆ ಸಂಬಂಧಿಸಿದಂತೆ ಎನ್ ಸಿಆರ್ ಪೋರ್ಟನಲ್ಲಿ 1467 ದೂರುಗಳು ದಾಖಲಾಗಿರೋದು ಪತ್ತೆಯಾಗಿದೆ. ಉತ್ತರ ವಿಭಾಗ ಸೈಬರ್ ಪೊಲೀಸರು ತನಿಖೆ ಮುಂದುವರಿಸಿದ್ದು ಸೈಬರ್ ಜಾಲದ ಮತ್ತಷ್ಟು ರಹಸ್ಯ ಹೊರತೆಗೆಯಲು ಮುಂದಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವರದಿ: ಪ್ರದೀಪ್ ಚಿಕ್ಕಾಟಿ. Tv9, ಬೆಂಗಳೂರು

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ