ಸೆಂಟ್ರಲ್ ಜೈಲಿಂದ ಹೊರಬಂದ ಪವಿತ್ರಾ ಗೌಡ ಮಾಧ್ಯಮದವರೊಂದಿಗೆ ಮಾತಾಡಲು ನಿರಾಕರಿಸಿದರು

ಸೆಂಟ್ರಲ್ ಜೈಲಿಂದ ಹೊರಬಂದ ಪವಿತ್ರಾ ಗೌಡ ಮಾಧ್ಯಮದವರೊಂದಿಗೆ ಮಾತಾಡಲು ನಿರಾಕರಿಸಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 17, 2024 | 11:48 AM

ಜೈಲಿನಿಂದ ಹೊರಬಂದ ಬಳಿಕ ಪವಿತ್ರಾ ಆವರಣದಲ್ಲೇ ಇದ್ದ ಮುನೇಶ್ವರ ದೇವಲಾಯಕ್ಕೆ ಕೈಮುಗಿದರು. ಅರ್ ಅರ್ ನಗರದಲ್ಲಿರುವ ಪವಿತ್ರಾ ವಾಸಮಾಡುವ ಮನೆಯನ್ನು ಹಬ್ಬ ಹರಿದಿನಗಳಲ್ಲಿನ ಹಾಗೆ ಸಿಂಗರಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಹೊರತುಪಡಿಸಿ ಉಳಿದವರಿಗೆಲ್ಲ ಜಾಮೀನು ಸಿಕ್ಕಿದೆ. ಚಿತ್ರನಟ ದರ್ಶನ್ ಬೆನ್ನುನೋವಿನ ಚಿಕಿತ್ಸೆಗೋಸ್ಕರ ಮಧ್ಯಂತರ ಜಾಮೀನು ಪಡೆದಿದ್ದರು.

ಆನೇಕಲ್ (ಬೆಂಗಳೂರು): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ ವನ್ ಆಗಿರುವ ಪವಿತ್ರಾ ಗೌಡ ಅವರಿಗೆ ಜಾಮೀನು ಮಂಜೂರಾಗಿರುವ ವಿಷಯ ಹಳೇದು. ಹೊಸ ಸುದ್ದಿಯೆಂದರೆ ಇವತ್ತು ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿಂದ ಬಿಡುಗಡೆ ಮಾಡಲಾಯಿತು. ಪವಿತ್ರಾ ತಮ್ಮ ತಾಯಿ ಮತ್ತು ಇತರ ಸಂಬಂಧಿಕರೊಂದಿಗೆ ಜೈಲಿನ ಅವರಣದಿಂದ ಆಚೆ ಬರುತ್ತಿರುವುದನ್ನು ನೋಡಬಹುದು. ಮಾಧ್ಯಮದವರ ಕೆಮೆರಾಗಳು ಹತ್ತಿರ ಬಂದಾಗ ಪವಿತ್ರಾ ತಾಯಿ ಮತ್ತು ಇತರರು ಅವರನ್ನು ಮುಚ್ಚುವ ಪ್ರಯತ್ನ ಮಾಡುತ್ತಾರೆ. ಮಾಧ್ಯಮದವರೊಂದಿಗೆ ಪವಿತ್ರಾ ಮಾತಾಡಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಜಾಮೀನು ಸಿಕ್ಕಿದ್ದಕ್ಕೆ ಜೈಲಿನಲ್ಲಿ ಪವಿತ್ರಾ ಗೌಡ ಆನಂದಭಾಷ್ಪ