ಬೆಂಗಳೂರು ಗ್ರಾಮಾಂತರ, ಜು.30: ಮಹಾನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಇತ್ತೀಚೆಗೆ ಓರ್ವ ಕಳ್ಳ ಮನೆಯಲ್ಲಿ ಯಾರು ಇಲ್ಲದ್ದನ್ನು ಖಚಿತ ಪಡಿಸಿಕೊಂಡು ಮನೆಗೆ ಕನ್ನ ಹಾಕಿ, ಪೊಲೀಸ್ ಬಲೆಗೆ ಬಿದ್ದಿದ್ದ. ಇಂತಹ ಅನೇಕ ಪ್ರಕರಣಗಳು ದಿನನಿತ್ಯ ಬೆಳಕಿಗೆ ಬರುತ್ತಿದೆ. ಅದರಂತೆ ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ಬಾಗಲಗುಂಟೆ ಬಳಿಯ ಮಂಜುನಾಥನಗರದ ವಿನಾಯಕ್ ಸಿಂಧೆ ಎಂಬುವರ ಮನೆಯಲ್ಲಿ 15 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ. ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೌದು, ವಿನಾಯಕ್ ಸಿಂಧೆ ಅವರು ತಮ್ಮ ಮದುವೆಯಲ್ಲಿ ಖರೀದಿಸಿದ್ದ ಚಿನ್ನಾಭರಣಗಳು ಇದಾಗಿತ್ತು. 15 ದಿನದ ಹಿಂದೆ ವಿನಾಯಕ್ ಅವರ ಪತ್ನಿ ತವರು ಮನೆಗೆ ಹೋಗಿದ್ದರು. ಇತ್ತ ವಿನಾಯಕ್ ಕೂಡ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಯಾರೂ ಇಲ್ಲದನ್ನು ನೋಡಿದ್ದ ಕಳ್ಳ, ಮನೆಯ ಕಿಟಕಿ ಮುರಿದು ಒಳಗೆ ನುಗ್ಗಿ ಚಿನ್ನದ ಬಳೆ, ಮಾಂಗಲ್ಯ, ಉಂಗುರು, ಓಲೆಗಳು, ನೆಕ್ಲೆಸ್, 1 ಡೈಮಂಡ್ ಎಗರಿಸಿದ್ದಾನೆ.
ಬೆಂಗಳೂರು ಗ್ರಾಮಾಂತರ: ಕೆವೈಸಿ ಅಪ್ಡೇಟ್ ಮಾಡಬೇಕು ಇಲ್ಲವಾದ್ರೆ, ಯಾವ ಸೌಲಭ್ಯಗಳು ನಿಮಗೆ ದೊರಕುವುದಿಲ್ಲವೆಂದು ವೃದ್ದೆಗೆ ಕರೆ ಮಾಡಿ OTP ಪಡೆದು ವಂಚನೆ ಮಾಡಿದ ಘಟನೆ ನಡೆದಿದೆ. ಹೌದು, ನೆಲಮಂಗಲದ ದೊಡ್ಡಬಿದರಕಲ್ಲುವಿನಲ್ಲಿರುವ ಜಯಮ್ಮ ಎಂಬ 65ವರ್ಷದ ವೃದ್ದೆಯ ಪಿಂಚಣಿ ಅಕೌಂಟ್ನಲ್ಲಿದ್ದ 6 ಸಾವಿರ ರೂಪಾಯಿಗಳನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ. ಈ ಘಟನೆ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ವೃದ್ದೆ ಜಯಮ್ಮ ದೂರು ದಾಖಲು ಮಾಡಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ