AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರಿನ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ; ಕಳ್ಳ ದಾರಿಯಲ್ಲಿ ಮುಳ್ಳಯ್ಯನಗಿರಿಗೆ ಹೊರಟಿದ್ದ ಪ್ರವಾಸಿಗರಿಗೆ ಶಾಕ್ ನೀಡಿದ ಜಿಲ್ಲಾಡಳಿತ

ಕಾಫಿನಾಡಿನ ಜಿಲ್ಲಾಡಳಿತಕ್ಕೆ ಪ್ರವಾಸಿಗರದ್ದೆ ದೊಡ್ಡ ತಲೆ ಬಿಸಿಯಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಧಾರಾಕಾರ ಮಳೆ ಸುರಿತಾಯಿದ್ದು, ರಸ್ತೆ ಕುಸಿತವಾಗಿದೆ. ಈ ಹಿನ್ನಲೆ ಪ್ರವಾಸ ಮುಂದೂಡಿ ಎಂದು ಮನವಿ ಮಾಡಿದ್ರು, ಜಿಲ್ಲಾಡಳಿತದ ಮಾತಿಗೆ ಪ್ರವಾಸಿಗರು ಡೋಂಟ್ ಕೇರ್ ಅಂದಿದ್ದಾರೆ. ಅದರಂತೆ ಮಾತು ಕೇಳದೆ ವೀಕೆಂಡ್ ಮಸ್ತಿಗೆ ಬಂದಿದ್ದ ಪ್ರವಾಸಿಗರಿಗೆ ನಿರ್ಬಂಧದ ಶಾಕ್ ಎದುರಾಗಿದೆ.

ಚಿಕ್ಕಮಗಳೂರಿನ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ; ಕಳ್ಳ ದಾರಿಯಲ್ಲಿ ಮುಳ್ಳಯ್ಯನಗಿರಿಗೆ ಹೊರಟಿದ್ದ ಪ್ರವಾಸಿಗರಿಗೆ ಶಾಕ್ ನೀಡಿದ ಜಿಲ್ಲಾಡಳಿತ
ಚಿಕ್ಕಮಗಳೂರು ಪ್ರವಾಸಿ ತಾಣಗಳು ಬಂದ್​
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jul 30, 2023 | 6:57 AM

Share

ಚಿಕ್ಕಮಗಳೂರು, ಜು.30: ಕಾಫಿನಾಡು ಚಿಕ್ಕಮಗಳೂರಿನ(Chikkamagalur) ಪ್ರಸಿದ್ಧ ಪ್ರವಾಸಿ ತಾಣಗಳಿರುವ ಚಂದ್ರದ್ರೋಣ ಪರ್ವತ (Chandradrona Parvata)ದ ಸಾಲಿನಲ್ಲಿ ಧಾರಾಕಾರವಾಗಿ ಮಳೆ‌ ಸುರಿಯುತ್ತಿದೆ. ಮಳೆ‌ ಸುರಿಯುತ್ತಿರುವ ರಭಸಕ್ಕೆ ಗುಡ್ಡದ ಮಣ್ಣು ಕಲ್ಲುಗಳು ರಸ್ತೆಗ ಅಡ್ಡಲಾಗಿ ಬೀಳುತ್ತಿದ್ದು. ಮಳೆ‌ ಕಡಿಮೆಯಾಗುವವರೆಗೂ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಪ್ರವಾಸಕ್ಕೆ ಬರದಂತೆ ಚಿಕ್ಕಮಗಳೂರು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಪ್ರವಾಸಿಗರ ಬಳಿ ಮನವಿ ಮಾಡಿತ್ತು. ಜೊತೆಗೆ ಚಂದ್ರದ್ರೋಣ ಪರ್ವತದ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ತೆರಳುವ ಮಾರ್ಗ ಮದ್ಯದ ಕೈಮರ ಚೆಕ್​ ಫೋಸ್ಟ್​ ಬಳಿ ಅಡ್ಡಲಾಗಿ ಗೇಟ್ ಹಾಕಿ ಪ್ರವಾಸಿಗರನ್ನ ನಿರ್ಬಂಧಿಸಿತ್ತು. ಆದರೂ ಮಾತು ಕೇಳದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ವೀಕೆಂಡ್ ಮೋಜು ಮಸ್ತಿಗೆ ಕಳ್ಳದಾರಿಯಿಂದ ಬಂದಿದ್ದರು.

ಕಳ್ಳ ದಾರಿಯಿಂದ ಬಂದಿದ್ದ ಪ್ರವಾಸಿಗರು

ಕೈಮರ ಚೆಕ್​ ಫೋಸ್ಟ್ ಬಳಿ ಗೇಟ್ ಹಾಕಿ ಪ್ರವಾಸಿಗರನ್ನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ದತ್ತಪೀಠ, ಮುಳ್ಳಯ್ಯನಗಿರಿಗೆ ನಿರ್ಬಂಧಿಸಿದ್ರೆ, ಇತ್ತ ಪ್ರವಾಸಿಗರು ಅಡ್ಡದಾರಿ ಹಿಡಿದು ಮುಂಜಾನೆ ನಾಲ್ಕು ಗಂಟೆಗೆ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಕ್ಕೆ ನೂರಾರು ವಾಹನಗಳಲ್ಲಿ ತೆರಳಿದ್ದರು. ಮಾಹಿತಿ ತಿಳಿದ ಪೊಲೀಸರು. ಮುಳ್ಳಯ್ಯನಗಿರಿ ಪ್ರಮುಖ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಪ್ರವಾಸಿಗರನ್ನ ವಾಪಸ್ ಕಳಿಸಿದ್ದಾರೆ.

ಇದನ್ನೂ ಓದಿ:ಇಂದಿನಿಂದ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಚಂದ್ರದ್ರೋಣ ಪರ್ವತದಲ್ಲಿ ಸುರಿಯುತ್ತಿರುವ ಮಳೆಗೆ, ಅನಾಹುತಗಳ ಸರಮಾಲೆಗಳ ಸೃಷ್ಟಿಯಾಗಿದೆ. ಇದರಿಂದ ಮುಳ್ಳಯ್ಯನಗಿರಿ ತೆರಳುವ ಮಾರ್ಗದ ಮೊದಲ ತಿರುವಿನಲ್ಲಿ ಗುಡ್ಡ ಕುಸಿತವಾಗಿದೆ. ಜಿಲ್ಲಾಡಳಿತ ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವಾಸಕ್ಕೆ ಬರದಂತೆ ಮನವಿ ಮಾಡಿದ್ರು, ಪ್ರವಾಸಿಗರು ಕೇಳುತ್ತಿಲ್ಲ. ಒಟ್ಟಿನಲ್ಲಿ ಪ್ರವಾಸಿಗರಿಗೆ ಜಿಲ್ಲಾಡಳಿತದ ಕಾಳಜಿಗಿಂತ ವೀಕೆಂಡ್ ಮೋಜು ಮಸ್ತಿ ಮುಖ್ಯವಾದಂತೆ ಕಾಣಿಸುತ್ತಿದ್ದು. ಚಿಕ್ಕಮಗಳೂರು ಜಿಲ್ಲಾಡಳಿತ ಮನವಿ ಮಾಡಿದ್ರು ಕೇಳುತ್ತಿಲ್ಲ. ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ಅವಾಂತರ ಸೃಷ್ಟಿ ಮಾಡಿದ್ರೆ.‌ ಇತ್ತ ಪ್ರವಾಸಿಗರ ಅವಾಂತರಗಳು ಚಿಕ್ಕಮಗಳೂರು ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ತಲೆಬಿಸಿ ತರಿಸಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ