ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ದುರ್ಮರಣ, ಮಗಳ ರಕ್ಷಣೆಗೆ ಹೋದ ದಂಪತಿ ದುರಂತ ಅಂತ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Mar 03, 2024 | 5:24 PM

ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಗಳ ರಕ್ಷಣೆಗೆ ಹೋದ ದಂಪತಿ ದುರಂತ ಅಂತ್ಯಕಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ.

ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರ ದುರ್ಮರಣ, ಮಗಳ ರಕ್ಷಣೆಗೆ ಹೋದ ದಂಪತಿ ದುರಂತ ಅಂತ್ಯ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, (ಮಾರ್ಚ್​ 01): ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural)  ಜಿಲ್ಲೆ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಮರಿಯಪ್ಪ ( 70 ) ಮುನಿಯಮ್ಮ ( 60 ) ಮತ್ತು ಭಾರತಿ ( 40 ) ಮೃತ ದುರ್ದೈವಿಗಳು. ಊಟ ಮಾಡಿ ಕೈ ತೊಳೆಯಲು ಹೋದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬುದ್ದಿಮಾಂದ್ಯಳಾಗಿದ್ದ ಮಗಳು ಭಾರತಿ ಕೈ ತೊಳೆಯಲು ಹೋಗಿ ನೀರಿಗೆ ಬಿದ್ದಿದ್ದಾಳೆ. ಬಳಿಕ ಮಗಳ ರಕ್ಷಣೆ ಮಾಡಲು ಹೋಗಿ ಮುನಿಯಮ್ಮ ಮತ್ತು ಮರಿಯಪ್ಪ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನು ಈ ಬಗ್ಗೆ ಹೊಸಕೋಟೆ ಪೊಲೀಸರು ತನಿಖೆ ನಡೆಸಿದ್ದಾರೆ.

ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವು

ಉಡುಪಿ: ಸ್ಕೂಟರ್ ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾಪು ತಾಲೂಕಿನ ಉದ್ಯಾವರ ಸಮೀಪ ಈ ದುರ್ಘಟನೆ ನಡೆದಿದ್ದು, ಮುಫ್ರೀನ್(18) ಮೃತ ಯುವಕ. ಇನ್ನು ಘಟನೆಯಲ್ಲಿ ಮೃತ ಯುವಕನ ತಾಯಿ ಹಾಜಿರಾ ಎಂಬುವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಮಹಿಳೆಯ ಕಾಲಿನ ಮೇಲೆ ಹತ್ತಿದ ಸಾರಿಗೆ ಬಸ್;ಸಿಸಿಟಿವಿಯಲ್ಲಿ ಸೆರೆ ಆಯ್ತು ಡೆಡ್ಲಿ ಆಕ್ಸಿಡೆಂಟ್ ದೃಶ್ಯ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ