ಬೆಂಗಳೂರು ವಿಮಾನ ನಿಲ್ದಾಣದಲ್ಲಿ 40 ಕೋಟಿ ರೂ. ಮೌಲ್ಯದ ಕೊಕೇನ್​ ಜಪ್ತಿ

ದೋಹಾದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಬಳಿ 40 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಕೊಕೇನ್ ಪತ್ತೆಯಾಗಿದೆ. ಕಾಮಿಕ್ಸ್ ಪುಸ್ತಕಗಳಲ್ಲಿ ಅಡಗಿಸಿಟ್ಟಿದ್ದ ಈ ಕೊಕೇನ್ ಅನ್ನು ಡಿಆರ್​​ಐ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಯಾಣಿಕನನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 40 ಕೋಟಿ ರೂ. ಮೌಲ್ಯದ ಕೊಕೇನ್​ ಜಪ್ತಿ
ಪತ್ತೆಯಾದ ಕೊಕೇನ್
Edited By:

Updated on: Jul 19, 2025 | 5:09 PM

ಬೆಂಗಳೂರು, ಜುಲೈ 19: ದೋಹಾ (ಕತಾರ್​) ದಿಂದ ಬೆಂಗಳೂರಿನ (Bengaluru) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda Internatioanl Airport) ಬಂದಿಳಿದ್ದ ಭಾರತ ಮೂಲದ ಪ್ರಯಾಣಿಕನ ಬಳಿ ಇದ್ದ 40 ಕೋಟಿ ರೂಪಾಯಿ ಮೌಲ್ಯದ ಕೊಕೇನ್​ (Cocaine) ಅನ್ನು ಡಿಆರ್‌ಐ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಯಾಣಿಕನ ಬ್ಯಾಗೇಜ್ ತಪಾಸಣೆ ವೇಳೆ ಎರಡು ಕಾಮಿಕ್ಸ್ ಪುಸ್ತಕ ಪತ್ತೆಯಾದವು. ಕಾಮಿಕ್ಸ್ ಪುಸ್ತಕಗಳ ಕವರ್ ಮೇಲೆ ಸೀಲ್ ಮಾಡಿದ ರೀತಿಯಲ್ಲಿದ್ದ 40 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಕೊಕೇನ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ಡಿಆರ್​ಐ ಅಧಿಕರಿಗಳು ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಯಾಣಿಕನನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಪ್ರಯಾಣಿಕನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಪಬ್​ಗಳಲ್ಲಿ ಸಿಕ್ಕಿಬಿದ್ದ ವಿದೇಶಿ ಡ್ರಗ್​ ಪೆಡ್ಲರ್​ಗಳು

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಧಿಕಾರಿಗಳು ಮತ್ತು ಸಿಸಿಬಿ ಪೊಲೀಸರು ಜಂಟಿಯಾಗಿ ಇತ್ತೀಚಿಗೆ ಬೆಂಗಳೂರಿನ ಪಬ್​ಗಳ ಮೇಲೆ ದಾಳಿ ನಡೆಸಿ ವಿದೇಶಿ ಡ್ರಗ್​​ ಪೆಡ್ಲರ್​ಗಳನ್ನು ಬಂಧಸಿದ್ದರು. ಎಫ್​ಆರ್​ಆರ್​ಒ ಮತ್ತು ಸಿಸಿಬಿ ಅಧಿಕಾರಿಗಳು ಜಂಟಿಯಾಗಿ ಜುಲೈ 12 ರಂದು ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಮಿರಾಜ್ ಪಬ್ ಮತ್ತು ಕೋರಮಂಗಲದಲ್ಲಿರುವ ಸನ್​ಬರ್ನ್ ಪಬ್ ಮೇಲೆ ದಾಳಿ ಮಾಡಿ ವಿದೇಶಿ ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಮತ್ತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.

ಓದಲು ಬಂದವಳು ಪೆಡ್ಲರ್ ಆದಳು

ವಿದೇಶದಿಂದ ಭಾರತಕ್ಕೆ ಓದಲು ಬಂದಿದ್ದ ಪ್ರಿನ್ಸಸ್ ಎಂಬ ವಿದೇಶಿ ಮಹಿಳೆ ಬೆಂಗಳೂರಿನಲ್ಲಿ ಡ್ರಗ್​ ಪೆಡ್ಲಿಂಗ್​ ಮಾಡುತ್ತಿದ್ದಳು. ಈ ಮಾಹಿತಿ ತಿಳಿದ ಸಿಸಿಬಿ ಹಾಗೂ ಬೆಂಗಳೂರಿನ ಚಿಕ್ಕಜಾಲ ಠಾಣೆಯ ಪೊಲೀಸರು ಕಾರ್ಯಾಚರಣೆ ಡ್ರಗ್​ ಪೆಡ್ಲರ್​ ಪ್ರಿನ್ಸಸ್​​ಳನ್ನು ಬಂಧಿಸಿದ್ದರು. ಪ್ರಿನ್ಸಸ್​ ಬಳಿ ಇದ್ದ 10 ಕೋಟಿ ರೂಪಾಯಿ ಮೌಲ್ಯದ 5.325 ಕೆಜಿ ಎಂಡಿಎಂಎ ಜಪ್ತಿ ಮಾಡಿದ್ದರು.

ಇದನ್ನೂ ಓದಿ
ಸಿಎಂ ಬದಲಾವಣೆ ಚರ್ಚೆಗೆ ಸ್ವಾಮೀಜಿಗಳೂ ಎಂಟ್ರಿ
ಹೃದಯಾಘಾತ ಪ್ರಕರಣ: ಸಿಎಂ ಹೇಳಿಕೆ ಬೇಜವಾಬ್ದಾರಿ ಪರಮಾವಧಿ, ಜೋಶಿ
ಸಿದ್ದರಾಮಯ್ಯಗೆ ಹೈಕಮಾಂಡ್ ಮಹತ್ವದ ಹುದ್ದೆ: ಅಂತೆ-ಕಂತೆಗಳಿಗೆ ಸಿಎಂ ತೆರೆ
ಒಕ್ಕಲಿಗರು ಹಾಗೂ ಲಿಂಗಾಯತರು ರಾಷ್ಟ್ರಮಟ್ಟದಲ್ಲಿ ಓಬಿಸಿಗಳು:ಡಿಕೆ ಶಿವಕುಮಾರ್

ಇದನ್ನೂ ಓದಿ: ರೆಡಿಮೇಡ್ ಬಟ್ಟೆಗಳ ಪ್ಯಾಕ್​ಗಳಲ್ಲಿ ಡ್ರಗ್ಸ್ ಮಾರಾಟ! ನೈಜೀರಿಯಾ ಪ್ರಜೆಗಳಿಬ್ಬರು ಪೊಲೀಸ್ ವಶಕ್ಕೆ

ರೆಸಾರ್ಟ್, ಹೋಂ ಸ್ಟೇ ಮಾಲೀಕರಿಗೆ ಪೊಲೀಸರ ಸೂಚನೆ

ಯಾವುದೇ ಹೋಂ ಸ್ಟೇ ನಡೆಸುವವರು ಪ್ರವಾಸೋದ್ಯಮ ಇಲಾಖೆ ಸೇರಿದಂತೆ, ಪೊಲೀಸರ‌ ಅನುಮಾತಿ ಪಡೆದಿರಬೇಕು. ಪ್ರತಿನಿತ್ಯ ಬಾಡಿಗೆ ನೀಡುವವರ ಮಾಹಿತಿಯನ್ನು ಪೊಲೀಸರಿಗೆ ತಿಳಿಸಬೇಕು ಎಂದು ಸೂಚನೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳು ಪಾರ್ಟಿಯಲ್ಲಿ ನಡೆದರೆ ಮಾಲೀಕರ ವಿರುದ್ಧವೂ ಕೇಸ್ ಮಾಡಲಾಗುತ್ತದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಎಚ್ಚರಿಕೆ ನೀಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ